ಸ್ಯಾಂಡಲ್ ವುಡ್ ದೂಧ್ ಪೇಡಾ ದಿಗಂತ್ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ತಮ್ಮ ಗುಳಿ ಕೆನ್ನೆಯ ನಗುವಿನಲ್ಲೆ ಎಂತವರನ್ನು ತನ್ನತ ಸೆಳೆಯುವ ದಿಗಂತ್ 38ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ದಿಗಂತ್ ಗೆ ಈ ಬಾರಯ ಹುಟ್ಟು ಹಬ್ಬ ತುಂಬಾ ವಿಶೇಷ ಯಾಕಂದ್ರೆ ಅವರು ಅಭಿನಯಿಸಿರುವ ಕಾಮಿಡಿ ಕಂ ಥ್ರಿಲ್ಲರ್ ‘ಹುಟ್ಟು ಹಬ್ಬದ ಶುಭಾಶಯಗಳು’ ಚಿತ್ರ ಇದೇ 31 ರಂದು ರಿಲೀಸ್ ಆಗ್ತಿದೆ.

2021 ರಲ್ಲಿ ಬಿಡುಗಡೆ ಆಗಿದ್ದ ಯುವರತ್ನ ಚಿತ್ರದಲ್ಲಿ ಪುನೀತ್ ಸ್ನೇಹಿತನ ಪಾತ್ರದಲ್ಲಿ ಗಮನ ಸೆಳೆದಿದ್ದರು. ಇದೇ ವರ್ಷ ತಮ್ಮ ಮತ್ತೊಂದು ಚಿತ್ರ ಜನುಮ ದಿನದ ಹತ್ತಿರದಲ್ಲೆ ರಿಲೀಸ್ ಆಗ್ತಿರೋದಕ್ಕೆ ಡಬಲ್ ಖುಷಿಯಲ್ಲಿದ್ದಾರೆ ದೂಧ್ ಪೇಡ ದಿಗಂತ್.

****