‘ಅರ್ಜುನ್ ಗೌಡ’ ಚಿತ್ರದ ಪ್ರಿ ರಿಲೀಸ್ ಇವೆಂಟ್ ಕಾರ್ಯಕ್ರಮದಲ್ಲಿ ಕನಸಿನ ರಾಣಿ ಮಾಲಾಶ್ರೀ ಭಾಗವಹಿಸಿದ್ದರು. ರಾಮು ನೆನಪಿಗಾಗಿ, ಅವರ ಬ್ಯಾನರ್ನಲ್ಲಿ ನಟಿಸಿದ ಕನ್ನಡದ ಎಲ್ಲಾ ನಟರೂ ಒಂದೇ ವೇದಿಕೆ ಮೇಲೆ ಸೇರಿದ್ದರು.
ಈ ವೇಳೆ ಮಾತನಾಡಿದ ಸೆಂಚುರಿ ಸ್ಟಾರ್ ಶಿವರಾಜಕುಮಾರ್ ‘ಕನ್ನಡ ಚಿತ್ರರಂಗ ಉದ್ದಾರ ಆಗಬೇಕು ಎಂದರೆ ರಾಮು ಅವರಂಥ ನಿರ್ಮಾಪಕರು ನೂರು ವರ್ಷ ಬದುಕಬೇಕಿತ್ತು. ಅವರ ನಿರ್ಮಾಣದಲ್ಲಿ ನಾನು 6 ಸಿನಿಮಾ ಮಾಡಿದ್ದೇನೆ. ಮಾಲಾಶ್ರೀ ಅವರು ಸಿನಿಮಾ ನಿರ್ಮಾಣವನ್ನು ಮುಂದುವರಿಸಬೇಕು. ನಾವು ಜೊತೆಯಲ್ಲಿ ಇರುತ್ತೇವೆ’ ಎಂದು ಹೇಳಿದರು.ಮತ್ತೊಂದು ಸಿನಿಮಾದಲ್ಲಿ ನಟಿಸುವುದಾಗಿ ವೇದಿಕೆ ಮೇಲೆನೇ ಅನೌನ್ಸ್ ಮಾಡಿದರು.
ಶಿವಣ್ಣ ರಾಮು ಬ್ಯಾನರ್ನಲ್ಲಿ ನಟಿಸಲಿರುವ 7ನೇ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದರು. “ರಾಮು ಪ್ರೊಡಕ್ಷನ್ನಲ್ಲಿ ನಾನು 6 ಸಿನಿಮಾ ಮಾಡಿದ್ದೀನಿ. ನಿಮ್ಮ ಪ್ರೊಡಕ್ಷನ್ ಅನ್ನು ನಿಲ್ಲಸಬೇಡಿ. ಇದೇ ಕೊನೆಯ ಸಿನಿಮಾ ಅಂತ ಹೇಳಬೇಡಿ. ನೀವು ಮುಂದುವರೆಸಿ, ನಾವೆಲ್ಲರೂ ನಿಮ್ಮ ಜೊತೆಯಲ್ಲಿ ಇದ್ದೀವಿ. ಸಿಂಹ ನಿಮ್ಮ ಬ್ಯಾನರ್ನಲ್ಲಿಯೇ ಮಾಡೋಣ. ನಾನು ಖಂಡಿತಾ ಮಾಡುತ್ತೇನೆ. ಇದು ನಾನು ಮಾಡುತ್ತಿರುವ ಪ್ರಾಮಿಸ್.” ಎಂದು ಮಾಲಾಶ್ರೀಗೆ ಶಿವಣ್ಣ ಮಾತು ಕೊಟ್ಟಿದ್ದಾರೆ.
****