ಡಿಸೆಂಬರ್ 31ಕ್ಕೆ ವಿಶ್ ಯೂ ಹ್ಯಾಪಿ ನ್ಯೂ ಇಯರ್ ಎನ್ನುವ ಮೂಲಕ ಹೊಸ ವರ್ಷವನ್ನು ಬರಮಾಡಿಕೊಳ್ಳುವುದು ಸಾಮಾನ್ಯ ಆದರೆ ಇಲ್ಲೊಂದು ತಂಡ ಡಿ.31ಕ್ಕೆ ಡಿಶ್ ಯೂ ಹ್ಯಾಪಿ ಬರ್ತಡೆ ಎನ್ನುತ್ತಿದೆ. ಯಾಕೆ ಹೀಗೆ ಅಂತೀರಾ ಮುಂದೆ ಓದಿ..
ದಿಗಂತ್ ನಟನೆಯ ‘ಹುಟ್ಟು ಹಬ್ಬದ ಶುಭಾಶಯಗಳು’ ಚಿತ್ರದ ಟ್ರೇಲರ್ ಕುತೂಹಲ ಹುಟ್ಟಿಸಿದೆ. ಟ್ರೇಲರ್ ಮೂಲಕ ಸಿನಿರಸಿಕರಲ್ಲಿ ಕೌತುಕ ಹೆಚ್ಚಿಸಿರುವ ಹುಟ್ಟು ಹಬ್ಬದ ಶುಭಾಶಯಗಳು ಚಿತ್ರ ಇದೇ ಡಿಸೆಂಬರ್ 31 ರಂದು ರಾಜಾದ್ಯಂತ ಬಿಡುಗಡೆ ಆಗಲಿದೆ. ಟ್ರೇಲರ್ ಅನ್ನು ರಿಯಲ್ ಸ್ಟಾರ್ ಉಪೇಂದ್ರ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

.ಇದೇ ಮೊದಲ ಬಾರಿಗೆ ದಿಗಂತ್ ಮಾಸ್ ಲುಕ್ನಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅವರ ಹೊಸ ಲುಕ್ ಪಕ್ಕಾ ರಗಡ್ ಆಗಿದೆ. ಕಾಮಿಡಿ ಜೊತೆಗೆ ಲವ್ ಹಾಗೂ ಮಾಸ್ ಕಥೆಯನ್ನು ಈ ಚಿತ್ರ ಒಳಗೊಂಡಿದೆ ಎನ್ನಲಾಗಿದೆ. ಚಿತ್ರಕ್ಕೆ ಪ್ರಸನ್ನ ಕಥೆಯನ್ನು ಬರೆದಿದ್ದು, ಶ್ರೀಧರ್ ವಿ ಸಂಭ್ರಮ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಶ್ರೀಕಾಂತ್ ಶ್ರಾಫ್ ಸಂಕಲನ, ಅಭಿಲಾಶ್ ಕಲತಿ ಕ್ಯಾಮೆರಾ ಕೈಚಳಕ ‘ಹುಟ್ಟು ಹಬ್ಬದ ಶುಭಾಶಯಗಳು’ ಚಿತ್ರಕ್ಕಿದೆ. ಚೇತನ್ ಗಂಧರ್ವ, ಮಡೇನೂರು ಮನು, ಸೂರಜ್, ಸೂರ್ಯ, ವಾಣಿಶ್ರೀ, ರೋಹಿತ್ ರಂಗಸ್ವಾಮಿ, ಶನಯ ಕಾಟ್ವೆ, ಶರಣ್ಯ ಶೆಟ್ಟಿ, ಶ್ರೀದತ್ತ, ಶ್ರೀಹರಿ, ಸುಜಯ್ ಶಾಸ್ತ್ರಿ, ರತನ್ ರಾಮ್, ಅಮೋಘವರ್ಷ, ಅಜಯ್ ಗಜ ಸೇರಿದಂತೆ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಈ ಚಿತ್ರಕ್ಕೆ ಕ್ರಿಸ್ಟಲ್ ಪಾರ್ಕ್ ಬ್ಯಾನರ್ನಡಿ ಟಿ. ಆರ್ ಚಂದ್ರಶೇಖರ್ ನಿರ್ಮಾಣ ಮಾಡಿದ್ದಾರೆ.
ಇನ್ನೂ ಸಿನಿಮಾ ಇದೇ ಡಿಸೆಂಬರ್ 31ಕ್ಕೆ ತೆರೆಕಾಣುತ್ತಿದ್ದು, ಅದೇ ದಿನವೇ ಇನ್ನೂ ಎರಡು ಸಿನಿಮಾಗಳು ತೆರೆಕಾಣಲಿದೆ. ಒಂದು ಒಳ್ಳೆಯ ಕಂಟೆಂಟ್ ಪ್ರೇಕ್ಷಕರ ಮುಂದೆ ಇಟ್ಟರೆ ಕಂಡಿತಾ ಸಿನಿಮಾ ಯಶಸ್ಸು ಕಾಣುತ್ತದೆ ಮತ್ತು ಇದು ಯಾವುದೇ ರೀತಿಯ ಸ್ಟಾರ್ ವಾರ್ ಅಲ್ಲ ಹೀಲ್ತಿ ಕಾಂಪಿಟೇಶನ್ ಎನ್ನುತ್ತಿದೆ ಚಿತ್ರ ತಂಡ.
****