ಬಡವ ರಾಸ್ಕಲ್ ಚಿತ್ರ ಬಿಡುಗಡೆಗೆ ಇನ್ನು ಒಂದೇ ದಿನ ಬಾಕಿ ಇದ್ದು (ಡಿ.24) ಚಿತ್ರ ತಂಡ ಸಿನಿಮಾ ಬಿಡುಗಡೆಗೆ ಸಕಲ ಸಿದ್ದತೆ ಮಾಡಿಕೊಂಡಿದೆ. ಕಳೆದ 20 ದಿನಗಳಿಂದ ಚಿತ್ರದ ಪ್ರಚಾರವನ್ನು ವಿಭಿನ್ನವಾಗಿ ಮಾಡಿದ ಡಾಲಿ ಆಂಡ್ ಟೀಮ್ ಇಂದು ಶ್ರೀ ಬಂಡೆ ಮಹಾಂಕಾಳಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ಆಶೀರ್ವಾದ ಪಡೆದಿದ್ದಾರೆ.
ಇಂದು ಬೆಳ್ಳಂ ಬೆಳಗ್ಗೆ ಯೇ ಬೆಂಗಳೂರಿನಿಂದ ಮೈಸೂರಿಗೆ ಪ್ರಯಾಣ ಬೆಳಸಿರುವ ಚಿತ್ರ ತಂಡ ಸಂಜೆ ಮೈಸೂರಿನಲ್ಲಿ ಬಡವ ರಾಸ್ಕಲ್ ಚಿತ್ರದ ಪ್ರಿಮಿಯರ್ ಶೋ ನಲ್ಲಿ ಭಾಗವಹಿಸುತ್ತಿದೆ, ಈಗಾಗಲೇ ಸಾಂಗ್ಸ್,ಟ್ರೇಲರ್ ಮತ್ತು ಪ್ರಮೋಷನ್ ನಿಂದಾಗಿ ಎಲ್ಲರ ಬಾಯಲ್ಲೂ ಬಡವ ರಾಸ್ಕಲ್ ಹರಿದಾಡುತ್ತಿದ್ದಾನೆ. ಚಿತ್ರತಂಡಕ್ಕೂ ಚಿತ್ರದ ಮೇಲೆ ಹೆಚ್ಚಿನ ನಿರೀಕ್ಷೆ ಇದ್ದು ಸಿನಿಮಾವನ್ನು ವಿಭಿನ್ನವಾಗಿ ಪ್ರಮೋಟ್ ಮಾಡಿದೆ.
ಈ ವರ್ಷ ಅಂತೂ ಧನಂಜಯ್ ಗೆ ಭರ್ಜರಿ ಹಬ್ಬವೆಂದೇ ಹೇಳಬಹುದು. ರತ್ನನ್ ಪ್ರಪಂಚ, ಸಲಗ ಮೊನ್ನೆ ಮೊನ್ನೆ ತೆರೆಕಂಡ ಪುಷ್ಪ ಸಿನಿಮಾದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು, ನಾಳೆ (ಡಿಸೆಂಬರ್ 24) ಬಡವ ರಾಸ್ಕಲ್ ಒಟ್ಟಾರೆ 2021 ಡಾಲಿಗೆ ಲಕ್ಕಿ ಎನ್ನಬಹುದು.
****