31.5 C
Bengaluru
Tuesday, March 28, 2023
spot_img

ಮಹಿಳೆಯಿಂದ ವಂಚನೆ, ನಿರ್ದೇಶಕ ಕಂಗಾಲು, ಠಾಣೆಯಲ್ಲಿ ದೂರು

ವಂಚನೆ ಕೇಸ್​ನಲ್ಲಿ ಕನ್ನಡದ ಸ್ಟಾರ್​  ಡೈರೆಕ್ಟರ್​ ನಾಗಶೇಖರ್​​​ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, 50 ಲಕ್ಷ ವಂಚನೆ ಆಗಿದೆ ಅಂತ ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ರಾಜರಾಜೇಶ್ವರಿನಗರ ಠಾಣೆಯಲ್ಲಿ ನಿರ್ದೇಶಕ ನಾಗಶೇಖರ್​, ಆರ್.ಆರ್.ನಗರದ ಮೀನಾ, ರಾಜಕುಮಾರ್​​ ವಿರುದ್ಧ ದೂರು ಕೊಟ್ಟಿದ್ದು, ಜಯಣ್ಣಲೇಔಟ್​ನಲ್ಲಿ ಮನೆ ಖರೀದಿಸಲು ಮುಂದಾಗಿದ್ದಾರೆ. ಹೀಗಾಗಿ  ಮೀನಾರಿಂದ 2.70 ಕೋಟಿಗೆ ಮನೆ ಖರೀದಿಗೆ ಮಾತುಕತೆ ಕೂಡ ಆಗಿತ್ತು. 2020ರ ಆಗಸ್ಟ್​ನಲ್ಲಿ ಸೇಲ್ ಅಗ್ರಿಮೆಂಟ್ ಮಾಡಿಕೊಂಡಿದ್ದ ನಾಗಶೇಖರ್, ಅಗ್ರಿಮೆಂಟ್ ಆಗುತ್ತಿದ್ದಂತೆ ಹಂತಹಂತವಾಗಿ 50 ಲಕ್ಷ ವರ್ಗಾಯಿಸಿದ್ದಾರೆ.  ಸೇಲ್​ ಅಗ್ರಿಮೆಂಟ್​ ನಂತರ ಮೀನಾ ನಾಗಶೇಖರ್​ ಗೆ ನೀಡಬೇಕಿದ್ದ ಮನೆಯನ್ನ  ಬೇರೆಯವರಿಗೆ ಮಾರಿದ್ದಾರೆ.

ಹೀಗಾಗಿ ನಾಗಶೇಖರ್​ ವರ್ಗಾಯಿಸಿದ್ದ 50 ಲಕ್ಷ ಹಣವನ್ನ ಮೀನಾ ವಾಪಸ್ ಮಾಡಿಲ್ಲ ಅಂತಾ ಈ ಬಗ್ಗೆ ನಿರ್ದೇಶಕ  ದೂರು ನೀಡಿದ್ದು,  RR ನಗರ ಠಾಣೆಯಲ್ಲಿ FIR ದಾಖಲಾಗ್ತಿದ್ದಂತೆ ಮೀನಾ ದಂಪತಿ ಎಸ್ಕೇಪ್​​ ಆಗಿದ್ದಾರೆ. ಇದೀಗ  ಮನೆಯೂ ಸಿಗದೇ, ಹಣವೂ ವಾಪಸ್​ ಬರದೇ ನಿರ್ದೇಶಕ ಕಂಗಾಲಾಗಿದ್ದಾರೆ.

Related Articles

Stay Connected

10,000FansLike
15,000FollowersFollow
5,000FollowersFollow
100,000SubscribersSubscribe

Latest Articles