31.5 C
Bengaluru
Tuesday, March 28, 2023
spot_img

ಕೋಪ ಬಿಟ್ಟು ‘ರಚ್ಚು’ ಪ್ರಚಾರಕ್ಕೆ ಬಂದ ಅಜಯ್..

ಒಂದು ಮನೆ ಅಂದ ಮೇಲೆ ಕಿತ್ತಾಟ, ಜಗಳ, ಮುನಿಸು, ಕೋಪ, ಭಿನ್ನಾಭಿಪ್ರಾಯ ಇದ್ದೇ ಇರುತ್ತದೆ. ಆದ್ರೆ ಅದು ಶಾಶ್ವತ ಅಲ್ಲಾ, ಆ ಮನಸ್ತಾಪವನೆಲ್ಲಾ ಮರೆತು ಒಂದಾಗಿ ಬದುಕು ನಡೆಸುವುದನ್ನು ನೋಡಿದ್ದೇವೆ. ಕನ್ನಡ ಚಿತ್ರ ರಂಗ ಕೂಡ ಒಂದು ಮನೆ ಇದ್ದ ಹಾಗೆ ಇಲ್ಲಿ ಒಬ್ಬರಿಗೊಬ್ಬರ ನಡುವೆ ಸಾಮರಸ್ಯ, ಮುನಿಸು, ಭಿನ್ನ ಅಭಿಪ್ರಾಯಗಳು ಸಾಮಾನ್ಯ ಅದೆಲ್ಲವನ್ನು ಮೀರಿ ಒಂದು ಉತ್ತಮ ಪಲಿತಾಂಶಕ್ಕಾಗಿ ಕೆಲಸ ಮಾಡಲು ಎಲ್ಲರು ಒಂದಾಗುತ್ತಿರುತ್ತಾರೆ.

ಲವ್ ಯೂ ರಚ್ಚು ಚಿತ್ರದ ನಾಯಕ ಅಜಯ್ ರಾವ್ ಮತ್ತು ನಿರ್ಮಾಪಕರಾದ ಗುರು ದೇಶಪಾಂಡೆ ನಡುವೆ ಭಿನ್ನಾಭಿಪ್ರಯ ದಿಂದ ಇಬ್ಬರ ಸಂಬಂಧದಲ್ಲಿ ಬಿರುಕು ಮೂಡಿತ್ತು. ಇದನ್ನು ಅಜಯ್ ಬಹಿರಂಗವಾಗಿಯೂ ವ್ಯಕ್ತಪಡಿಸಿದ್ರು, ಲವ್ ಯೂ ರಚ್ಚು ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮಕ್ಕೂ ಬರದೆ ಪ್ರಚಾರದಿಂದ ಹಿಂದೆ ಸರಿದಿದ್ರು.

ಈ ವೇಳೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ನಿರ್ಮಾಪಕರಾದ ಗುರು ದೇಶಪಾಂಡೆ ಮಾತನಾಡುತ್ತಾ ಅಜಯ್ ಅವರಿಗೆ ಆರೋಗ್ಯದ ಸಮಸ್ಯೆ ಇರುವುದರಿಂದ ಟ್ರೇಲರ್ ರಿಲೀಸ್ ಗೆ ಬಂದಿಲ್ಲ ಎಂಬ ಮಾಹಿತಿ ಇದೆ, ಇದರ ಹೊರತಾಗಿ ಏನೇ ವಿಚಾರ ಇದ್ರು ನೀವು ಅವರನ್ನೆ ಕೇಳಬೇಕು, ನಿರ್ಮಾಪಕನಾದ ನನಗೆ ನನ್ನ ಸಿನಿಮಾವನ್ನ ಗೆಲ್ಲಿಸಬೇಕು ಎಂಬ ತುಡಿತ ಇರುತ್ತದೆ ಹಾಗಾಗಿ ನಾನು ನನ್ನ ಸಿನಿಮಾವನ್ನ ಪ್ರಚಾರ ಮಾಡುತ್ತಿದ್ದೇನೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಅಜಯ್ ಅವರ ಗೈರು ಹಾಜರಿಯನ್ನು ವ್ಯಂಗ್ಯ ಮಾಡಿದ್ರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ನಾಯಕ ಅಜಯ್ ನಿರ್ಮಾಪಕರಾದ ಗುರು ದೇಶಪಾಂಡೆ ನನಗೆ ಅವಮಾನ ಆಗುವ ರೀತಿ ನಡೆದುಕೊಂಡಿದ್ದಾರೆ, ಹಾಗಾಗಿ ನಾನು ಅವರೊಂದಿಗೆ ಸಿನಿಮಾ ಪ್ರಚಾರಕ್ಕೆ ಭಾಗವಹಿಸುದಿಲ್ಲಾ ಎಂದಿದ್ರು. ನಾನು ವಯಕ್ತಿಕವಾಗಿ ಪ್ರಚಾರ ಮಾಡುತ್ತೇನೆ ಎಂದು ಹೇಳಿದ್ರು..

ಆದ್ರೆ ಈಗ ಸಿನಿಮಾ ಡಿಸೆಂಬರ್ 31 ಕ್ಕೆ ಬಿಡುಗಡೆ ಆಗುತ್ತಿದ್ದು ಅಜಯ್ ರಾವ್ ಕೂಡ ತಮ್ಮ ಕೋಪವನ್ನು ಬದಿಗಿಟ್ಟು ಚಿತ್ರದ ಪ್ರಚಾರದಲ್ಲಿ ಸಿನಿಮಾ ತಂಡದೊಂದಿಗೆ ಭಾಗವಹಿಸುವ ಮೂಲಕ ಸಿನಿಮಾ ಗೆಲುವಿಗೆ ಶ್ರಮಿಸುತ್ತಿದ್ದಾರೆ. ಒಟ್ಟಾರೆ ಏನೇ ಮನಸ್ತಾಪ ಇದ್ರು ಒಂದು ಸಿನಿಮಾ ಗೆಲುವಿಗಾಗಿ ಈ ರೀತಿ ಒಂದಾಗುವುದು, ಕನ್ನಡ ಚಿತ್ರರಂಗದ ಹಿತದೃಷ್ಟಿಯಿಂದ ಒಳ್ಳೆಯದು ಎಂದು ಮಾತನಾಡಿಕೊಳ್ಳುತ್ತಿದೆ ಗಾಂಧಿ ನಗರ.

****

Related Articles

Stay Connected

10,000FansLike
15,000FollowersFollow
5,000FollowersFollow
100,000SubscribersSubscribe

Latest Articles