ಸದ್ಯದ ಪರಿಸ್ಥಿತಿಯಲ್ಲಿ ನಟ ಶಿವರಾಜ್ ಕುಮಾರ್ ಅವರು ಹೋರಾಟದ ನೃತೃತ್ವವಹಿಸಿಕೊಳ್ಳಬೇಕು. ಅವರ ನೇತೃತ್ವದಲ್ಲಿ ಎಲ್ಲರೂ ಹೋರಾಟದಲ್ಲಿ ಭಾಗವಹಿಸಬೇಕು. ನಾನು ಟ್ವಿಟ್ಟರ್ ಹೋರಾಟ ವಿರೋಧಿ, ನನಗೆ ಟ್ವಿಟ್ಟರ್ ಹೋರಾಟದಲ್ಲಿ ನಂಬಿಕೆ ಇಲ್ಲ. ಹಾಗಾಗಿ ನೇರವಾಗಿ ಬೆಳಗಾವಿಗೆ ಬಂದು ಹೋರಾಟದಲ್ಲಿ ಭಾಗವಹಿಸಿದ್ದೇನೆ. ಎಂದಿದ್ದಾರೆ
ಕನ್ನಡ ಪರವಾದ ಹೋರಾಟಕ್ಕೆ ಚಿತ್ರರಂಗದವರು ಪೂರ್ಣ ಬೆಂಬಲ ನೀಡಬೇಕು, ಹೋರಾಟದಲ್ಲಿ ಸಕ್ರಿಯರಾಗಿ ಪಾಲ್ಗೊಳ್ಳಬೇಕು, ಕೇವಲ ಟ್ವೀಟ್ ಮಾಡಿ ಸುಮ್ಮನಾಗಬಾರದು ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.
ಬೆಳಗಾವಿಯಲ್ಲಿ ಮಾಧ್ಯಮಗಳೊಟ್ಟಿಗೆ ಮಾತನಾಡಿದ ಇಂದ್ರಜಿತ್ ಲಂಕೇಶ್, ”ಎಂಇಎಸ್ ಪುಂಡರ ವಿರುದ್ಧ ಕನ್ನಡಪರ ಸಂಘಟನೆಗಳು ಮಾಡುತ್ತಿರುವ ಹೋರಾಟಕ್ಕೆ ಕನ್ನಡ ಚಿತ್ರರಂಗ ಬೆಂಬಲ ನೀಡಬೇಕು” ಎಂದರು.
ಕನ್ನಡದ ಸಿನಿಮಾ ನಟರು ಕೇವಲ ಟ್ವೀಟ್ ಮಾಡಿ ಸುಮ್ಮನಾಗುತ್ತಿದ್ದಾರೆ. ಹಾಗಾಗಬಾರದು, ಅವರು ಬೆಳಗಾವಿಗೆ ಬಂದು ಹೋರಾಟಗಾರರೊಂದಿಗೆ ಜೊತೆ ನಿಲ್ಲಬೇಕು. ಡಾ.ರಾಜಕುಮಾರ್,ಅಂಬರೀಶ್ ಬಳಿಕ ಚಿತ್ರರಂಗದಲ್ಲಿ ನಾಯಕತ್ವ ಕೊರತೆ ಆಗಿದೆ. ಕನ್ನಡ ಪರವಾದ ಹೋರಾಟಕ್ಕೆ ಬನ್ನಿ ಎಂದು ಚಿತ್ರರಂಗವನ್ನು ಕರೆಯಬೇಕಾದ ಸ್ಥಿತಿ ಬಂದಿದೆ” ಎಂದರು ಇಂದ್ರಜಿತ್.
ಸದ್ಯದ ಪರಿಸ್ಥಿತಿಯಲ್ಲಿ ನಟ ಶಿವರಾಜ್ ಕುಮಾರ್ ಅವರು ಹೋರಾಟದ ನೃತೃತ್ವವಹಿಸಿಕೊಳ್ಳಬೇಕು. ಅವರ ನೇತೃತ್ವದಲ್ಲಿ ಎಲ್ಲರೂ ಹೋರಾಟದಲ್ಲಿ ಭಾಗವಹಿಸಬೇಕು. ನಾನು ಟ್ವಿಟ್ಟರ್ ಹೋರಾಟ ವಿರೋಧಿ, ನನಗೆ ಟ್ವಿಟ್ಟರ್ ಹೋರಾಟದಲ್ಲಿ ನಂಬಿಕೆ ಇಲ್ಲ. ಹಾಗಾಗಿ ನೇರವಾಗಿ ಬೆಳಗಾವಿಗೆ ಬಂದು ಹೋರಾಟದಲ್ಲಿ ಭಾಗವಹಿಸಿದ್ದೇನೆ. ಕನ್ನಡ ಭಾಷೆಯ ಉಳಿವಿಗಾಗಿ ಚಿತ್ರರಂಗದವರು ಸ್ವಯಂಇಚ್ಛೆಯಿಂದ ಬೀದಿಗಿಳಿದು ಹೋರಾಟ ಮಾಡಬೇಕಿತ್ತು. ಆದರೆ ಅದಾಗಿಲ್ಲ” ಎಂದರು ಇಂದ್ರಜಿತ್
ನಟ ರಾಜ್‌ಕುಮಾರ್ ಅವರನ್ನು ಗೋಕಾಕ್ ಚಳವಳಿಗೆ ಕರೆತಂದಿದ್ದು ನಮ್ಮ ತಂದೆ ಪಿ.ಲಂಕೇಶ್. ಡಾ.ರಾಜ್‌ಕುಮಾರ್ ಅವರ ಅನುಮತಿ ಇಲ್ಲದೆ ”ಗೋಕಾಕ್ ಹೋರಾಟಕ್ಕೆ ಡಾ.ರಾಜ್’ ಎಂದು ಲೇಖನ ಬರೆದಿದ್ದರು. ಇದರಿಂದ ರಾಜ್‌ಕುಮಾರ್ ಅವರು ಹೋರಾಟಕ್ಕೆ ಧುಮುಕಿದರು” ಎಂದರು ಇಂದ್ರಜಿತ್.
ಡಬ್ಬಿಂಗ್ ಸಿನಿಮಾಗಳ ಬಗ್ಗೆಯೂ ಮಾತನಾಡಿದ ನಿರ್ದೇಶಕ ಇಂದ್ರಜಿತ್, ”ಇತ್ತೀಚಿನ ದಿನಗಳಲ್ಲಿ ಬೇರೆ ಭಾಷೆಯ ಸಿನಿಮಾಗಳು ಡಬ್ಬಿಂಗ್ ಆಗಿ ಕನ್ನಡದಲ್ಲಿ ಬಿಡುಗಡೆ ಆಗುತ್ತಿವೆ. ಇದು ಹೀಗೆ ಮುಂದುವರೆದರೆ ನಮ್ಮ ಕನ್ನಡದ ನಟ-ನಟಿಯರು ಕೇವಲ ಡಬ್ಬಿಂಗ್ ಕಲಾವಿದರಾಗಿ ಉಳಿಯಬೇಕಾಗುತ್ತದೆ” ಎಂದರು.