ಬಡವ ರಾಸ್ಕಲ್ ಕಾಮನ್ ಮ್ಯಾನ್ ಕಥೆ ಆದ್ದರಿಂದ ರಾಜ್ಯದ ಕಾಮನ್ ಮ್ಯಾನ್ ಬಡವ ರಾಸ್ಕಲ್ ಚಿತ್ರವನ್ನು ತಲೆ ಮೇಲೆ ಹೊತ್ತು ತಿರುಗುತ್ತಿದ್ದಾರೆ. ಅದರಲ್ಲೂ ಧನು ಆಟೋ ಡ್ರೈವರ್ ಪಾತ್ರ ಮಾಡಿರುವುದರಿಂದ ದುಡಿಯುವ ವರ್ಗದ ಜನ ಧನಂಜಯ್ ನನ್ನು ತಮ್ಮ ಮನೆಯವನಂತೆ ಸ್ವೀಕರಿಸಿದ್ದಾರೆ. ಹಾಗಾಗಿ ಡಾಲಿ ಧನಂಜಯ್ & ಟೀಂ ತಮ್ಮ ಬಡವ ರಾಸ್ಕಲ್ ಚಿತ್ರಕ್ಕೆ ಸಿಕ್ಕಿರುವ ಜನ ಮನ್ನಣೆಯಿಂದ ಬಹಳ ಹುರುಪಿನಲ್ಲಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಭೇಟಿ ನೀಡಿ ಅಭಿಮಾನಿಗಳೊಂದಿಗೆ ಸಿನಿಮಾ ಗೆಲುವನ್ನು ಸಂಭ್ರಮಿಸ್ತಿದ್ದಾರೆ.
ಇಂದು ಕೂಡ ಬಡವಾ ರಾಸ್ಕಲ್ ಚಿತ್ರ ತಂಡ ತುಮಕೂರು ಜಿಲ್ಲೆಯ ಶಿರಾ ಮತ್ತು ಇತರೆ ತಾಲ್ಲೂಕುಗಳಿಗೆ ಭೇಟಿ ನೀಡಿ ಅಭಿಮಾನಿಗಳೊಂದಿಗೆ ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದಾರೆ. ಇದಕ್ಕೂ ಮೊದಲು ಹಿರಿಯೂರಿಗೆ ಬಡವ ರಾಸ್ಕಲ್ ಟೀ ಭೇಟಿ ನೀಡಿತ್ತು.
****