ಬಹುನಿರೀಕ್ಷಿತ ‘ಪುಷ್ಪ’ಸಿನಿಮಾ ವಿಶ್ವದಾದ್ಯಂತ ಡಿಸೆಂಬರ್17ರಂದು ಬಿಡುಗಡೆಯಾಗಿದೆ. ಅಲ್ಲು ಅರ್ಜುನ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವುದರಿಂದ ಈ ಸಿನಿಮಾ ಮೇಲಿರುವ ನಿರೀಕ್ಷೆ ದುಪ್ಪಟ್ಟಾಗಿತ್ತು. ಆದರೆ,ಈ ಸಿನಿಮಾ ಫಸ್ಟ್ ಶೋ ಮುಗಿಯುತ್ತಿದ್ದಂತೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅಲ್ಲು ಅರ್ಜು ಫ್ಯಾನ್ಸ್ ಮಾತ್ರ ಸೂಪರ್ ಡೂಪರ್ ಹಿಟ್ ಅಂದರು. ಉಳಿದವರು ಈ ಸಿನಿಮಾ ಅಷ್ಟೇನು ಇಲ್ಲ. ಹೇಳಿಕೊಳ್ಳುವಷ್ಟು ಇಲ್ಲ. ಒಂದು ಬಾರಿ ಕಷ್ಟ ಪಟ್ಟು ನೋಡಬೇಕು ಎಂದು ಹೇಳುತ್ತಿದ್ದಾರೆ. ಆದರೆ, ಎಲ್ಲ ಚಿತ್ರಮಂದಿರಗಳಲ್ಲು ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ.

ಪುಷ್ಪ ಸಿನಿಮಾ ಬಿಡುಗಡೆಗೆ ಮುನ್ನ 10 ಕೆಜಿಎಫ್ ಸಿನಿಮಾ ಸೇರಿಸಿದರೆ ಒಂದು ‘ಪುಷ್ಪ’ ಎಂದು ಅಭಿಮಾನಿಗಳು ಪೋಸ್ ಕೊಡುತ್ತಿದ್ದರು. ಆದರೆ, ಸಿನಿಮಾ ಹೇಳಿಕೊಳ್ಳುವಂತ ಪ್ರತಿಕ್ರಿಯೆ ಸಿಗದಿದ್ದಾಗ ಎಲ್ಲರೂ ಸೈಲೆಂಟ್ ಆಗಿದ್ದಾರೆ. ಪುಷ್ಪ ಸಿನಿಮಾ ಇದೀಗ ಟ್ರೋಲಿಗರಿಗೆ ಆಹಾರವಾಗಿದೆ. ಕನ್ನಡ ಸಿನಿಮಾಗಳ ಬಗ್ಗೆ ಮಾತನಾಡುವ ಮುನ್ನ ಸಾವಿರ ಸಲ ಯೋಚಿಸಿ ಮಾತನಾಡಿ ಎಂದು ಟ್ರೋಲಿಗರು ಆಕ್ರೋಶ ಹೊರಹಾಕಿದ್ದಾರೆ.
‘ಕೆಜಿಎಫ್’ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಸಿನಿಮಾ ಬಗ್ಗೆ ಎಲ್ಲ ಕಡೆಗಳಲ್ಲೂ ಮೆಚ್ಚುಗೆ ವ್ಯಕ್ತವಾಗಿತ್ತು. ‘ಪುಷ್ಪ’ ಸಿನಿಮಾ ನಮ್ಮ ಕೆಜಿಎಫ್ ಚಿತ್ರದ ಅರ್ಧಕ್ಕೂ ನಿಲ್ಲೋಕೆ ಸಾಧ್ಯವಿಲ್ಲ ಎಂದು ಅನೇಕರು ಕಮೆಂಟ್ ಮಾಡುತ್ತಿದ್ದಾರೆ. ಸದ್ಯ, ಈ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಕೆಜಿಎಫ್ ಬಿಡುಗಡೆ ಆದಾಗ ಅದನ್ನು ಆಧರಿಸಿದ, ತಲೆ ಮೇಲೆ ಹೊತ್ತು ಸಕ್ಸಸ್ ಮಾಡಿದ ಅಭಿಮಾನಿಗಳು ಇದೆಲ್ಲವನ್ನು ಕೆಳುಸ್ಕೊಂಡು ಸೈಲೆಂಟಾಗಿ ಇದ್ರು, ಯಾವಾಗ ಪುಷ್ಪ ಚಿತ್ರ ಬಿಡುಗಡೆ ಆಗಿ ಅದರ ಬಂಡವಾಳ ಹೊರಗೆ ಬಂತೋ ಸಿಕ್ಕಿದೇ ಚಾನ್ಸುಅಂತ ಸರಿಯಾಗಿ ಜಾಡಿಸ್ತಿದ್ದಾರೆ. ಕನ್ನಡದವರು ಇರಲಿ, ಅವರ ರಾಜ್ಯದ ಅಭಿಮಾನಿಗಳೇ ಪುಷ್ಪ ಸಿನಿಮಾವನ್ನು ಟ್ರೋಲ್ ಮಾಡುತ್ತಿದ್ದಾರೆ.