ಲವ್ ಯೂ ರಚ್ಚು ಚಿತ್ರ ಇದೇ ಡಿಸೆಂಬರ್ 31ರಂದು ರಿಲೀಸ್ ಆಗುತ್ತಿದೆ, ಸಿನಿಮಾ ಪ್ರಚಾರ ಕೂಡ ಜೋರಾಗೆ ನಡೀತಿದೆ, ಆದರೆ ಚಿತ್ರದ ನಾಯಕ ಅಜಯ್ ರಾವ್ ಯಾವ ಕಾರ್ಯಕ್ರಮದಲ್ಲೂ ಕಾಣಿಸಿಕೊಳ್ಳದೆ, ಸಿನಿಮಾ ಪ್ರಚಾರವನ್ನು ಮಾಡದೆ ಸುಮ್ಮನಿದ್ದಾರೆ.
ಟ್ರೇಲರ್ ರಿಲೀಸ್ ಸಮಯದಲ್ಲೂ ಅಜಯ್ ರಾವ್ ಕಾಣಿಸಿಕೊಳ್ಳದಿದ್ದಕ್ಕೆ ನಿರ್ಮಾಪಕರಾದ ಗುರುದೇಶಪಾಂಡೆ ಪ್ರತಿಕ್ರಿಯಿಸಿ ಅಜಯ್ ಅವರು ಯಾಕೆ ಬಂದಿಲ್ಲಾ ಎಂದು ನನಗೂ ಗೊತ್ತಿಲ್ಲಾ ಅವರಿಗೆ ಆರೋಗ್ಯದ ಸಮಸ್ಯೆ ಇದೆ ಎಂದು ಹೇಳಿದ್ದರು, ಗುರು ಅವರ ಈ ಹೇಳಿಕೆ ಸಾಕಷ್ಟು ಅನುಮಾನ ಹುಟ್ಟು ಹಾಕಿತ್ತು. ಅಜಯ್ ರಾವ್ ಚಿತ್ರತಂಡದ ಜತೆಗೆ ವೈಮನಸ್ಸು ಹೊಂದಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು. ಈ ಬಗ್ಗೆ ಅಜಯ್ ರಾವ್ ಪ್ರತಿಕ್ರಿಯಿಸಿದ್ದು. ‘ಖಂಡಿತವಾಗಿಯೂ ನಿರ್ಮಾಪಕರ ನಡುವೆ ಮನಸ್ತಾಪ ಇದೆ. ಅವರಿಂದ ನನಗೆ ಅವಮಾನ ಆಗಿದೆ. ಅದೇನು ಎಂದು ನಾನು ಹೇಳೋಕೆ ಇಷ್ಟಪಡಲ್ಲ. ನಾನು ಚಿತ್ರತಂಡದ ಜೊತೆ ಕಾಣಿಸಿಕೊಳ್ಳಲ್ಲ. ವೈಯಕ್ತಿಕವಾಗಿ ಮಾತ್ರ ಪ್ರಚಾರ ಮಾಡ್ತಿನಿ’ ಎಂದಿದ್ದಾರೆ ಅಜಯ್.