16.9 C
Bengaluru
Tuesday, February 7, 2023
spot_img

ಅಪ್ಪು ಜೊತೆಗಿನ ‘ಅರಸು’ ಸಾಂಗ್ ಮೆಲುಕು ಹಾಕಿದ ಸ್ಯಾಂಡಲ್ ವುಡ್ ಕ್ವೀನ್..!

ಸ್ಯಾಂಡಲ್‍ವುಡ್ ಕ್ವೀನ್ ನಟಿ ರಮ್ಯಾ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ನೆನೆದು ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.

ರಮ್ಯಾ ಅವರು ಅಪ್ಪು ಜೊತೆಗೆ ಅಭಿನಯಿಸಿದ್ದ ಅರಸು ಚಿತ್ರದ ಫೇಮಸ್ ‘ನಿನ್ನ ಕಂಡ ಕ್ಷಣದಿಂದ’ ಸಾಂಗ್‍ಗೆ  ಹಲವಾರು ಎಕ್ಸ್ಪ್ರೆಶನ್ ಇರುವ ವೀಡಿಯೊಂದನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ವಿಶೇಷವೆಂದರೆ ಈ ವೀಡಿಯೋದಲ್ಲಿ ರಮ್ಯಾ ತಮ್ಮ ಮುಖ ತೋರಿಸದೇ ಬದಲಿಗೆ ಎಮೋಜಿಯಂತಿರುವುದರ ಮೇಲೆ ಭಿನ್ನ, ಭಿನ್ನ ಎಕ್ಸ್‍ಪ್ರೇಶನ್‍ಗಳನ್ನು ಕ್ರಿಯೆಟ್ ಮಾಡಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಈ ಎಕ್ಸ್‍ಪ್ರೆಶನ್‍ಗಳ ಮಧ್ಯೆ ಹಿನ್ನೆಲೆಯಲ್ಲಿ ಅರಸು ಸಿನಿಮಾದ ಹಾಡನ್ನು ಕೇಳಬಹುದಾಗಿದೆ. 

ಈ ವೀಡಿಯೋ ಜೊತೆಗೆ ರಮ್ಯಾ ಕ್ಯಾಪ್ಷನ್‍ನಲ್ಲಿ ನಿನ್ನ ಕಂಡ ಕ್ಷಣದಿಂದ ಯಾಕೊ ನಾನು ನನ್ನಲಿಲ್ಲ. ಆ ನಿಮಿಷದಿಂದ ನನಗೇನಾಯ್ತಂತ ಗೊತ್ತೇ ಇಲ್ಲ. ಎಂದು ಕಾಣದ ಹರುಷ ಇಂದು ನಾನು ಕಂಡೆನಲ್ಲ. ಇದು ಪ್ರೀತಿ ಅಂತ ತಿಳಿದ ಮೇಲೆ ನೀನೆ ಎಲ್ಲಾ ಎಂಬ ಸಾಲುಗಳ ಜೊತೆಗೆ ಅಪ್ಪು, ಅರಸು ಎಂದು ಬರೆದುಕೊಂಡಿದ್ದಾರೆ. ಒಟ್ಟಾರೆ ಪುನೀತ್ ಇಲ್ಲದಿದ್ದರೂ ಅವರ ನೆನಪುಗಳು ಮಾತ್ರ ಎಲ್ಲರ ಮನಸ್ಸಿನಲ್ಲಿ ಜೀವಂತವಾಗಿದೆ ಎನ್ನುವುದಕ್ಕೆ ಇದೊಂದು ಮತ್ತೊಂದು ಉದಾಹರಣೆಯಾಗಿದೆ.

ರಮ್ಯಾ ಅವರು, ಪುನೀತ್ ಜೊತೆ ಅಭಿ ಸಿನಿಮಾದಲ್ಲಿ ನಟಿಸುವ ಮೂಲಕ ಮೊದಲ ಬಾರಿಗೆ ಚಂದನವನಕ್ಕೆ ಕಾಲಿಟ್ಟರು. ಚಿತ್ರರಂಗಕ್ಕೆ ಎಂಟ್ರಿ ಕೊಡುವ ಮುನ್ನ ದಿವ್ಯಾಸ್ಪಂದನ ಆಗಿದ್ದ ಇವರಿಗೆ ಪಾರ್ವತಮ್ಮ ರಾಜ್‍ಕುಮಾರ್ ಅವರು ರಮ್ಯಾ ಎಂದು ಹೆಸರಿಟ್ಟು, ಚಿತ್ರರಂಗಕ್ಕೆ ಪರಿಚಯಿಸಿದ್ರು. ತಮ್ಮ ಮೊದಲ ಸಿನಿಮಾದಲ್ಲಿಯೇ ಅಭಿಮಾನಿಗಳ ದಿಲ್ ಕದ್ದ ರಮ್ಯಾ ನಂತರ ಸಾಕಷ್ಟು ಸೂಪರ್ ಡೂಪರ್ ಹಿಟ್ ಚಿತ್ರಗಳನ್ನು ನೀಡುವ ಮೂಲಕ ಸ್ಯಾಂಡಲ್‍ ವುಡ್ ಕ್ವೀನ್ ಪಟ್ಟ ಗಿಟ್ಟಿಸಿಕೊಂಡಿರು.

ಅಪ್ಪು ಜೊತೆ ರಮ್ಯಾ ಇಲ್ಲಿಯವರೆಗೂ ಅಭಿ, ಆಕಾಶ್, ಅರಸು ಎಂಬ ಮೂರು ಚಿತ್ರಗಳಲ್ಲಿ ಅಭಿನಯಿಸಿದ್ದು, ಈ ಮೂರು ಚಿತ್ರಗಳು ಕನ್ನಡದಲ್ಲಿ ಹಿಟ್ ಸಿನಿಮಾಗಳಾಗಿತ್ತು. ಮತ್ತೊಮ್ಮೆ ಪುನೀತ್ ಹಾಗೂ ರಮ್ಯಾ ಕಾಂಬೀನೇಷನ್‍ನ ಮತ್ತೊಂದು ಸಿನಿಮಾದ ನಿರೀಕ್ಷೆ ಹೊಂದಿದ್ದ ಅಭಿಮಾನಿಗಳಿಗೆ ಅಪ್ಪು ಅಗಲಿಕೆ ಬಿಗ್ ಶಾಕ್ ನೀಡಿತ್ತು. ಈ ಸುದ್ದಿ ಅಭಿಮಾನಿಗಳಿಗಷ್ಟೇ ಅಲ್ಲದೇ ಕಲಾವಿದರಿಗೂ ಅಷ್ಟೇ ನೋವುಂಟು ಮಾಡಿತ್ತು. ತಮ್ಮ ಬೆಸ್ಟ್ ಫ್ರೆಂಡ್ ಅಪ್ಪು ಇನ್ನಿಲ್ಲ ಎಂಬ ವಿಚಾರ ರಮ್ಯಾ ಅವರಿಗೂ ಆಘಾತವನ್ನುಂಟು ಮಾಡಿತ್ತು. ಆದರೆ ಅಪ್ಪು ಇಲ್ಲದಿದ್ದರೂ ಅವರ ನೆನಪುಗಳನ್ನು ಎಲ್ಲರೂ ಸದಾ ಮೆಲುಕು ಹಾಕುತ್ತಿರುತ್ತಾರೆ.

****

Related Articles

Stay Connected

10,000FansLike
15,000FollowersFollow
5,000FollowersFollow
100,000SubscribersSubscribe

Latest Articles