ಸ್ಯಾಂಡಲ್ ವುಡ್ ಯುವರಾಜ ನಿಖಿಲ್ ಕುಮಾರಸ್ವಾಮಿ, ಡಾಲಿ ಧನಂಜಯ್ ಅವರಿಗೆ ಕರೆ ಮಾಡಿ ಬಡವ ರಾಸ್ಕಲ್ ಚಿತ್ರಕ್ಕೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದ್ದಾರೆ, ಹೀಗೆ ಶುಭ ಹಾರೈಸಲು ಕಾರಣ ಏನಂತೀರಾ ಮುಂದೆ ಓದಿ.
ನಿಖಿಲ್ ಕುಮಾರಸ್ವಾಮಿ ನಟಿಸಿರುವ ‘ರೈಡರ್’ ಸಿನಿಮಾ ಇದೇ ತಿಂಗಳು 24ನೇ ತಾರೀಖು ಬಿಡುಗಡೆ ಆಗಲಿದೆ. ಅದೇ ದಿನ ಡಾಲಿ ಧನಂಜಯ್ ನಟನೆಯ ‘ಬಡವ ರಾಸ್ಕಲ್’ ಸಿನಿಮಾ ಸಹ ಬಿಡುಗಡೆ ಆಗುತ್ತಿದೆ. ‘ರೈಡರ್’ ಚಿತ್ರ ತಂಡ ಸುದ್ದಿಗೋಷ್ಠಿ ನಡೆಸಿ ಸಿನಿಮಾದ ಪ್ರಚಾರ ಕಾರ್ಯ ಮಾಡಿತು. ಈ ಸಂದರ್ಭದಲ್ಲಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ”ಡಾಲಿ ಧನಂಜಯ್ ಅವರ ಸಿನಿಮಾ ಸಹ ನಮ್ಮ ಸಿನಿಮಾ ಬಿಡುಗಡೆ ಆಗುತ್ತಿರುವ ದಿನವೇ ಬಿಡುಗಡೆ ಆಗಲಿದೆ. ಆ ಸಿನಿಮಾಕ್ಕೂ ಒಳ್ಳೆಯದಾಗಲಿ” ಎಂದರು.
”ಬಡವ ರಾಸ್ಕಲ್’ ಸಿನಿಮಾದ ಟ್ರೈಲರ್ ನೋಡಿದೆ ಖುಷಿಯಾಯಿತು. ಕೂಡಲೇ ಡಾಲಿ ಧನಂಜಯ್ ಅವರಿಗೆ ನಾನು ಕರೆ ಮಾಡಿ ಮಾತನಾಡಿ ಅವರಿಗೆ ಅಭಿನಂದನೆ ಸಲ್ಲಿಸಿದೆ. ‘ಬಡವ ರಾಸ್ಕಲ್’ ಹಾಗೂ ‘ರೈಡರ್’ ಎರಡೂ ಸಿನಿಮಾಗಳು ಹಿಟ್ ಆಗಬೇಕು, ಎರಡೂ ಸಿನಿಮಾಕ್ಕೂ ಒಳ್ಳೆಯಾಗಬೇಕು ಎಂಬ ಮಾತನ್ನು ಅವರ ಬಳಿಯೂ ಹೇಳಿದೆ. ಅವರೂ ಸಹ ಅದನ್ನೇ ಹೇಳಿದರು” ಎಂದರು ನಿಖಿಲ್.
****