ಒಂಬತ್ತನೇ ದಿಕ್ಕು ಚಿತ್ರವನ್ನುದಯಾಳ್ ಪದ್ಮನಾಭನ್ ನಿರ್ದೇಶಿಸಿದ್ದು ಡಿ.31ಕ್ಕೆ ತೆರೆ ಮೇಲೆ ತರುವ ಪ್ಲಾನ್ ಮಾಡಿದ್ರು ಆದ್ರೆ ಡಿಸೆಂಬರ್ 31ಕ್ಕೆ ಸ್ಯಾಂಡಲ್ ವುಡ್ ನಲ್ಲಿ ಸಾಲು ಸಾಲು ಸಿನಿಮಾಗಳು ತೆರೆಗೆ ಬರುವುದು ಕನ್ಫರ್ಮ್ ಆಗಿದೆ, ಹಾಗಾಗಿ ಇದರಿಂದ ಥಿಯೇಟರ್ ಗಳ ಸಮಸ್ಯೆ ಎದುರಾಗಬಹುದು ಎಂದು ಮನಗಂಡು ಚಿತ್ರ ಬಿಡುಗಡೆಯನ್ನು ಚಿತ್ರತಂಡ ಮುಂದೂಡಿದೆ.
2022 ಜನವರಿ 28 ಕ್ಕೆ ಚಿತ್ರವನ್ನು ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ. ಸಿನಿಮಾವನ್ನು ಹೆಚ್ಚು ಜನರಿಗೆ ತಲುಪಿಸಬೇಕೆನ್ನುವ ಉದ್ದೇಶದಿಂದ ಈ ನಿರ್ಧಾರ ಮಾಡಲಾಗಿದೆ ಎಂದು ನಿರ್ದೇಶಕರಾದ ದಯಾಳ್ ತಿಳಿಸಿದ್ದಾರೆ.

ಒಂದು ದಿನದಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೆ ನಡೆಯುವ ಕಥೆಯನ್ನು ತೆರೆ ಮೇಲೆ ಹೇಳಿದ್ದೇವೆ ಎಂದು ನಿರ್ದೇಶಕ ದಯಾಳ್ ಹೇಳಿದ್ದಾರೆ. ಇನ್ನೂ ಚಿತ್ರದಲ್ಲಿ ಲೂಸ್‌ಮಾದ ಯೋಗಿ ಹಾಗೂ ಅದಿತಿ ಪ್ರಭುದೇವ ಕಾಣಿಸಿಕೊಂಡಿದ್ದಾರೆ.ಒಂಬತ್ತನೇ ದಿಕ್ಕು ಕಮರ್ಶಿಯಲ್ ಎಲಿಮೆಂಟ್ಸ್ ಇರುವ ಆಕ್ಷನ್ ಕಂ ಕ್ರೈಂ-ಥ್ರಿಲ್ಲೆರ್ ಸಬ್ಜೆಕ್ಟ್ ಸಿನಿಮಾ. ನಮ್ಮ ಕಾನೂನಿಲ್ಲಿ ಬರುವ ಸೆನ್ಸಿಟಿವ್ ವಿಷಯವೊಂದನ್ನು ಈ ಸಿನಿಮಾದಲ್ಲಿ ಹೇಳಿದ್ದೇವೆ ಎಂದಿದ್ದಾರೆ ನಿರ್ದೇಶಕರ ದಯಾಳ್ ಪದ್ಮನಾಭ್.

****