ಡಿಸೆಂಬರ್ 24 ಸ್ಯಾಂಡಲ್ ವುಡ್ ನಲ್ಲಿ ಸಂಭ್ರಮ..! ಯಾಕಂದ್ರೆ ಒಂದೇ ದಿನ ಇಬ್ಬರು ಸ್ಟಾರ್ಸ್ ಸಿನಿಮಾಗಳು ರಿಲೀಸ್ ಆಗ್ತಿವೆ, ಡಾಲಿ ಧನಂಜಯ್ ಅಭಿನಯದ ‘ಬಡವ ರಾಸ್ಕಲ್’ ಮತ್ತು ಸ್ಯಾಂಡಲ್ ವುಡ್ ಯುವರಾಜ ನಿಖಿಲ್ ಕುಮಾರಸ್ವಾಮಿ ಅಭಿನಯದ ರೈಡರ್ ರಿಲೀಸ್ ಆಗ್ತಿವೆ. ಈ ಎರಡು ಸಿನಿಮಾಗಳು ಈಗಾಗಲೆ ಸೋಶಿಯಲ್ ಮೀಡಿಯಾಗಳಲ್ಲಿ ಒಂದು ಟ್ರೆಂಡ್ ಹುಟ್ಟುಹಾಕಿವೆ. ರೈಡರ್ ಕೂಡ ಪ್ರಚಾರದಲ್ಲಿ ಹಿಂದೆ ಬಿದ್ದಿಲ್ಲಾ. ನಿಖಿಲ್ ಕೂಡ ಡಾಲಿ ಧನಂಜಯ್ ಸಿನಿಮಾಗೆ ವಿಶ್ ಮಾಡಿದ್ದಾರೆ, ಧನು ಕೂಡ ರೈಡರ್ ಗೆ ಶುಭ ಹಾರೈಸಿದ್ದಾರೆ.
ಇದೆಲ್ಲದರ ನಡುವೆ ಸ್ಯಾಂಡಲ್ ವುಡ್ ಕ್ವೀನ್ ಎರಡೂ ನಿನಿಮಾಗಳಿಗೆ ಶುಭ ಕೋರಿ ತಮ್ಮ ಇನ್ಸ್ಟಾ ಸ್ಟೋರಿಯಲ್ಲಿ ಆಲ್ ದಿ ಬೆಸ್ಟ್ ಎಂದು ಪೋಸ್ಟ್ ಹಾಕಿದ್ದಾರೆ.

ನಟಿ ರಮ್ಯಾ ಸ್ಯಾಂಡಲ್ ವುಡ್ ನಿಂದ ದೂರವಿರಬಹುದು. ಆದರೆ ಈಗಲೂ ಕನ್ನಡ ಸಿನಿಮಾಗಳ ಆಗುಹೋಗುಗಗಳ ಬಗ್ಗೆ ಗಮನಕೊಡುತ್ತಿರುತ್ತಾರೆ.ಇದೀಗ ಡಾಲಿ ಧನಂಜಯ್ ಅಭಿನಯದ ‘ಬಡವ ರಾಸ್ಕಲ್’, ನಿಖಿಲ್ ಕುಮಾರಸ್ವಾಮಿ ಅಭಿನಯದ ‘ರೈಡರ್’ ಸಿನಿಮಾಗೆ ರಮ್ಯಾ ಶುಭ ಹಾರೈಸಿದ್ದಾರೆ. ಎರಡೂ ಸಿನಿಮಾಗಳೂ ಒಂದೇ ದಿನ ಬಿಡುಗಡೆಯಾಗುತ್ತಿದೆ. ಈ ಹಿನ್ನಲೆಯಲ್ಲಿ ಎರಡೂ ಸಿನಿಮಾಗಳಿಗೆ ರಮ್ಯಾ ಶುಭ ಹಾರೈಸಿದ್ದಾರೆ.

ಜೊತೆಗೆ ಎಲ್ಲಾ ಕನ್ನಡ ಸಿನಿಮಾಗಳನ್ನೂ ನೋಡಿ ಪ್ರೋತ್ಸಾಹಿಸಿ ಎಂದು ಮನವಿ ಮಾಡಿದ್ದಾರೆ. ಇತ್ತೀಚೆಗೆ ಪ್ಯಾನ್ ಇಂಡಿಯಾ ಸಿನಿಮಾಗಳ ಹಾವಳಿಯಿಂದ ಕನ್ನಡದ ಮೂಲ ಸಿನಿಮಾಗಳಿಗೆ ತೊಂದರೆಯಾಗುತ್ತಿದೆ ಎಂಬ ಮಾತುಗಳ ಬೆನ್ನಲ್ಲೇ ರಮ್ಯಾ ಕನ್ನಡ ಸಿನಿಮಾ ಬೆಂಬಲಿಸಿ ಮಾತನಾಡಿದ್ದಾರೆ.
ಈ ಹಿಂದೆ ಡಾಲಿ ಧನಂಜಯ್ ಅಭಿನಯದ ರತ್ನನ್ ಪ್ರಪಂಚ ಸಿನಿಮಾ ಬಿಡುಗಡೆ ಆಗಿದ್ದ ವೇಳೆ ರಮ್ಯ ಸಿನಿಮಾವನ್ನು ಹೊಗಳಿ ಪೋಸ್ಟ್ ಶೇರ್ ಮಾಡಿದ್ದರು, ರತ್ನನ್ ಪ್ರಪಂಚ ಚಿತ್ರದಲ್ಲಿ ನಾಯಕಿ ಪಾತ್ರ ಮಾಡುವಂತೆ ತಮಗೆ ಆಫರ್ ಬಂದಿತ್ತು ಎಂಬ ವಿಚಾರವನ್ನು ರಮ್ಯ ಶೇರ್ ಮಾಡಿದ್ರು. ಒಟ್ಟಾರೆ ಚಿತ್ರರಂಗದಿಂದ ಕೊಂಚ ದೂರವೇ ಇದ್ರು ರಮ್ಯ ತಮ್ಮ ಸಿನಿಮಾ ಪ್ರೀತಿಯನ್ನು ಮುಂದುವರೆಸಿರುವುದು ಒಳ್ಳೆಯ ಹೆಜ್ಜೆ ಎನ್ನುತ್ತಿದ್ದಾರೆ ಸಿನಿ ಪ್ರೇಮಿಗಳು
****