ರಾಜ್ ಬಿ ಶೆಟ್ಟಿ ಈಗ ಮೊದಲ ಬಾರಿಗೆ ಸಿಂಗಲ್ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಆ ಹಾಡು ಇಂದು (ಡಿ.20) ರಿಲೀಸ್ ಆಗಿದೆ. ಇದೇ ಮೊದಲ ಬಾರಿಗೆ ರಾಜ್ ಬಿ ಶೆಟ್ಟಿ ಸಿಂಗಲ್ ಹಾಡಿನಲ್ಲಿ ನಟಿಸಿದ್ದು ಅವರ ಡ್ಯಾನ್ಸ್ ನೋಡಲು ಬಲು ಮಜವಾಗಿದೆ.
ಅಲ್ಲಾ ನವೀನಾ… ನಿಂಗೆ ಬೇಕಿತ್ತೇನೋ ಪ್ರೀತಿ.. ಚೆನ್ನಾಗಿದ್ದಲ್ಲೂ ಮಗನೆ ಬಂತು ಈ ಪಜೀತಿ..
ಅಲ್ಲಾ ನವೀನಾ ಟೈಟಲ್ ಹಾಡನ್ನು ಕನ್ನಡ ಮತ್ತು ತಮಿಳು ಭಾಷೆಯಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಅವನೇ ಶ್ರೀಮನ್ನಾರಾಯಣ ಚಿತ್ರದ ಹ್ಯಾಂಡ್ಸ್ ಅಪ್ ಹಾಡಿಗೆ ಸಾಹಿತ್ಯ ಬರೆದಿದ್ದ ನಾಗಾರ್ಜುನ ಶರ್ಮಾ ಮೊದಲ ಬಾರಿಗೆ ಸಂಗೀತ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ. ಪೆಪ್ಪಿ ಹಾಡಿನಲ್ಲಿ ರಾಜ್ ಬಿ ಶೆಟ್ಟಿ ಹೊಸಬರಾದ ಅಥರ್ವ ಮತ್ತು ಸ್ಫೂರ್ತಿ ಉಡಿಮನೆ ಜೊತೆ ತೆರೆ ಹಂಚಿಕೊಂಡಿದ್ದಾರೆ.
ನಿರ್ದೇಶಕ ನಾಗಾರ್ಜುನ ಶರ್ಮಾ ಬರೆದಿರುವ ಈ ಹಾಡು ಕಾಮಿಡಿ-ಪಾಥೋ ಸಾಂಗ್ ಆಗಿದೆ. ರಾಜಾ ರಾಣಿ ಖ್ಯಾತಿಯ ರಿಯಾಲಿಟಿ ಶೋ ಮುರುಗಾ ಮಾಸ್ಟರ್ ನೃತ್ಯ ಸಂಯೋಜನೆ ಮಾಡಿದ್ದಾರೆ ಮತ್ತು ಆನಂದ್ ರಾಗ ಸಂಯೋಜಿಸಿದ್ದಾರೆ.
ಎರಡು ಆವೃತ್ತಿಗಳನ್ನು ದಾಸನ್ ಈ ಹಾಡು ಹಾಡಿದ್ದಾರೆ, ವಿಶ್ವಾಸ್ ಕೌಂಡಿನ್ಯ ಛಾಯಾಗ್ರಹಣ ಮಾಡಿದ್ದಾರೆ. ಇಡೀ ಹಾಡನ್ನು ಬೆಂಗಳೂರಿನ ರೆಸಾರ್ಟ್ನಲ್ಲಿ ಚಿತ್ರೀಕರಿಸಲಾಗಿದೆ. ಈ ಹಾಡು (ಡಿಸೆಂಬರ್ 20) ಇಂದು ಪರಮಾವ್ ಮ್ಯೂಸಿಕ್ ಮತ್ತು ಐರಾ ಮ್ಯೂಸಿಕ್ ಚಾನೆಲ್ನಲ್ಲಿ ಬಿಡುಗಡೆ ಆಗಿದ್ದು ನೋಡುಗರು ಸಖತ್ ಎಂಜಾಯ್ ಮಾಡುತಿದ್ದಾರೆ.
****