ದೊಡ್ಮನೆಯ ದೊಡ್ಡತನಕ್ಕೆ ಮತ್ತೊಂದು ನಿದರ್ಶನ ಇದು. ಅಪ್ಪು ಸಾಲು ಸಾಲು ಚಿತ್ರಗಳನ್ನು ಒಪ್ಪಿಕೊಂಡಿದ್ದರು. ಆದರೆ ವಿಧಿಯಾಟವೇ ಬೇರೆಯಾಗಿತ್ತು. ಅಪ್ಪು ಹೇಳದೆ, ಕೇಳದೇ ನಮ್ಮನ್ನೆಲ್ಲ ಬಿಟ್ಟು ಹೋಗಿದ್ದಾರೆ. ಆದರೆ, ಇತಂಹ ಸಮಯದಲ್ಲಿ ಆ ದೊಡ್ಮನೆ ಸೊಸೆಯ ದೊಡ್ಡ ಮನಸ್ಸು ಮಾಡಿರುವ ಒಂದು ಕೆಲಸ ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಅಪ್ಪು ಅವರಂತೆ ನೀವು ಮೇಡಂ ನಿಮಗೆ ಒಂದು ಸಲಾಂ ಅಂತ ಅಶ್ವಿನಿ ರಾಜಕುಮಾರ್ ಅವರಿಗೆ ಫ್ಯಾನ್ಸ್ ಹೇಳುತ್ತಿದ್ದಾರೆ.

ಮದಗಜ ನಂತರ, ಅಪ್ಪು ಸಿನಿಮಾಗೆ ತಯಾರಿ ನಡೆಸಿದ್ದ ಉಮಾಪತಿ ಶ್ರೀನಿವಾಸ್ ಪುನೀತ್ ರಾಜಕುಮಾರ್ ಅವರಿಗೆ ಮುಂದಿನ ಸಿನಿಮಾಗಾಗಿ ಅಡ್ವಾನ್ಸ್ ನೀಡಿದ್ದರು, ಆಗ ಜೀಮ್ಸ್ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿ ಇದ್ದ ಪುನೀತ್ ರಾಜಕುಮಾರ್ ನಂತರ ಸಿನಿಮಾ ಮಾಡಿಕೊಡುವುದಾಗಿ ಹೇಳಿದ್ದರು, ಮುಂದಿನ ಸಿನಿಮಾಗಾಗಿ ಉಮಾಪತಿ ಅಪ್ಪುಗೆ 2.5 ಕೋಟಿ ಅಡ್ವಾನ್ಸ್ ನೀಡಿದ್ದರು ಅಷ್ಟರಲ್ಲಿ ಆ ವಿಧಿ ಏನೆಲ್ಲಾ ಆಟವಾಡಿತು ಎಂದು ನಮಗೆಲ್ಲಾ ತಿಳೀದೆ ಇದೆ. ನಂತರ ನಿರ್ಮಾಪಕರಾದ ಉಮಾಪತಿ ಶ್ರೀನಿವಾಸ್ ಕೂಡ ಈ ವಿಚಾರವಾಗಿ ಯಾರ ಬಳಿಯೂ ಹೇಳಿಕೊಂಡಿರಲಿಲ್ಲ, ಆದರೆ ಈ ವಿಷಯವನ್ನು ತಿಳಿದುಕೊಂಡ ಅಶ್ವಿನಿ ಪುನೀತ್ ರಾಜಕುಮಾರ್, ನಿರ್ಮಾಪಕರಾದ ಉಮಾಪತಿ ಅವರಿಗೆ ಕರೆ ಮಾಡಿ ತಾವು ಕೊಟ್ಟಿರುವ 2.5 ಕೋಟಿ ಹಣವನ್ನು ವಾಪಸ್ ಪಡೆಯುವಂತೆ ಹೇಳಿ ಹಣವನ್ನು ಉಮಾಪತಿ ಅವರಿಗೆ ಹಿಂತಿರುಗಿಸಿದ್ದಾರೆ.

ಇಂಡಸ್ಟ್ರಿಯಲ್ಲಿ ಅಡ್ವಾನ್, ಪೇಮೆಂಟು, ಸಂಭಾವನೆ ವಿಚಾರಗಳಿಗೆ ಕಿತ್ತಾಟ, ಜಗಳ, ವೈಮನಸ್ಸು ಇರುವಾಗ ಅಪ್ಪು ಪಡೆದಿದ್ದ ಮುಂಗಡ ಹಣ ವಾಪಸ್ ಮಾಡಿರುವ ಅಶ್ವಿನಿ ಪುನೀತ್ ರಾಜಕುಮಾರ್ ಅವರ ನಡೆ ಎಲ್ಲರಿಂದ ಮೆಚ್ಚುಗೆ ಪಡೆದಿದೆ.
****