31.5 C
Bengaluru
Tuesday, March 28, 2023
spot_img

ಧಮ್ ಹೊಡೆದ ರಚಿತಾ, ಕೊಟ್ಟ ರೀಸನ್ ಏನು ಗೊತ್ತಾ..?

ಏಕ್​ ಲವ್​ ಯಾಚಿತ್ರದಲ್ಲಿ ರಚಿತಾ ರಾಮ್​ ಸಿಗರೇಟ್​ ಸೇದುವ ದೃಶ್ಯ ಇದೆ. ಕೊಂಚ ಬೋಲ್ಡ್​ ಆಗಿಯೇ ಅವರು ಕಾಣಿಸಿಕೊಂಡಿದ್ದಾರೆ. ಆ ಬಗ್ಗೆ ಎದುರಾದ ಪ್ರಶ್ನೆಗೆ ರಚಿತಾ ರಾಮ್​ ನೇರ ಉತ್ತರ ನೀಡಿದ್ದಾರೆ.

ತಾವು ಏನೇ ಮಾಡಿದ್ದರೂ ಅದನ್ನು ಪಾತ್ರಕ್ಕಾಗಿ ಮಾಡಿರುವುದಾಗಿ ರಚಿತಾ ಹೇಳಿದ್ದಾರೆ. ‘ನಾನು ಈ ರೀತಿಯ ಪಾತ್ರ ಮಾಡಿದ್ದೇನೆ ಎಂದರೆ ಅದಕ್ಕೊಂದು ಅರ್ಥ ಇದೆ. ಸುಮ್​ ಸುಮ್ಮನೇ ನಾನು ಸಿಗರೇಟ್​ ಸೇದಿಲ್ಲ. ಬೋಲ್ಡ್​ ದೃಶ್ಯಗಳಲ್ಲಿ ಯಾಕೆ ನಟಿಸಿದ್ದೇನೆ ಎಂಬುದು ಸಿನಿಮಾ ರಿಲೀಸ್​ ಆದಾಗ ಗೊತ್ತಾಗುತ್ತದೆ. ಚೆನ್ನಾಗಿ ಮಾಡಿದ್ದೇನೆ ಅಂತ ಅಂದುಕೊಂಡಿದ್ದೇನೆ’ ಎಂದಿದ್ದಾರೆ ರಚಿತಾ ರಾಮ್​.

ಸಿಗರೇಟ್​ ಸೇದುವ ದೃಶ್ಯದಲ್ಲಿ ನಟಿಸಿದಾಗ ಅದು ಕೃತಕವಾಗಿ ಕಾಣಿಸಿದರೆ ಚೆನ್ನಾಗಿ ಇರೋದಿಲ್ಲ. ಸಹಜವಾಗಿ ಮೂಡಿಬಂದರೆ ಮಾತ್ರ ಆ ಪಾತ್ರಕ್ಕೆ ಒಂದು ಕಳೆ. ಸಾಂಗ್​ ಬಿಡುಗಡೆ ಆದಾಗಲೇ ನಂಗೆ ಆ ದೃಶ್ಯಗಳನ್ನು ನೋಡುವ ಅವಕಾಶ ಸಿಕ್ಕಿದ್ದು. ಇವತ್ತಿನವರೆಗೂ ಪ್ರೇಮ್​ ಅವರು ಯಾವುದೇ ಹಾಡನ್ನು ನಮಗೆ ತೋರಿಸಿರಲಿಲ್ಲ. ಅವರು ಅಷ್ಟು ರಹಸ್ಯ ಕಾಪಾಡಿಕೊಂಡು, ನಂತರ ಜನರ ಮಡಿಲಿಗೆ ಹಾಕುತ್ತಾರೆ’ ಎಂದಿದ್ದಾರೆ ರಚಿತಾ ರಾಮ್​.

ಈ ಬಗ್ಗೆ ನಿರ್ದೇಶಕ ಪ್ರೇಮ್​ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ‘ಧೂಮಪಾನ, ಮದ್ಯಪಾನ ಮಾಡುವ ಹುಡುಗಿಯರು ಸಹ ಇದ್ದಾರೆ. ಆ ರೀತಿ ಮಾಡಲು ಅವರಿಗೆ ಅವರದ್ದೇ ಆದ ಕಾರಣಗಳಿವೆ. ಅಂಥವರ ಪಾತ್ರವನ್ನು ರಚಿತಾ ರಾಮ್​ ಮಾಡಿದ್ದಾರೆ. ಮೊದಲು ಈ ಪಾತ್ರ ಮಾಡಲು ಅಂಜಿಕೊಂಡಿದ್ದರು. ನಂತರ ಒಪ್ಪಿಕೊಂಡರು’ ಎಂದು ಪ್ರೇಮ್​ ಹೇಳಿದ್ದಾರೆ.

****

Related Articles

Stay Connected

10,000FansLike
15,000FollowersFollow
5,000FollowersFollow
100,000SubscribersSubscribe

Latest Articles