ನಿರ್ದೇಶಕ ಪ್ರೇಮ್ ಸಿನಿಮಾ ಮಾಡ್ತಾರೆ ಅಂದ ತಕ್ಷಣ ಸಿನಿಮಾದ ಹಾಡುಗಳ ಬಗ್ಗೆ Extra ನಿರೀಕ್ಷೆ ಇರುತ್ತೆ. ಅದಕ್ಕೆ ತಕ್ಕಂತೆ ಸಿನಿಮಾ ರಿಲೀಸ್ಗೂ ಮೊದಲು ಸಿನಿಮಾದ ಹಾಡುಗಳನ್ನ ರಿಲೀಸ್ ಮಾಡ್ತಾರೆ, ಈ ಹಾಡುಗಳೇ ಜನರನ್ನ ಥಿಯೇಟರ್ಗೆ ಸೂಜಿಗಲ್ಲಿನಂತೆ ಸೆಳೆದು ಕೂರಿಸಿಬಿಡುತ್ತೆ.
ಒಂದು ಸಿನಿಮಾ ಪ್ರಮೋಷನ್ ಹೇಗ್ ಮಾಡ್ಬೇಕು ಅಂತ ಪ್ರೇಮ್ ಅವ್ರನ್ನ ನೋಡಿ ಕಲೀಬೇಕು ಅನ್ನುತ್ತೆ ಕನ್ನಡ ಸಿನಿಮಾ ಇಂಡಸ್ಟ್ರಿ, ಅದೇ ಥರಾ ಜನರಿಗೆ ಇಷ್ಟ ಆಗೋ ಥರಾ ಸಾಂಗ್ ಹೇಗ್ ಮಾಡ್ಬೇಕು ಅನ್ನೋದನ್ನೂ ಪ್ರೇಮ್ ಅವ್ರನ್ನೇ ನೋಡಿ ಕಲೀಬೇಕಿದೆ.
ಇಲ್ಲಿಯವರೆಗೂ ಪ್ರೇಮ್ ಡೈರೆಕ್ಟ್ ಮಾಡಿರೋ ಆಲ್ಮೋಸ್ಟ್ ಎಲ್ಲಾ ಸಿನಿಮಾಗಳು ಮ್ಯೂಸಿಕಲ್ ಹಿಟ್ ಪಿಚ್ಚರ್ಗಳೇ.ಪ್ರೇಮ್ ಜೊತೆಗೆ ಅವ್ರದ್ದೇ ಟೀಮ್ ವಿಜಯ್ ಈಶ್ವರ್, ಶರಣ್ ಕುಮಾರ ಗಜೇಂದ್ರಘಡ ಹಾಡುಗಳನ್ನ ಬರೆದಿದ್ದು, ಶೋ ಮ್ಯಾನ್ ಪ್ರೇಮ್ ಅವ್ರ ಹಾಡುಗಳಿಗೆ ಟಕ್ಕರ್ ಕೊಡುವ ರೇಂಜ್ನಲ್ಲಿವೆ.
ಅರ್ಜುನ್ ಜನ್ಯ, ಪ್ರೇಮ್ ಕಾಂಬಿನೇಷನ್ನ ಹಾಡುಗಳು ಈಗಾಗ್ಲೆ ರಿಲೀಸ್ ಆಗಿ ಅಬ್ಬರಿಸ್ತಾ ಇವೆ ಇಲ್ಲಿಯವರೆಗೂ ರಿಲೀಸ್ ಆಗಿರೋ 5 ಸಾಂಗ್ಗಳಲ್ಲಿ, ಎಲ್ಲಾ ಸಾಂಗ್ಗಳು ಸೂಪರ್ ಹಿಟ್ ಆಗಿವೆ. ಎಲ್ಲಾ ಸಾಂಗ್ಗಳು ಮಿಲಿಯನ್ ಗಟ್ಲೆ ವ್ಯೂವ್ಸ್ ಪಡೆದಿರೋದಲ್ದೆ, ಸಿನಿಮಾ ರಿಲಿಸ್ಗೂ ಮೊದಲೇ ಎಲ್ಲಾ ಹಾಡುಗಳು ಜನರ ಬಾಯಲ್ಲಿ ನಲಿದಾಡ್ತಾ ಇವೆ.
ಲಾಕ್ಡೌನ್ನಿಂದಾಗಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ರಿಲೀಸ್ ಆಗ್ತಾ ಇದ್ದು, ಎಷ್ಟೋ ಸಿನಿಮಾಗಳ ಹೆಸರೇ ಜನರ ಮನಸಲ್ಲಿ ಉಳೀತಾ ಇಲ್ಲ, ಅದ್ರೆ ಪ್ರೇಮ್ಸ್ ನಿರ್ದೇಶನ ಮಾಡಿ, ರಕ್ಷಿತಾ ಪ್ರೊಡ್ಯೂಸ್ ಮಾಡಿರೋ ಸಿನಿಮಾದ ಹಾಡುಗಳು ಕಮಾಲ್ ಮಾಡ್ತಿವೆ. ಸಿನಿಮಾದ ವಿಷ್ಯುಯಲ್ ಟ್ರೀಟ್ ನೋಡೋಕೆ ಜನವರಿ 21ರವರೆಗೂ ಕಾಯ್ಲೇಬೇಕಾಗಿದೆ.
ಏಕ್ ಲವ್ ಯಾ ಸಿನಿಮಾದಲ್ಲಿ ನಟಿ ರಕ್ಷಿತಾ ಪ್ರೇಮ್ ಸೋದರ ರಾಣಾ ಮೊದಲ ಬಾರಿಗೆ ಹೀರೋ ಆಗ್ತಾ ಇದ್ದು, ರಾಣಾಗೆ ಜೋಡಿಯಾಗಿ ಡಿಂಪಲ್ ಕ್ವೀನ್ ರಚಿತಾ ರಾಮ್, ಕೊಡವ ಚೆಲುವೆ ರೀಷ್ಮಾ ನಾಣಯ್ಯ ನಟಿಸಿದ್ದಾರೆ. ಟೀಸರ್ ಹಾಡುಗಳ ಮೂಲಕವೇ ಹೊಸ ನಟನ ಸಿನಿಮಾಕ್ಕೂ ಹೈಪ್ ಕ್ರಿಯೇಟ್ ಮಾಡಿದ್ದಾರೆ ಪ್ರೇಮ್ಸ್.
****