ಶಕೀಲಾ- ಈ ಹೆಸರನ್ನು ಕೇಳಿರದ ಪಡ್ಡೆ ಹುಡುಗರೇ ಇಲ್ಲ. ಅದರಲ್ಲೂ 1990ರ ದಶಕ ಹಾಗೂ 2000ನೇ ಇಸವಿಯ ಸಂದರ್ಭದಲ್ಲಿ ಶಕೀಲಾ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದುಕೊಂಡಿದ್ದರು. ನೀಲಿಚಿತ್ರಗಳಲ್ಲಿ ನಟಿಸುವ ಮೂಲಕ ಅವರು ಏಕಾಏಕಿ ಹೆಸರು ಮತ್ತು ಹಣ ಗಳಿಸಲು ಆರಂಭಿಸಿದರು. ಒಂದೇ ವರ್ಷದಲ್ಲಿ ಅವರು ನಟಿಸಿದ ಹತ್ತಾರು ಸಿನಿಮಾಗಳು ಬಿಡುಗಡೆ ಆಗುತ್ತಿದ್ದವು. ಅವರ ಸಿನಿಮಾಗೆ ಹಣ ಹೂಡಿ ಅಂದಿನ ಕಾಲದಲ್ಲೇ ಬಹುಕೋಟಿ ರೂ. ಲಾಭ ಮಾಡಿಕೊಳ್ಳುತ್ತಿದ್ದರು ನಿರ್ಮಾಪಕರು.

ಪಡ್ಡೆಗಳ ವಲಯದಲ್ಲಿ ಎಷ್ಟರಮಟ್ಟಿಗೆ ಶಕೀಲಾ ಜನಪ್ರಿಯರಾಗಿದ್ದರು ಎಂದರೆ, ಯಾವುದೇ ನೀಲಿಚಿತ್ರವಿದ್ದರೂ ಅದಕ್ಕೆ ‘ಶಕೀಲಾ ಫಿಲ್ಮ್’ ಎಂದೇ ಕರೆಯುಲಾಗುತ್ತಿತ್ತು. ಹಾಗಂತ ಈ ನಟಿಯ ಬದುಕು ಸುಲಭವಾಗಿರಲಿಲ್ಲ. ಅವರು ಕೂಡ ಅನೇಕ ಏಳು-ಬೀಳುಗಳನ್ನು ಕಂಡಿದ್ದಾರೆ. ಕಷ್ಟ ಎದುರಿಸಿದ್ದಾರೆ. ಅವರ ಬದುಕಿನ ಆ ಹಲವು ವಿಷಯಗಳೇ ‘ಶಕೀಲಾ ಬಯೋಪಿಕ್’ ಸಿನಿಮಾವನ್ನು ಇಂದ್ರಜಿತ್ ಲಂಕೇಶ್ ತೆರೆಗೆ ತಂದಿದ್ದರು ಆದರೆ ಆ ಸಿನಿಮಾದಲ್ಲಿ ಹಲವು ವಿಚಾರಗಳನ್ನು ಸರಿಯಾಗಿ ನಿರ್ವಹಿಸಿಲ್ಲಾ ಎಂದು ಇಂದ್ರಜಿತ್ ಲಂಕೇಶ್ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ ಶಕೀಲಾ.

ಶಕೀಲಾ ಸದ್ಯ ನಿರ್ಮಾಪಕಿಯಾಗಿ ಪೋಷಕ ನಟಿಯಾಗಿ ಬ್ಯುಸಿಯಾಗಿದ್ದಾರೆ. ಇದೀಗ ಮೂರು ವರ್ಷಗಳ ಬಳಿಕ ಕನ್ನಡದ ಸಿನಿಮಾದಲ್ಲಿ ಶಕೀಲ ನಟಿಸುತ್ತಿದ್ದು, ನಗರದಲ್ಲಿ ಸುದ್ದಿ ಮಾಧ್ಯಮಗಳನ್ನುದ್ದೇಶಿಸಿ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
”ನನ್ನ ಜೀವನ ಕತೆ ಆಧರಿಸಿ ಶಕೀಲಾ ಸಿನಿಮಾ ಸರಿಯಾಗಿ ಮೂಡಿಬಂದಿಲ್ಲ. ನನ್ನ ಜೀವನದಲ್ಲಿ ನಡೆದ ಕೆಲವು ಮುಖ್ಯ ಘಟನೆಗಳನ್ನು ಸಿನಿಮಾದ ತೋರಿಸಲಾಗಿಲ್ಲ. ನನಗೆ ಇಬ್ಬರು ಅಣ್ಣಂದಿರು, ಒಬ್ಬ ತಮ್ಮ ಇದ್ದ ಅದನ್ನು ಸಿನಿಮಾದಲ್ಲಿ ತೋರಿಸಿಲ್ಲ. ಅದರ ಬಗ್ಗೆ ಇಂದ್ರಜಿತ್‌ಗೆ ಕೇಳಿದಾಗ ಸಿನಿಮಾದ ಮನೊರಂಜನಾತ್ಮಕ ಕಾರಣಕ್ಕೆ ಅದನ್ನು ಸೇರಿಸಿಲ್ಲ ಎಂದರು, ಹೋಗಲಿ ಬಿಡು ಎಂದು ನಾನೂ ಸುಮ್ಮನಾದೆ. ಆದರೆ ಸಿನಿಮಾ ಚೆನ್ನಾಗಿ ಪ್ರದರ್ಶನ ಕಾಣಲಿಲ್ಲ” ಎಂದರು ಶಕೀಲಾ .