18.9 C
Bengaluru
Tuesday, February 7, 2023
spot_img

ಓಟಿಟಿ ಗೆ ಬರ್ತಿದೆ ಶಿವಣ್ಣ ಅಭಿನಯದ ಭಜರಂಗಿ 2

ಶಿವರಾಜಕುಮಾರ್ ನಟನೆಯ ‘ಭಜರಂಗಿ 2’ ಸಿನಿಮಾ ಕೂಡ ಓಟಿಟಿ ಪ್ಲಾಟ್​ಫಾರ್ಮ್​ನಲ್ಲಿ ವೀಕ್ಷಣೆಗೆ ಲಭ್ಯವಾಗುತ್ತಿದೆ. ಎ. ಹರ್ಷ ನಿರ್ದೇಶನದ ಈ ಸಿನಿಮಾ ಬಿಗ್​ ಬಜೆಟ್​ ನಲ್ಲಿ ಮೂಡಿಬಂದಿದೆ. ಅ.29ರಂದು ಅದ್ದೂರಿಯಾಗಿ ಚಿತ್ರಮಂದಿರಗಳಲ್ಲಿ ‘ಭಜರಂಗಿ 2’ ಬಿಡುಗಡೆ ಆಗಿತ್ತು. ಥಿಯೇಟರ್​ನಲ್ಲಿ ಈ ಚಿತ್ರವನ್ನು ಮಿಸ್​ ಮಾಡಿಕೊಂಡವರು ‘ಜೀ 5’ ಮೂಲಕ ಮನೆಯಲ್ಲೇ ಕುಳಿತು ನೋಡಬಹುದು. ಡಿ.23 ರಿಂದ ‘ಜೀ 5’ ಆ್ಯಪ್​ ಮೂಲಕ ‘ಭಜರಂಗಿ 2’ ಚಿತ್ರ ಬಿತ್ತರ ಆಗಲಿದೆ.

ಅ.29ರಂದು ಅದ್ದೂರಿಯಾಗಿ ‘ಭಜರಂಗಿ 2’ ಸಿನಿಮಾ ರಾಜ್ಯಾದ್ಯಂತ ಬಿಡುಗಡೆ ಆಗಿತ್ತು. ಮುಂಜಾನೆ ಅನೇಕ ಕಡೆಗಳಲ್ಲಿ ಶೋ ಆರಂಭವಾಗಿತ್ತು. ಎಲ್ಲೆಡೆ ಹೌಸ್​ ಫುಲ್​ ಪ್ರದರ್ಶನವಾಗಿ, ಚಿತ್ರಕ್ಕೆ ಒಳ್ಳೆಯ ರೆಸ್ಪಾನ್ಸ್​ ಸಿಗುತ್ತಿರುವುದು ನೋಡಿ ಇಡೀ ತಂಡಕ್ಕೆ ಖುಷಿ ಆಗಿತ್ತು. ಕೆಲವು ಚಿತ್ರಮಂದಿರಗಳಿಗೆ ಶಿವಣ್ಣ ಭೇಟಿ ನೀಡಿದ್ದರು. ಅದಾಗಿ ಕೆಲವೇ ಗಂಟೆಗಳು ಕಳೆಯುವುದರೊಳಗೆ ಕನ್ನಡ ಚಿತ್ರರಂಗದ ಪಾಲಿಗೆ ಕಹಿ ಸುದ್ದಿಯೊಂದು ಸಿಡಿಲಿನಂತೆ ಬಂದೆರಗಿತ್ತು. ಪುನೀತ್​ ರಾಜ್​ಕುಮಾರ್​ ಹೃದಯಾಘಾತದಿಂದ ನಿಧನರಾದರು ಎಂಬ ಸುದ್ದಿ ಕೇಳಿ ಎಲ್ಲವೂ ಸ್ತಬ್ದವಾದಂತಾಗಿತ್ತು. ಆ ಘಟನೆ ಬಳಿಕ ಚಿತ್ರಮಂದಿರದ ಕಡೆಗೆ ಬರಲು ಬಹುತೇಕರು ಹಿಂದೇಟು ಹಾಕಿದ್ದರು.

ಈಗ ಮತ್ತೆ ಮೊದಲಿನಂತೆ ಚಿತ್ರಗಳು ಥಿಯೇಟರ್ ನಲ್ಲಿ ಬಿಡುಗಡೆ ಆಗುತ್ತಿವೆ, ಥೆಯೇಟರ್ ಜೊತೆ ಜೊತೆಗೆ ಓಟಿಟಿ ಮೂಲಕ ಸಿನಿಮಾ ವೀಕ್ಷಿಸುವವರ ಸಂಖ್ಯೆ ಹೆಚ್ಚಿದೆ. ಅಂಥವರಿಗಾಗಿ ಶಿವರಾಜಕುಮಾರ್​ ನಟನೆಯ ‘ಭಜರಂಗಿ 2’ ಚಿತ್ರ ಭರ್ಜರಿ ಮನರಂಜನೆ ನೀಡಲಿದೆ. ಈ ಚಿತ್ರದಲ್ಲಿ ನಾಯಕಿಯಾಗಿ ಭಾವನಾ ಮೆನನ್​ ಅಭಿನಯಿಸಿದ್ದಾರೆ. ಭಜರಂಗಿ ಲೋಕಿ, ಶ್ರುತಿ, ಶಿವರಾಜ್​ ಕೆ.ಆರ್​. ಪೇಟೆ ಸೇರಿದಂತೆ ಅನೇಕ ಕಲಾವಿದರು ಬಣ್ಣ ಹಚ್ಚಿದ್ದಾರೆ. ಡಿ.23 ರಿಂದ ‘ಜೀ 5’ ಆ್ಯಪ್​ ಮೂಲಕ ‘ಭಜರಂಗಿ 2’ ಚಿತ್ರ ಬಿತ್ತರ ಆಗಲಿದೆ. ಈ ಸಿನಿಮಾಗೆ ಖ್ಯಾತ ನಿರ್ಮಾಪಕರಾದ ಜಯಣ್ಣ-ಭೋಗೇಂದ್ರ ಬಂಡವಾಳ ಹೂಡಿದ್ದಾರೆ. ಅರ್ಜುನ್​ ಜನ್ಯ ಸಂಗೀತ ನಿರ್ದೇಶನ ಮಾಡಿದ್ದಾರೆ.

****

Related Articles

Stay Connected

10,000FansLike
15,000FollowersFollow
5,000FollowersFollow
100,000SubscribersSubscribe

Latest Articles