ಡಾಲಿ ಧನಂಜಯ್ ತಮ್ಮ ನಟನಾ ಕೌಶಲ್ಯ, ಡೈಲಾಗ್ಸ್ ಡೆಲವರಿ ಮತ್ತು ಮ್ಯಾನರಿಸಂ ಮೂಲಕ ಗಮನ ಸೆಳೆದಿದ್ದನ್ನು ನಾವು ನೋಡಿದ್ದೇವೆ, ಆದರೆ ಬಡವ ರಾಸ್ಕಲ್ ಚಿತ್ರದಲ್ಲಿ ಮಸ್ತ್ ಡ್ಯಾನ್ಸ್ ಮಾಡಿದ್ದಾರೆ. ಅದರ ಜಲಕ್ ಇಂದು ರಿಲೀಸ್ ಆಗಿರುವ ನಿನ್ನ ಮಕ್ಕೆ ಬೆಂಕಿ ಹಾಕಾ ಸಾಂಗ್ ನಲ್ಲಿ ಸಖತ್ ಸ್ಟೆಪ್ಸ್ ಹಾಕುವುದರ ಮೂಲಕ ತಾವು ಡ್ಯಾನ್ಸ್ ಗೂ ಸೈ ಎಂದಿದ್ದಾರೆ.
ಶಂಕರ್ ಗುರು ಸಾಹಿತ್ಯ ಬರೆದು, ವಾಸುಕಿ ವೈಭವ್ ಸಂಗೀತ ನೀಡಿ, ಆಂಟೋನಿ ದಾಸ್ (ಟಗರು ಬಂತು ಟಗರು) ದ್ವನಿಯಲ್ಲಿ ಮೂಡಿ ಬಂದಿರುವ ಹಾಡು ಲವ್ ಡಿಸಪಾಯಿಂಟ್ ಆಗುವ ಹುಡುಗರಿಗೆ ‘ನಿನ್ನ ಮಕ್ಕೆ ಬೆಂಕಿ ಹಾಕಾ’ ಹಾಡು ಸಿಗ್ನೇಚರ್ ಟ್ರ್ಯಾಕ್ ಆಗುವುದರಲ್ಲಿ ಯಾವ ಡೌಟು ಇಲ್ಲಾ.
ಈಗಾಗಲೇ ರಿಲೀಸ್ ಆಗಿರು ಎಲ್ಲಾ ಹಾಡುಗಳು ಒಂದಕ್ಕಿಂತ ಒಂದು ಭಿನ್ನವಾಗಿದ್ದು ಸಿನಿ ಪ್ರೇಮಿಗಳ ಮೆಚ್ಚುಗೆ ಪಡೆದುಕೊಂಡಿವೆ. ಡಿಸೆಂಬರ್ 24 ರಂದು ಬಿಡುಗಡೆ ಆಗುತ್ತಿರುವ ಬಡವ ರಾಸ್ಕಲ್ ಚಿತ್ರ ವಿಶಿಷ್ಟ ರೀತಿಯ ಪ್ರಚಾರದ ಮೂಲಕ ಜನ ಮಾನಸದಲ್ಲಿ ಅಚ್ಚೊತ್ತಿದೆ.
****