ಕಿಚ್ಚ ಸುದೀಪ್ ಮತ್ತು ಸಲ್ಲು ಭಾಯ್ ಮೊದಲಿನಿಂದಲೂ ಒಳ್ಳೆಯ ಸ್ನೇಹಿತರು ಎಂದು ಎಲ್ಲರಿಗೂ ಗೊತ್ತು, ಆದರೆ ಸಲ್ಲು ತಮ್ಮ ಸೊಹೈಲ್ ಖಾನ್ ಕೂಡ ಸುದೀಪ್ ಗೆ ಒಳ್ಳೆಯ ಸ್ನೇಹಿತ ಅಂತ ತುಂಬ ಜನಕ್ಕೆ ಗೊತ್ತಿರುವುದಿಲ್ಲಾ. ಆದ್ರೆ ಸಲ್ಲು ಅಷ್ಟೆ ಸೊಹೈಲ್ ಕುಚುಕುಗಳು ಹಾಗಾಗಿ ಕಿಚ್ಚ ಸುದೀಪ್ ಮತ್ತು ವಿಕ್ರಾಂತ್ ರೋಣ ಚಿತ್ರತಂಡ ಸೊಹೈಲ್ ಖಾನ್ ಅವರ 51ನೇ ಹುಟ್ಟು ಹಬ್ಬದಲ್ಲಿ ಪಾಲ್ಗೊಂಡ ಫೋಟೋಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ.

ಡಿಸೆಂಬರ್ 20 ರಂದು ನಡೆದಿರುವ ಸೊಹೈಲ್ ಖಾನ್ ಹುಟ್ಟು ಹಬ್ಬದಲ್ಲಿ ಸುದೀಪ್ ಫ್ಯಾಮಿಲಿ ಜೊತೆಗೆ, ಅನೂಪ್ ಬಂಡಾರಿ, ಅಕುಲ್ ಬಾಲಾಜಿ, ವಾಸುಕಿ ವೈಭವ್, ಮ್ಯೂಸಿಕ್ ಡೈರೆಕ್ಟರ್ ಅಜನೀಶ್ ಲೋಕನಾಥ್, ನಿರ್ಮಾಪಕರಾದ ಜಾಕ್ ಮಂಜು ಇನ್ನು ಮುಂತಾದವರು ಭಾಗಿಯಾಗಿದ್ದಾರೆ.
****