ಬೆಂಗಳೂರಿನಲ್ಲಿ ನಡೆದ 83 ಚಿತ್ರದ ಪ್ರೆಸ್ ಮೀಟ್ ವೇಳೆ ರಣವೀರ್ ಸಿಂಗ್ ಮತ್ತು ಕಿಚ್ಚ ಸುದೀಪ್ ದೀಪಿಕಾ ಪಡುಕೋಣೆ ಯೊಂದಿಗೆ ವೀಡಿಯೋ ಕಾಲ್ ನಲ್ಲಿ ಪರಸ್ಪರ ಕುಶಲೋಪರಿ ವಿನಿಮಯ ಮಾಡಿಕೊಂಡಿದ್ದಾರೆ ಈ ವೇಳೆ ದೀಪಿಕ ಸುದೀಪ್ ಅವರನ್ನು ಸರ್ ಎಂದು ಕೆರೆಯುತ್ತಾರೆ, ಆಗ ಸುದೀಪ್ ‘ಅಯ್ಯೋ ನನ್ನ ಸರ್ ಅಂತ ಕರೀಬೇಡಿ ಸುದೀಪ್ ಅಂತ ಹೇಳಿ ಎನ್ನುತ್ತಾರೆ, ದೀಪಿಕ ನಿಮ್ಮನ್ನ ಬೆಂಗಳೂರು ತುಂಬಾ ಮಿಸ್ ಮಾಡಿಕೊಳ್ಳುತ್ತಿದೆ ಮುಂದಿನ ಬಾರಿ ನೀವು ರಣವೀರ್ ಜೊತೆ ಬೆಂಗಳೂರಿಗೆ ಬನ್ನಿ ಎಂದು ಆಮಂತ್ರಿಸುತ್ತಾರೆ.ಈಗ ವೀಡಿಯೋ ಎಲ್ಲಡೆ ವೈರಲ್ ಆಗುತ್ತಿದೆ.
ಸ್ಯಾಂಡಲ್ ವುಡ್ ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವ್ರು 83 ಚಿತ್ರವನ್ನು ಅರ್ಪಿಸುತ್ತಿದ್ದಾರೆ, ಮೊನ್ನೆ ಬೆಂಗಳೂರಿನಲ್ಲಿ 83 ಚಿತ್ರದ ಪ್ರಸ್ ಮೀಟ್ ಕೂಡ ನಡೆದಿದ್ದು 1983 ರಲ್ಲಿ ವಿಶ್ವಕಪ್ ಗೆದ್ದ ಭಾರತ ಕ್ರಿಕೇಟ್ ತಂಡದ ನಾಯಕತ್ವ ವಹಿಸಿದ್ದ ಕಪೀಲ್ ದೇವ್ ಮತ್ತು ಶ್ರೀಕಾಂತ್ ಈ ಸುದ್ದಿಗೋಷ್ಟಿಯಲ್ಲಿ ಭಾಗವಹಿಸಿದ್ರು.
1983 ರಲ್ಲಿ ವಿಶ್ವಕಪ್ ಗೆದ್ದು ಇತಿಹಾಸ ಸೃಷ್ಟಿಸಿದ ತಂಡದ ಪರಿಶ್ರಮವನ್ನು ತೆರೆ ಮೇಲೆ ಕಣ್ತುಂಬಿಕೊಳ್ಳುವ ಅವಕಾಶ ಸದ್ಯ ಭಾರತೀಯರಿಗೆ ಸಿಗುತ್ತಿದೆ. ಕಬೀರ್ ಖಾನ್ ಚಿತ್ರವನ್ನು ನಿರ್ದೇಶಿಸಿದ್ದು, ಕಪೀಲ್ ದೇವ್ ಪಾತ್ರವನ್ನು ಕಣವೀರ್ ಸಿಂಗ್ ನಿರ್ವಹಿಸಿದ್ದಾರೆ. ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಇದ್ದು ಇದೇ ಡಿನಡಂಬರ್ 24 ರಂದು ದೇಶಾದ್ಯಂತ 83 ಚಿತ್ರ ತೆರೆ ಕಾಣುತ್ತಿದೆ.
****