23.8 C
Bengaluru
Thursday, December 8, 2022
spot_img

ಕನ್ನಡಕ್ಕಾಗಿ ಪ್ರಾಣ ಕೊಡಲು ಸಿದ್ದ ಶಿವಣ್ಣ..!

ಕನ್ನಡಕ್ಕಾಗಿ ನಾವು ಪ್ರಾಣ ಕೊಡುವುದಕ್ಕೂ ಸಿದ್ಧ ಎಂದು ಮರಾಠಿಗರ ಕೃತ್ಯಕ್ಕೆ ನಟ ಶಿವರಾಜ್‌ಕುಮಾರ್‌ ಖಡಕ್‌ ಎಚ್ಚರಿಕೆ ನೀಡಿದ್ದಾರೆ.

ಡಾಲಿ ಧನಂಜಯ್‌ ಅಭಿನಯದ ಬಡವ ರಾಸ್ಕಲ್‌ ಸಿನಿಮಾ ಕುರಿತ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾಷೆ ಎಲ್ಲರಿಗೂ ಮುಖ್ಯ. ಭಾರತದಲ್ಲಿರಬೇಕಾದರೆ ಎಲ್ಲ ಭಾಷೆಯೂ ಮುಖ್ಯ. ಯಾವುದೇ ರಾಜ್ಯದ ಸಂಸ್ಕೃತಿಯನ್ನು ಮೊದಲು ಗೌರವಿಸಬೇಕು. ಒಂದು ರಾಜ್ಯದಲ್ಲಿದ್ದರೆ ಆ ರಾಜ್ಯದ ಜನತೆಯನ್ನು ಗೌರವದಿಂದ ಕಾಣಬೇಕು. ಕನ್ನಡ ಬಾವುಟ ಸುಟ್ಟು ಹಾಕಿದ್ದು ಅಕ್ಷಮ್ಯ ಎಂದು ಶಿವಣ್ಣ ಕಿಡಿಕಾರಿದ್ದಾರೆ.

ನಾನು ಚೆನ್ನೈನಲ್ಲಿ ಹುಟ್ಟಿದ್ದೇನೆ. ಅಲ್ಲೇ ಓದಿ ಬೆಳೆದಿದ್ದೇನೆ. ಆ ಭಾಗದಲ್ಲಿ ಅದೇ ಭಾಷೆಯನ್ನು ಮಾತನಾಡಬೇಕು. ನಾನು ಎಲ್ಲಾ ಭಾಷೆಗಳ ಸಿನಿಮಾ ನೋಡುತ್ತೇನೆ. ಯಾರು ಯಾವುದೇ ರಾಜ್ಯದಲ್ಲಿದ್ದರೂ ಮೊದಲು ಅಲ್ಲಿನ ಭಾಷೆಯನ್ನು ಪ್ರೀತಿಸಬೇಕು. ಮನುಷ್ಯನಿಗೆ ಕೋಪ ಬಂದರೆ ಯಾವ ಮಟ್ಟಕ್ಕೆ ಬೇಕಾದರೂ ಹೋಗುತ್ತೆ. ಇಂತಹ ಕೃತ್ಯಗಳ ವಿರುದ್ಧ ಸರ್ಕಾರ ಹೋರಾಡಬೇಕು. ಮತಕ್ಕಾಗಿ ಯಾರೂ ರಾಜಕೀಯ ಮಾಡಬಾರದು ಎಂದು ತಿಳಿಸಿದ್ದಾರೆ.

ಕರ್ನಾಟಕದಲ್ಲಿ ನಮ್ಮ ಭಾಷೆಗೆ ನಾವು ಪ್ರಾಣ ಕೊಡುವುದಕ್ಕೂ ಸಿದ್ಧ. ಇದರಿಂದಾನೇ ಪ್ರಾಣ ಹೋಗಬೇಕೆಂದರೆ ಹೋಗಲಿ ಬಿಡಿ. ಬಾವುಟ ಸುಟ್ಟು ಹಾಕಿದ್ದು, ತಾಯಿಯನ್ನೇ ಸುಟ್ಟಂತೆ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ.

****

Related Articles

Stay Connected

10,000FansLike
15,000FollowersFollow
5,000FollowersFollow
100,000SubscribersSubscribe

Latest Articles