21.8 C
Bengaluru
Wednesday, November 30, 2022
spot_img

ಗರುಡ ಗಮನ ಆಯ್ತು, ಈಗ ‘ಅಲ್ಲಾ ನವೀನಾ’ ಟ್ರ್ಯಾಕ್ ನಲ್ಲಿ ರಾಜ್ ಬಿ ಶೆಟ್ಟಿ..!

ಒಂದು ಮೊಟ್ಟೆಯ ಕಥೆ ಮತ್ತು ಗರುಡ ಗಮನ ವೃಷಭ ವಾಹನದಲ್ಲಿ ತಮ್ಮ ನಟನೆ ಹಾಗೂ ನಿರ್ದೇಶನದ ಮೂಲಕ ಎಲ್ಲರನ್ನು ಬೆರಗುಗೊಳಿಸಿರುವ ರಾಜ್ ಬಿ ಶೆಟ್ಟಿ ಈಗ ಮೊದಲ ಬಾರಿಗೆ ಸಿಂಗಲ್ ಆಗಿ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಆ ಹಾಡು ಡಿಸೆಂಬರ್​ 20 ರಂದು ರಿಲೀಸ್​ ಆಗುತ್ತಿದೆ. ಇದೇ ಮೊದಲ ಬಾರಿಗೆ ರಾಜ್​ ಬಿ ಶೆಟ್ಟಿ ಸಿಂಗಲ್ ಹಾಡಿನಲ್ಲಿ ನಟಿಸಿರುವುದನ್ನು ನೋಡುವುದಕ್ಕೆ ಎಲ್ಲರೂ ಕಾತುರದಿಂದ ಕಾಯುತ್ತಿದ್ದಾರೆ. 

‘ಅಲ್ಲಾ ನವೀನಾ’ ಟೈಟಲ್ ಹಾಡನ್ನು ಕನ್ನಡ ಮತ್ತು ತಮಿಳು ಭಾಷೆಯಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಅವನೇ ಶ್ರೀಮನ್ನಾರಾಯಣ ಚಿತ್ರದ ಹ್ಯಾಂಡ್ಸ್ ಅಪ್ ಹಾಡಿಗೆ ಸಾಹಿತ್ಯ ಬರೆದಿದ್ದ ನಾಗಾರ್ಜುನ ಶರ್ಮಾ ಮೊದಲ ಬಾರಿಗೆ ಸಂಗೀತ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ. ಪೆಪ್ಪಿ ಹಾಡಿನಲ್ಲಿ ರಾಜ್ ಬಿ ಶೆಟ್ಟಿ ಹೊಸಬರಾದ ಅಥರ್ವ ಮತ್ತು ಸ್ಫೂರ್ತಿ ಉಡಿಮನೆ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ. ನಿರ್ದೇಶಕರೇ ಬರೆದಿರುವ ಈ ಹಾಡು ಕಾಮಿಡಿ-ಪಾಥೋ ಸಾಂಗ್ ಆಗಿದೆ. ರಾಜಾ ರಾಣಿ ಖ್ಯಾತಿಯ ರಿಯಾಲಿಟಿ ಶೋ ಮುರುಗಾ ಮಾಸ್ಟರ್ ಮತ್ತು ಆನಂದ್ ರಾಗ ಸಂಯೋಜಿಸಿದ್ದಾರೆ.

ಎರಡು ಆವೃತ್ತಿಗಳನ್ನು ದಾಸನ್ ಈ ಹಾಡು ಹಾಡಿದ್ದಾರೆ, ವಿಶ್ವಾಸ್ ಕೌಂಡಿನ್ಯ ಛಾಯಾಗ್ರಹಣ ಮಾಡಿದ್ದಾರೆ. ಇಡೀ ಹಾಡನ್ನು ಬೆಂಗಳೂರಿನ ರೆಸಾರ್ಟ್‌ನಲ್ಲಿ ಚಿತ್ರೀಕರಿಸಲಾಗಿದೆ. ಈ ಹಾಡು ಡಿಸೆಂಬರ್ 20 ರಂದು ಪರಮಾವ್ ಮ್ಯೂಸಿಕ್ ಮತ್ತು ಐರಾ ಮ್ಯೂಸಿಕ್ ಚಾನೆಲ್‌ನಲ್ಲಿ ಬಿಡುಗಡೆಯಾಗಲಿದ್ದು, ಫಸ್ಟ್​ ಲುಕ್​ ಪೋಸ್ಟರ್​​ ರಿಲೀಸ್ ಆಗಿದೆ. ಅಟ್ಲಾಸ್​ ಸೈಕಲ್​ ನಲ್ಲಿ ಅಥರ್ವ ಹಾಗೂ ರಾಜ್​ ಬಿ ಶೆಟ್ಟಿ ಕೂತಿರುವ ಪೋಸ್ಟರ್​ ಸಖತ್​ ಕ್ಯೂರಿಯಾಸಿಟಿ ಮೂಡಿಸಿದೆ. ಪೋಸ್ಟರ್​ನಲ್ಲೇ ನಗು ಬರುತ್ತಿದೆ. ಇನ್ನೂ ಈ ಹಾಡು ಎಷ್ಟು ನಗು ತರಿಸುತ್ತೋ ಅಂತ ನೆಟ್ಟಿಗರು ಕಮೆಂಟ್​ ಮಾಡುತ್ತಿದ್ದಾರೆ.

****

Related Articles

Stay Connected

10,000FansLike
15,000FollowersFollow
5,000FollowersFollow
100,000SubscribersSubscribe

Latest Articles