ಸ್ಯಾಂಡಲ್ ವುಡ್ ಬೆಡಗಿ ಅದಿತಿ ಪ್ರಭುದೇವ ಅವರು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರುವಾಗಲೇ ಅವರಿಂದ ಒಂದು ಮಹತ್ವದ ಅಪ್ಡೇಟ್ ಸಿಕ್ಕಿದೆ, ಅವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಫೋಟೋ ಪೋಸ್ಟ್ ಮಾಡಿದ್ದು, ‘ಒಂದು ಕನಸಿನಂತೆ ಈ ಕನಸು ನನಸಾಯಿತು’ ಎಂದು ಬರೆದುಕೊಂಡಿದ್ದಾರೆ. ಈ ಫೋಟೋದಲ್ಲಿ ಅದಿತಿ ಕೈಯಲ್ಲಿರುವ ಉಂಗುರ ಹೈಲೈಟ್ ಆಗಿದೆ. ಸದ್ಯ, ಈ ವಿಚಾರದ ಬಗ್ಗೆ ಅದಿತಿ ಮೌನ ವಹಿಸಿದ್ದಾರೆ. ಅವರ ಕಡೆಯಿಂದ ಈ ಬಗ್ಗೆ ಪ್ರತಿಕ್ರಿಯೆ ಬರಬೇಕಿದೆ.
ಭಾನುವಾರ (ಡಿಸೆಂಬರ್ 26) ಅದಿತಿ ಅವರು ಹೊಳೆನರಸೀಪುರದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಕಾರ್ಯಕ್ರಮಕ್ಕೆ ಕೇವಲ ಆಪ್ತರಿಗೆ ಅಷ್ಟೇ ಆಹ್ವಾನ ಇತ್ತು ಎಂದು ಮೂಲಗಳು ತಿಳಿಸಿವೆ. ಫೋಟೋದಲ್ಲಿರುವ ಹುಡುಗ ಉದ್ಯಮಿ ಆಗಿದ್ದು, ದಾವಣಗೆರೆ ಮೂಲದವರು ಎಂದು ತಿಳಿದು ಬಂದಿದೆ.
****