ಪಾರ್ವತಮ್ಮ ರಾಜಕುಮಾರ್ ಅವರ ಒತ್ತಾಸೆಯಿಂದ ನಡೆಯುತ್ತಿದ್ದ ಶಕ್ತಿಧಾಮ ಕೇಂದ್ರ ಅವರ ನಿಧನಾ ನಂತರ ಶಕ್ತಿಧಾಮ ಕೇಂದ್ರವನ್ನು ಮುನ್ನಡೆಸುತ್ತಿದ್ದವರು ಪುನೀತ್ ರಾಜಕುಮಾರ್. ಅಲ್ಲಿಯ ಮಕ್ಕಳ ಶಿಕ್ಷಣ, ಪಾಲನೆ ಪೋಷಣೆ ಎಲ್ಲವೂ ಪುನೀತ್ ರಾಜಕುಮಾರ್ ಅವರ ಮುತುವರ್ಜಿಯಲ್ಲೆ ನಡೆಯುತ್ತಿದ್ದವು. ಅಕ್ಟೋಬರ್ 29 ರಂದು ಪುನೀತ್ ರಾಜಕುಮಾರ್ ನಿಧನರಾದರು. ಪುನೀತ್ ರಾಜಕುಮಾರ್ ಅವರ ಸಾವಿನಿಂದ ಇಡೀ ರಾಜ್ಯ ಶೋಕ ಸಾಗರದಲ್ಲಿ ಮುಳುಗಿತ್ತು. ಅದರಲ್ಲೂ ಶಕ್ತಿಧಾಮದ ಮಕ್ಕಳು ಅನ್ನ ನೀರು ಬಿಟ್ಟು, ಅಪ್ಪು ಸಾವಿನ ನೋವಿನಲ್ಲಿ ಕಣ್ಣೀರಾಕ್ಕಿದ್ದರು.
ಪುನೀತ್ ರಾಜಕುಮಾರ್ ಬದುಕಿದ್ದಾಗ ಶಕ್ತಿಧಾಮಕ್ಕೆ ಭೇಟಿ ನೀಡುತ್ತಿದ್ದರು, ಮಕ್ಕಳಿಗೆ ಊಟ ಮಾಡಿಸುವುದು, ಅವರೊಂದಿಗೆ ಹಾಡು ಹಾಡುವುದು, ಎಲ್ಲವನ್ನು ಮಾಡುತ್ತಿದ್ದರು ಈಗ ಪುನೀತ್ ಇಲ್ಲವೆಂಬ ನೋವನ್ನು ಸಾದ್ಯವಾದಷ್ಟು ಮರೆಸಲು ಮತ್ತು ಆ ಸ್ಥಾನವನ್ನು ತುಂಬಲು ಪ್ರಯತ್ನಿಸುತ್ತಿದ್ದಾರೆ ದೊಡ್ಮನೆ ಮಗ ಶಿವಣ್ಣ.
ಅಪ್ಪು ನಿಧನದ ನಂತರ ಶಿವಣ್ಣ ಶಕ್ತಿಧಾಮಕ್ಕೆ ಭೇಟಿ ನೀಡುತ್ತಿರುತ್ತಾರೆ, ಕಳೆದ ತಿಂಗಳು ತಮ್ಮ ಪತ್ನಿ ಗೀತಾ ಅವರೊಂದಿಗೆ ಶಕ್ತಿಧಾಮಕ್ಕೆ ಭೇಟಿ ನೀಡಿದ ಶಿವಣ್ಣ ಮಕ್ಕಳ ಜೊತೆ ಕಾಲ ಕಳೆದಿದ್ದರು. ಈಗ ಪುನಃ ಶಕ್ತಿಧಾಮಕ್ಕೆ ಹೋಗಿ ಮಕ್ಕಳ ಜೋತೆ ಖೊ ಖೊ ಆಟ ಆಡುವ ಮೂಲಕ ಮಕ್ಕಳೊಂದಿಗೆ ಮಕ್ಕಳಾಗಿದ್ದಾರೆ. ಈಗ ವೀಡಿಯೋ ಸಖತ್ ವೈರಲ್ ಆಗಿದೆ.
****