‘ವಿಕ್ರಾಂತ್ ರೋಣ’ ಸಿನಿಮಾವನ್ನು ‘ರಂಗಿತರಂಗ’ ಖ್ಯಾತಿಯ ಅನುಪ್ ಭಂಡಾರಿ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ಸುದೀಪ್, ನಿರೂಪ್ ಭಂಡಾರಿ, ಶ್ರದ್ಧಾ ಶ್ರೀನಾಥ್, ರವಿಶಂಕರ್, ನೀತಾ ಅಶೋಕ್ ಇನ್ನೂ ಹಲವರು ನಟಿಸಿದ್ದಾರೆ. ಸಿನಿಮಾದಲ್ಲಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ವಿಶೇಷ ಹಾಡೊಂದರಲ್ಲಿ ಕುಣಿದಿದ್ದಾರೆ.
ಸಿನಿಮಾವು ಫೆಬ್ರವರಿ 24 ರಂದು ವಿಶ್ವದಾದ್ಯಂತ ಬಿಡುಗಡೆ ಆಗಲಿದೆ. ‘ಕೆಜಿಎಫ್’ ನಂತರ ಕನ್ನಡದ ಅತಿ ದೊಡ್ಡ ಪ್ಯಾನ್ ಇಂಡಿಯಾ ಸಿನಿಮಾ ಇದೆನ್ನಲಾಗುತ್ತಿದೆ. ‘ವಿಕ್ರಾಂತ್ ರೋಣ’ ಹತ್ತು ಭಾಷೆಗಳಲ್ಲಿ ಬಿಡುಗಡೆ ಆಗಲಿರುವುದು ವಿಶೇಷ. ಜೊತೆಗೆ 3ಡಿ ತಂತ್ರಜ್ಞಾನದಲ್ಲಿಯೂ ಸಿನಿಮಾ ಬಿಡುಗಡೆ ಆಗಲಿದೆ.
ವಿಕ್ರಾಂತ್ ರೋಣ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಹೊಸ ನಿರೀಕ್ಷೆ ಹುಟ್ಟಿಸಿದೆ. ಈ ಸಿನಿಮಾ ಕೆಜಿಎಫ್ ನ್ನು ಮೀರಿಸುತ್ತಾ ಎಂಬ ಪ್ರಶ್ನೆಗೆ ಸುದೀಪ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ ತಕ್ಕ ಉತ್ತರ ನೀಡಿದ್ದಾರೆ.
ವಿಕ್ರಾಂತ್ ರೋಣ ಕೆಜಿಎಫ್ ನ್ನು ಮೀರಿಸಬೇಕು ಎನ್ನುವ ಉದ್ದೇಶ ನಮಗಿಲ್ಲ. ಕೆಜಿಎಫ್ ಅಷ್ಟರಮಟ್ಟಿಗೆ ಯಶಸ್ಸು ಕಂಡಿದೆ ಎಂದರೆ ಅದಕ್ಕೆ ಅದರ ಹಿಂದಿನ ಪರಿಶ್ರಮವೇ ಕಾರಣ ಎಂದಿದ್ದಾರೆ.ಇತ್ತೀಚೆಗೆ ಪುಷ್ಪ ಸಿನಿಮಾ ಕೆಜಿಎಫ್ ನ್ನು ಮೀರಿಸುತ್ತೆ ಎಂದು ಟ್ರೋಲ್ ಗೊಳಗಾಗಿತ್ತು. ಆದರೆ ಕಿಚ್ಚ ಸುದೀಪ್ ತಮ್ಮ ಸಿನಿಮಾವನ್ನು ಕೆಜಿಎಫ್ ಗೆ ಹೋಲಿಸಿಕೊಳ್ಳಲು ಇಷ್ಪಪಟ್ಟಿಲ್ಲ. ನಮ್ಮ ಸಿನಿಮಾವೇ ಬೇರೆ, ಕೆಜಿಎಫ್ ಬೇರೆ ಎಂದಿದ್ದಾರೆ.

‘ಕೆಜಿಎಫ್’ ಸಿನಿಮಾ ಕರ್ನಾಟಕ ಸಿನಿಮಾರಂಗಕ್ಕೆ ಬದಲಾವಣೆ ತಂದಿದೆಯೇ? ಎಂಬ ಪ್ರಶ್ನೆಗೆ ಹೌದೆಂದೇ ಉತ್ತರಿಸಿದರು ಸುದೀಪ್, ”ಕರ್ನಾಟಕ ಚಿತ್ರರಂಗದಕ್ಕೆ ಕೆಲ ಬದಲಾವಣೆಗಳನ್ನು ಕೆಜಿಎಫ್ ಖಂಡಿತವಾಗಿಯೂ ತಂದಿದೆ. ಒಂದು ಒಳ್ಳೆಯ ಕತೆಯನ್ನು ಇಟ್ಟುಕೊಂಡು ಹೆಚ್ಚು ಜನರಿಗೆ ತಲುಪಿಸುವ ಪ್ರಯತ್ನ ಜನ ಖಂಡಿತ ನೋಡುತ್ತಾರೆ ಎಂಬುದನ್ನು ‘ಕೆಜಿಎಫ್’ ತೋರಿಸಿಕೊಟ್ಟಿದೆ. ಕೇವಲ ಹಣ ಖರ್ಚು ಮಾಡಿದರೆ ಜನ ನೋಡುತ್ತಾರೆ ಎಂದೇನೂ ಇಲ್ಲ. ಅವರ ಯೋಜನೆ ಚೆನ್ನಾಗಿತ್ತು, ಅವರ ಅಪ್ರೋಚ್ ಚೆನ್ನಾಗಿತ್ತು, ಅವರಿಗೆ ಒಳ್ಳೆಯ ಪ್ರತಿಫಲವೇ ಸಿಕ್ಕಿತು” ಎಂದರು ಸುದೀಪ್.
****