ಸರಳತೆಯ ಸಾಮ್ರಾಟ್, ಕರುನಾಡ ರತ್ನ, ಪ್ರೀತಿಯ ಅಪ್ಪು, ಚಂದನವನದ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ನಮ್ಮನಗಲಿ ಒಂದೂವರೆ ತಿಂಗಳು ಕಳೆದಿವೆ. ಆದರೂ ಅವರು ನಮ್ಮೊಂದಿಗೆ ಇಲ್ಲ ಎಂಬುದನ್ನು ನಂಬಲು ಆಗುತ್ತಿಲ್ಲ. ರಾಜ್ಯಾದ್ಯಂತ ಅಪ್ಪು ಸ್ಮರಣೆ ಕಾರ್ಯಕ್ರಮಗಳು ನಡೆಯುತ್ತಲೇ ಇದೆ.ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅದ್ಧೂರಿ ಕೇಕ್ ಶೋ ನಡೆಯುತ್ತಿದೆ. ನಗರದ ಸೆಂಟ್ ಜೋಸೆಫ್ ಶಾಲಾ ಆವರಣದಲ್ಲಿ ಕೇಕ್ ಶೋ ಆಯೋಜನೆ ಮಾಡಲಾಗಿದೆ. ಈ ಶೋಗೆ ಪುನೀತ್ ರಾಜ್ಕುಮಾರ್ ಎಂಟ್ರಿ ಕೊಟ್ಟಿದ್ದಾರೆ.
ಕೇಕ್ ಪ್ರದರ್ಶನಕ್ಕಾಗಿಯೇ ಇನ್ಸ್ಟಿಟ್ಯೂಟ್ ಆಫ್ ಬೇಕಿಂಗ್ ಅಂಡ್ ಕೇಕ್ ಆರ್ಟ್ನ ಸುಮಾರು ವಿವಿಧ ಡಿಸೈನ್ಗಳನ್ನು ತಯಾರಿಸಿದ್ದಾರೆ. 47ನೇ ವರ್ಷದ ಈ ಕೇಕ್ ಶೋನಲ್ಲಿ ಸ್ಟಾಚ್ಯು ಆಫ್ ಲಿಬರ್ಟಿ ಮತ್ತು ಜಂಗಲ್ ಬುಕ್ ಈ ಬಾರಿಯ ಮೈನ್ ಅಟ್ರಾಕ್ಷನ್ ಆಗಿದೆ. ಇದರ ಜೊತೆಗೆ ಅಪ್ಪುವಿನ ಪ್ರತಿಮೆ ಎಲ್ಲರ ಕಣ್ಮನ ಸೆಳೆಯಿತು.
ಕಸ್ತೂರಿ ನಿವಾಸ ಕನ್ನಡಿಗರ ಮನೆಮಾತಾಗಿದೆ. ಜೊತೆಗೆ ‘ರಾಜಕುಮಾರ’ ಸಿನಿಮಾದಲ್ಲಿ ಅಪ್ಪು ಹೆಗಲ ಮೇಲೆ ಪಾರಿವಾಳ ಕೂತಿರುವ ಚಿತ್ರ ಸಖತ್ ಟ್ರೆಂಡ್ ಆಗಿತ್ತು. ಹೀಗಾಗಿ ಅದರಂತೆಯೇ ಅಪ್ಪು ಪ್ರತಿಮೆ ಅನಾವರಣಗೊಂಡಿದೆ. ಎಂದೆಂದಿಗೂ ನೀವು ನಮ್ಮ ಹೃದಯದಲ್ಲಿ ಜೀವಂತ ಎಂದು ಈ ಪ್ರತಿಮೆ ಕೆಳಗಡೆ ಬರೆಯಲಾಗಿದೆ. ಕೇಕ್ ಶೋಗೆ ಬಂದ ಪ್ರತಿಯೊಬ್ಬರು ಅಪ್ಪು ಕೇಕ್ ಪ್ರತಿಮೆ ಜೊತೆ ಫೋಟೋ ತೆಗಿಸಿಕೊಳ್ಳುತ್ತಿದ್ದಾರೆ.
ಕರುನಾಡ ರಾಜಕುಮಾರನ ನೆನಪು ಸದಾ ಜನರ ಮನದಲ್ಲಿ ಇದ್ದೇ ಇರುತ್ತದೆ. ಅವರು ಬಿಟ್ಟುಹೋದ ಆದರ್ಶಗಳು ಅವರ ಸಮಾಜಸೇವೆ ಎಲ್ಲರಿಗೂ ಆದರ್ಶ. ಇಂತಹ ಪ್ರೀತಿಯ ಅಪ್ಪುಗೆ ಕೇಕ್ನ ಮುಖಾಂತರ ನಮನ ಸಲ್ಲಿಸಿದ್ದು ವಿಶೇಷವಾಗಿತ್ತು.ಈ ಪುತ್ಥಳಿಯನ್ನು ಸುಮಾರು 150 ಕೆಜೆ ಚಾಕೋಲೆಟ್, ಸಕ್ಕರೆ, ಅಡಿಬಲ್ ಕಲರ್ ಬಳಸಿಕೊಂಡು ಮಾಡಲಾಗಿದೆ. 3 ಅಡಿ ಉದ್ದ,ಅಗಲವಿದೆ. 15 ದಿನಗಳಲ್ಲಿ ಇಬ್ಬರು ವಿದ್ಯಾರ್ಥಿಗಳು ತಯಾರಿಸಿದ್ದಾರೆ.