ಗಣೇಶ್ ನಟನೆಯ ‘99’ ಚಿತ್ರವನ್ನು ರಾಮು ನಿರ್ಮಾಣ ಮಾಡಿದ್ದರು. ಆ ದಿನಗಳನ್ನು ಗಣೇಶ್ ಮೆಲುಕು ಹಾಕಿದರು. ‘ನಾನು ರಾಮು ಸರ್ ಜತೆ ಹೆಚ್ಚು ಸಿನಿಮಾ ಮಾಡಿಲ್ಲ. ‘99’ ಚಿತ್ರದ ಬಗ್ಗೆ ಅವರು ನನ್ನ ಬಳಿ ಮಾತನಾಡಿದಾಗ ಈ ಚಿತ್ರ ವರ್ಕೌಟ್ ಆಗುತ್ತಾ ಅಂತ ನಾನು ಪ್ರಶ್ನೆ ಕೇಳಿದ್ದೆ. ಒಂದು ಪ್ರಯೋಗದ ರೀತಿ ಮಾಡೋಣ ಅಂತ ಅವರು ಹೇಳಿದ್ದರು.
ನಾನು ಮಾಲಾಶ್ರೀ ಮೇಡಂ ಅವರ ದೊಡ್ಡ ಫ್ಯಾನ್’, ಅವರ ಪೋಸ್ಟರ್ ಗಳನ್ನು ನೋಡ್ಕಂಡು ಸಿನಿಮಾ ಥಿಯೇಟರ್ ಒಳಗೆ ಹೋಗ್ತಿದ್ವಿ, ಮಾಲಾಶ್ರೀ ಮೇಡಂ ಮುಂದೆ ಸಿನಿಮಾಗಳನು ನಿರ್ಮಾಣ ಮಾಡಬೇಕು ಈ ವೇದಿಕೆಯಲ್ಲಿ ದಡ್ಡೊವರೆಲ್ಲಾ ಮಾತನಾಡಿದ್ದಾರೆ ನಾನು ಎಲ್ಲರಿಗಿಂತ ಚಿಕ್ಕವನು ನನ್ನ ಕೈಲಾದ ಸಹಾಯವನ್ನು ನಾನು ಮಾಡುತ್ತೇನೆ ಎಂದರು ಗಣೇಶ್.
****