ನಟ ಸುದೀಪ್ ಕೊರೊನಾ ಸಂದರ್ಭದಲ್ಲಿ ಹಿರಿಯ ಪೋಷಕ ಕಲಾವಿದರು, ಅಭಿಮಾನಿಗಳು, ಕಷ್ಟದಲ್ಲಿದ್ದ ಜನರ ಸಮಸ್ಯೆಗೆ ಸ್ಪಂದಿಸಿದ್ದರು. ಇದೀಗ ಕಿಚ್ಚ ಸುದೀಪ್ ತಮ್ಮ ಚಾರಿಟಬಲ್ ಸೊಸೈಟಿಯಿಂದ ಬಡವರನ್ನು ಗುರುತಿಸಿ ಸಾಮೂಹಿಕ ವಿವಾಹ ಮಾಡುವ ಕಾರ್ಯಕ್ಕೆ ಮುಂದಾಗಿದ್ದಾರೆ. ಐದು ಜೋಡಿಗಳಿಗೆ ಒಂದೇ ವೇದಿಕೆಯಲ್ಲಿ ಮದುವೆ ಮಾಡಿಸುವ ಗುರಿ ಹೊಂದಿದ್ದಾರೆ.
ಕನ್ನಡ ಚಿತ್ರರಂಗಮಾತ್ರವಲ್ಲದೇ ಪರಭಾಷೆಯಲ್ಲೂ ದೊಡ್ಡ ಅಭಿಮಾನಿ ಬಳಗ ಹೊಂದಿರುವ ನಟ ಕಿಚ್ಚ ಸುದೀಪ್ ತಮ್ಮ ಚಾರಿಟಬಲ್ ಸೊಸೈಟಿ ಮೂಲಕ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದು, ಇದೀಗ ಬಡವರಿಗಾಗಿ ಸಾಮೂಹಿಕ ವಿವಾಹ ಏರ್ಪಡಿಸುತ್ತಿದ್ದಾರೆ.
ಕಿಚ್ಚ ಸುದೀಪ್ ಚಾರಿಟಬಲ್ ಸೊಸೈಟಿ ಪ್ರಾರಂಭವಾಗಿ 5 ವರ್ಷ ಪೂರೈಸುತ್ತಿರುವ ಹಿನ್ನಲೆಯಲ್ಲಿ ಹಿಂದಿನಿಂದಲೂ ನಡೆಸಿಕೊಂಡು ಬಂದಿದ್ದ ಸಾಮೂಹಿಕ ವಿವಾಹವನ್ನು ನಡೆಸುವುದಾಗಿ ರಮೇಶ್ ಅವರು ತಿಳಿಸಿದ್ದಾರೆ. ಕೊರೊನಾ ಸಂದರ್ಭದಲ್ಲಿ ತಾತ್ಕಾಲಿಕವಾಗಿ ಸಾಮೂಹಿಕ ಮದುವೆಗಳನ್ನು ನಿಲ್ಲಿಸಲಾಗಿತ್ತು.
ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಕಿಚ್ಚ ಸುದೀಪ್ ಚಾರಿಟಬಲ್ ಸೊಸೈಟಿ ನೋಂದಣಿ ಮಾಡಿಕೊಳ್ಳುವಂತೆ ಸೊಸೈಟಿಯ ಉಸ್ತುವಾರಿ ನೋಡಿಕೊಳ್ಳುತ್ತಿರುವ ರಮೇಶ್ ಕಿಟ್ಟಿ ವಿಡಿಯೋ ಮೂಲಕ ವಿವರಣೆ ನೀಡಿದ್ದಾರೆ. ಮುಂದಿನ ವರ್ಷ 2022ರ ಫೆಬ್ರವರಿ 14ನೇ ತಾರೀಖು ಪ್ರೇಮಿಗಳ ದಿನದಂದು ನಮ್ಮನೆ ಮದುವೆ ಹೆಸರಿನಲ್ಲಿ ಸಾಮೂಹಿಕ ವಿವಾಹ ಮಾಡಿಸುವ ಯೋಜನೆ ಈಗಾಗಲೇ ಶುರುವಾಗಿದೆ.
****