ಜಗತ್ತಿನಾದ್ಯಂತ ಕ್ರಿಸ್ಮಸ್ ಆಚರಣೆ ಜೋರಾಗಿ ನಡೆದಿದ್ದು, ಬಹುತೇಕ ಸೆಲಬ್ರೆಟಿಗಳು ಕ್ರಿಸ್ಮಸ್ ಅನ್ನು ಸಂಭ್ರಮಿಸುತ್ತಿದ್ದು ತಮ್ಮ ಸೋಶಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.ಇದಕ್ಕೆ ರಾಧಿಕಾ ಪಂಡಿತ್ ಹಾಗೂ ಯಶ್ ಕುಟುಂಬ ಕೂಡ ಹೊರತಾಗಿಲ್ಲ. ಮಕ್ಕಳಾದ ಆಯ್ರಾ ಹಾಗೂ ಯಥರ್ವ್ ಜತೆ ಸೇರಿ ಡಿಸೆಂಬರ್ 25ರಂದು ಈ ಜೋಡಿ ಹಬ್ಬವನ್ನು ಆಚರಿಸಿದೆ. ಈ ಫೋಟೋಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಯಶ್ ಹಾಗೂ ರಾಧಿಕಾ ಪಂಡಿತ್ ಮನೆಯಲ್ಲಿ ಚಿಕ್ಕದಾಗಿ ಕ್ರಿಸ್ಮಸ್ ಟ್ರೀ ಒಂದನ್ನು ಇಡಲಾಗಿದೆ. ಈ ಮರಕ್ಕೆ ಚೆಂದದ ಅಲಂಕಾರ ಮಾಡಲಾಗಿದೆ. ಈ ಫೋಟೋಗೆ ಕ್ಯಾಪ್ಶನ್ ನೀಡಿರುವ ರಾಧಿಕಾ ಪಂಡಿತ್, ‘ನಮ್ಮ ಮನೆಯಲ್ಲಿ ಸಾಂಟಾ ಹಸಿರು ಉಡುಗೆ ತೊಟ್ಟಿದ್ದಾನೆ. ಮೇರಿ ಕ್ರಿಸ್ಮಸ್’ ಎಂದು ಬರೆದುಕೊಂಡಿದ್ದಾರೆ. ಈ ಚಿತ್ರದಲ್ಲಿ ಯಥರ್ವ್ ಹಸಿರು ಬಣ್ಣದ ಬಟ್ಟೆ ತೊಟ್ಟಿದ್ದಾರೆ.
ಇದಕ್ಕೂ ಮೊದಲು ಸ್ಟೇಟಸ್ನಲ್ಲಿ ಕೆಲ ಫೋಟೋಗಳನ್ನು ರಾಧಿಕಾ ಪಂಡಿತ್ ಹಂಚಿಕೊಂಡಿದ್ದರು. ಈ ಫೋಟೋದಲ್ಲಿ ಆಯ್ರಾ ಹಾಗೂ ಯಥರ್ವ್ ಸಾಂಟಾ ಕ್ಲಾಸ್ ಟೋಪಿ ಧರಿಸಿದ್ದಾರೆ. ಈ ಫೋಟೋಗಳ ಸ್ಕ್ರೀನ್ ಶಾಟ್ ಗಳನ್ನು ತೆಗೆದುಕೊಂಡಿರುವ ಅಭಿಮಾನಿಗಳು ಅದನ್ನು ಎಲ್ಲ ಕಡೆಗಳಲ್ಲಿ ಹಂಚುವ ಕೆಲಸ ಮಾಡುತ್ತಿದ್ದಾರೆ.
****