ಡಾಲಿ ಧನಂಜಯ್ ಅಭಿನಯದ ಬಹು ನಿರೀಕ್ಷೆಯ ಸಿನಿಮಾ ಮತ್ತು ಅವರೇ ಖುದ್ದು ನಿರ್ಮಾಣದ ಜವಬ್ದಾರಿ ಯನ್ನು ಹೊತ್ತಿದ ಬಡವ ರಾಸ್ಕಲ್ ಚಿತ್ರ ರಾಜಾದ್ಯಂತ ಬಿಡುಗಡೆಯಾಗಿ ಹೌಸ್ ಫುಲ್ ಪ್ರದರ್ಶನ ಕಾಣ್ತಿದೆ. ಸಿನಿ ಪ್ರೇಕ್ಷಕರಿಂದಲೂ ಪಾಸಿಟೀವ್ ರೆಸ್ಪಾನ್ಸ್ ಸಿಗುತ್ತಿದ್ದು ಇಡೀ ತಂಡದ ಖುಷಿಗೆ ಕಾರಣವಾಗಿದೆ.
ಈಗ ಹ್ಯಾಟ್ರಿಕ್ ಹೀರೋ ಶಿವಣ್ಣ ಕೂಡ ಸಿನಿಮಾ ವೀಕ್ಷಿಸಿದ್ದು ಬಡವಾ ರಾಸ್ಕಲ್ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮೈಸೂರಿನ ಮೈಸೂರಿನ ಡಿಆರ್ ಸಿ ಮಾಲ್‌ನಲ್ಲಿ ಅಭಿಮಾನಿಗಳ ಒಟ್ಟಿಗೆ ಕೂತು ಸಿನಿಮಾ ವೀಕ್ಷಿಸಿದ ಶಿವರಾಜ್ ಕುಮಾರ್, ”ಡಾಲಿ ಧನಂಜಯ್ ಅವರ ಮೊದಲ ಪ್ರೊಡಕ್ಷನ್ ಸಿನಿಮಾ ‘ಬಡವ ರಾಸ್ಕಲ್’ ಚೆನ್ನಾಗಿದೆ. ನಿರ್ದೇಶಕ ಶಂಕರ್ ಗುರು ಸಿನಿಮಾವನ್ನು ವಿಭಿನ್ನ ರೀತಿಯಲ್ಲಿ ಹೇಳುವ ಯತ್ನ ಮಾಡಿದ್ದಾರೆ” ಎಂದಿದ್ದಾರೆ.
ಸಿಂಪಲ್ ಸ್ಟೋರಿಯನ್ನು ಬಹಳ ಎಂಟರ್ ಟೈನ್ ಆಗಿ, ಹಾಸ್ಯದ ಜೊತೆ, ಕೌಟುಂಬಿಕ ಸನ್ನಿವೇಶಗಳನ್ನು ಬೆರೆಸಿ ಹೇಳಿದ್ದಾರೆ. ಹೀರೋ ಪಾತ್ರವನ್ನು ಬಹಳ ಚೆನ್ನಾಗಿ ಪ್ರೆಸೆಂಟ್ ಮಾಡಿದ್ದಾರೆ. ಬೇರೆ ವಿವಿಧ ಪಾತ್ರಗಳೊಂದಿಗೆ ಹೊಂದಿಕೊಂಡು ಹೋಗುವ ರೀತಿಯಲ್ಲಿ ಹೀರೋ ಪಾತ್ರವನ್ನು ಪ್ರೆಸೆಂಟ್ ಮಾಡಿದ್ದಾರೆ. ಬಹಳ ಆಡಂಭರ ಮಾಡದೆ, ಸಮತೋಲಿತವಾಗಿ ತೆರೆ ಮೇಲೆ ತೋರಿಸಿದ್ದಾರೆ. ಎಲ್ಲ ಕಲಾವಿದರಿಗೂ ಅವಕಾಶ ಕೊಟ್ಟಿದ್ದಾರೆ. ಎಲ್ಲ ಕಲಾವಿದರ ಪಾತ್ರವನ್ನು, ನಟನೆಯನ್ನು ಗುರುತಿಸಬಹುದು ಅಷ್ಟು ಸ್ಪೇಸ್ ಕೊಟ್ಟಿದ್ದಾರೆ ನಿರ್ದೇಶಕರು” ಎಂದರು ಶಿವಣ್ಣ.
ಚಿತ್ರದಲ್ಲಿ ಎಲ್ಲಾ ಪಾತ್ರಗಳಿಗೂ ಸ್ಪೇಸ್ ನೀಡಿರುವ ನಿರ್ದೇಶಕ ಕೆಲಸವನ್ನು ಶ್ಲಾಗಿಸಿದ ಶಿವಣ್ಣ ರಂಗಾಯಣ ರಘು ಮತ್ತು ಧನಂಜಯ್ ಅವರ ಒಂದು ಸನ್ನಿವೇಷವಂತೂ ಮನಸ್ಸಿಗೆ ಟಚ್ ಆಗುವಂತಿದೆ, ಎಲ್ಲರೂ ಅವರ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ ಎಂದರು ಶಿವಣ್ಣ. ಚಿತ್ರ ಬಿಡುಗಡೆಗೂ ಮೊದಲು ಪ್ರಿರಿಲೀಸ್ ಇವೆಂಟ್ ನಲ್ಲೂ ಭಾಗವಹಿಸಿ ಮಾತನಾಡಿದ್ದ ಶಿವಣ್ಣ ಡಾಲಿ ಧನಂಜಯ್ ಅದ್ಭುತ ಕಲಾವಿದ ಯಾಕೆ ಅವರಿಗೆ ಇನ್ನೂ ಕೂಡ ಒಂದು ಸಕ್ಸಸ್ ಸಿಗ್ತಿಲಾ ಅಂತ ಹೇಳ್ತಿದ್ದೆ ಆದ್ರೆ ಬಡವ ರಾಸ್ಕಲ್ ಚಿತ್ರ ಅವರಿಗೆ ದೊಡ್ಡ ಗೆಲುವನ್ನು ತಂದು ಕೊಡುತ್ತೆ ಎಂದಿದ್ದರು ಶಿವಣ್ಣ.
****