ಶಾಕ್ ಆಗ್ಬೇಡಿ.. ಇದು ಫೇಕ್ ನ್ಯೂಸ್ ಅಲ್ಲ, ರಿಯಲ್ ನ್ಯೂಸ್. ಸ್ಯಾಂಡಲ್ವುಡ್ನಲ್ಲಿ ಸದ್ಯ ಸಿಕ್ಕಾಪಟ್ಟೆ ಬ್ಯುಸಿಯಾಗಿರೋ ಡಿಂಪಲ್ ಕ್ವೀನ್ ರಚಿತರಾಮ್ ಜಸ್ಟ್ 10 ರೂಪಾಯಿಗೆ ಮಜಾ ಕೊಡ್ತಾರೆ ಅದು ಕೂಡ ಕೆಂಪು ಲಾಂಬೋರ್ಗಿನಿಯಾಗಿ. ಇದರ ಮೊದಲ ದರ್ಶನ ಪಡೆದಿರೋದು ರ್ಯಾಪರ್ ಚಂದನ್ ಶೆಟ್ಟಿಗೆ. ಇನ್ನೂ ಕನ್ಫ್ಯೂಷನ್ ಬೇಡ. ಚಂದನ್ ಶೆಟ್ಟಿ ಪ್ರತಿ ವರ್ಷ ನ್ಯೂ ಇಯರ್ ಟೈಮ್ಗೆ ಒಂದು ಆಲ್ಬಂ ಸಾಮಗ್ ರಿಲೀಸ್ ಮಾಡುವ ಹಾಗೆ ಈ ವರ್ಷವೂ ಒಂದು ಆಲ್ಬಂ ಸಾಂಗ್ ರಿಲೀಸ್ ಮಾಡಿದ್ದಾರೆ ಅದುವೆ ಲಕ ಲಕ ಲ್ಯಾಂಬೋರ್ಗಿನಿ. ಈ ಹಾಡಿನಲ್ಲಿ ಚಂದನ್ ಶೆಟ್ಟಿಗೆ ಜೋಡಿಯಾಗಿ ರಚ್ಚು ಸೊಂಟ ಬಳುಕಿಸಿದ್ದಾರೆ.
ಚಂದನ್ ಶೆಟ್ಟಿ ಅವ್ರೇ ಬರೆದು, ಮ್ಯೂಸಿಕ್ ಕಂಪೋಸ್ ಮಾಡಿ ಹಾಡಿರೋ ಈ ಹಾಡಿಗೆ ಶೇಖರ್ ಚಂದ್ರ ಕ್ಯಾಮರಾ ವರ್ಕ್ ಹಾಗೂ ಮುರಳಿ ಮಾಸ್ಟರ್ ಕೊರಿಯೋಗ್ರಫಿ ಇದೆ. ನಂದ ಕಿಶೋರ್ ಈ ಹಾಡನ್ನ ಡೈರೆಕ್ಟ್ ಮಾಡಿದ್ದಾರೆ. ಆಲ್ಬಂ ಸಾಂಗ್ ಗಳ ಜೊತೆಗೆ ಸಿನಿಮಾ ಮ್ಯೂಸಿಕ್ ಡೈರೆಕ್ಷನ್ನಲ್ಲೂ ಬ್ಯೂಸಿಯಗಿರೋ ಚಂದನ್ ಈ ವರ್ಷ ರಿಲೀಸ್ ಆದ ಪೊಗರು ಹಾಡುಗಳ ಮೂಲಕ ಸಿನಿಮಾದಲ್ಲೂ ತಮ್ಮ ಟ್ಯಾಲೆಂಟ್ ತೋರಿಸಿದ್ದಾರೆ. ಇನ್ನೂ ಸಾಲು ಸಾಲು ಸಿನಿಮಾಗಳನ್ನ ಥಿಯೇಟರ್ ತರ್ತಾ ಇರೋ ರಚ್ಚು, ಸಿನಿಮಾಗಳ ನಡುವೆ ಈಗ ಆಲ್ಬಂ ಸಾಂಗ್ಗೆ ಹೆಜ್ಜೆ ಹಾಕಿ ಮೈ ಜುಂ ಅನ್ನಿಸಿದ್ದಾರೆ.
