16.9 C
Bengaluru
Tuesday, February 7, 2023
spot_img

ದಾಖಲೆ ನಿರ್ಮಿಸಿದ ಕೆಜಿಎಫ್ ಗೆ 3ನೇ ವರ್ಷ

ರಾಕಿಂಗ್ ಸ್ಟಾರ್ ಯಶ್ ನಟಿಸಿದ್ದ ಕೆಜಿಎಫ್ ಚಾಪ್ಟರ್ 1 ಕನ್ನಡ ಚಿತ್ರರಂಗದ ಇತಿಹಾಸ ಬದಲಿಸಿದ ಸಿನಿಮಾ. ಸ್ಯಾಂಡಲ್ವುಡ್ ಟ್ರೆಂಡ್ ಹುಟ್ಟುಹಾಕಿದ ಸೂಪರ್ ಹಿಟ್ ಚಿತ್ರ. ಕನ್ನಡದ ಬೇಡಿಕೆ ಹೆಚ್ಚಿಸಿದ್ದ ಚಿತ್ರ. ಮೇಕಿಂಗ್, ಗಳಿಕೆಯಲ್ಲಿ ಸಖತ್ ಸದ್ದು ಮಾಡಿದ್ದ ಕೆಜಿಎಫ್ ಹಲವು ದಾಖಲೆಗಳನ್ನ ಮಾಡಿತ್ತು.

ಇದುವರೆಗೂ ಯಾವ ಕನ್ನಡ ಸಿನಿಮಾನೂ ಮಾಡದ ಹಲವು ದಾಖಲೆಗಳು ಕೆಜಿಎಫ್ ಹೆಸರಿನಲ್ಲಿದೆ. ಡಿಸೆಂಬರ್ 20, 2018ರಲ್ಲಿ ತೆರೆಕಂಡಿದ್ದ ಕೆಜಿಎಫ್ ಚಿತ್ರಕ್ಕೆ ಈಗ ಮೂರು ವರ್ಷದ ಸಂಭ್ರಮ. ಈ ದಿನವನ್ನು ಟ್ವಿಟರ್ ನಲ್ಲಿ ಟ್ರೆಂಡ್ ಮಾಡುವ ಮೂಲಕ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಕನ್ನಡ ಚಿತ್ರರಂಗದ ಪಾಲಿಗೆ ಹಲವು ದಾಖಲೆ ಮಾಡಿದ್ದ ಈ ಪ್ಯಾನ್ ಇಂಡಿಯಾ ಸಿನಿಮಾ ಮೂಲಕ ಯಶ್ ನ್ಯಾಷನಲ್ ಸ್ಟಾರ್ ಆದರು.

ಕನ್ನಡ, ತೆಲುಗು, ಹಿಂದಿ, ಮಲಯಾಳಂ ಹಾಗೂ ತಮಿಳು ಭಾಷೆಯಲ್ಲಿ ತೆರೆಕಂಡಿದ್ದ ಕೆಜಿಎಫ್ ಸಿನಿಮಾ ಒಟ್ಟಾರೆ 250 ಕೋಟಿ ಗಳಿಸಿರುವ ದಾಖಲೆ ಇದೆ.ಇದೀಗ ಕೆಜಿಎಫ್ 2 ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ಮುಂದಿನ ವರ್ಷ ಏಪ್ರಿಲ್ 14 ರಂದು ಚಿತ್ರ ತೆರೆಗೆ ಬರಲಿದೆ. ಇದುವರೆಗೆ ಚಿತ್ರತಂಡ ಟೀಸರ್ ಬಿಟ್ಟು ಯಾವುದೇ ಅಪ್ ಡೇಟ್ ಕೊಟ್ಟಿಲ್ಲ. ಹಾಗಿದ್ದರೂ ಕೆಜಿಎಫ್ ಸಿನಿಮಾದ ಕ್ರೇಜ್ ಎಲ್ಲಾ ಭಾಷೆಗಳಲ್ಲೂ ಉನ್ನತ ಮಟ್ಟದಲ್ಲೇ ಇದೆ.

****

Related Articles

Stay Connected

10,000FansLike
15,000FollowersFollow
5,000FollowersFollow
100,000SubscribersSubscribe

Latest Articles