ನಟಿ ಸಮಂತಾ ರುತ್ ಪ್ರಭು ಅವರು ಅಲ್ಲು ಅರ್ಜುನ್ ಅಭಿನಯದ ಪುಷ್ಪ: ದಿ ರೈಸ್‌ನ ಸಿನಿಮಾದಲ್ಲಿ ಐಟಂ ಸಾಂಗ್ ‘ಊ ಅಂತಾವಾ’ ಗೆ ಮಾತನಾಡಿದ್ದಾರೆ. ಸಮಂತಾ ಇನ್ಸ್ಟಾಗ್ರಾಮ್ ನಲ್ಲಿ ಈ ಬಗ್ಗೆ ಪೋಸ್ಟ್ ಹಾಕಿದ್ದಾರೆ. ಪುಷ್ಪ’ ಚಿತ್ರವನ್ನು ಖ್ಯಾತ ನಿರ್ದೇಶಕ ಸುಕುಮಾರ್ ನಿರ್ದೇಶಿಸಿದ್ದಾರೆ. ಇದರಲ್ಲಿ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಮುಖ್ಯ ಭೂಮಿಕೆಯಲ್ಲಿದ್ದಾರೆ. ಚಿತ್ರವು ಡಿಸೆಂಬರ್ 17, 2021 ರಂದು ಬಿಡುಗಡೆಯಾಗಿತ್ತು.

ಇತ್ತೀಚೆಗಷ್ಟೇ ಸಮಂತಾ ಅವರ ಸ್ಪೆಷಲ್ ಡ್ಯಾನ್ಸ್ ನಂಬರ್ ‘ಊ ಅಂತಾವಾ’ ವಿರುದ್ಧ ಪುರುಷರ ಸಂಘವೊಂದು ಕೇಸ್ ಹಾಕಿತ್ತು. ವರದಿಯ ಪ್ರಕಾರ, ಹಾಡಿನ ಸಾಹಿತ್ಯ ಮತ್ತು ದೃಶ್ಯಗಳ ವಿರುದ್ಧ ಮೊಕದ್ದಮೆ ಹೂಡಲಾಗಿದೆ.
“ನಾನು ಒಳ್ಳೆಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದೇನೆ. ನೆಗೆಟಿವ್ ಪಾತ್ರಗಳಲ್ಲೂ ಕಾಣಿಸಿಕೊಂಡಿದ್ದೇನೆ. ಹಾಸ್ಯ, ಗಂಭೀರವಾದ ಪಾತ್ರಗಳಲ್ಲಿಯೂ ಅಭಿನಯಿಸಿದ್ದೇನೆ. ಶೋ ಕೂಡ ಹೋಸ್ಟ್ ಮಾಡಿದ್ದೇನೆ. ಈ ಎಲ್ಲ ಕೆಲಸಗಳನ್ನು ಉತ್ತಮವಾಗಿ ನಿರ್ವಹಿಸಲು ಬಹಳ ಶ್ರಮವಹಿಸಿದ್ದೇನೆ. ಆದರೆ, ಮೋಹಕವಾಗಿ ಕಾಣಿಸಿಕೊಳ್ಳುವುದು ಮತ್ತೊಂದು ಹಂತದ ಶ್ರಮವನ್ನು ಬೇಡುತ್ತದೆ. ಅದು ಅತ್ಯಂತ ಕಠಿಣ ಕೆಲಸ.. ಎಲ್ಲರ ಪ್ರೀತಿಗೆ ಧನ್ಯವಾದಗಳು” ಎಂದು ಸಮಂತಾ ನಲ್ಲಿ ಬರೆದುಕೊಂಡಿದ್ದಾರೆ.