ರೆಬಲೆ ಸ್ಟಾರ್ ಅಂಬರೀಶ್ ಅವರ ಪುತ್ರ ಅಭಿಷೇಕ್ ಅಂಬರೀಶ್ ಸದ್ಯ ತಾಯಿ ಸುಮಲತ ಅಂಬರೀಶ್ ಅವರ ರಾಜಕೀಯ ಕೆಲಸಗಳಲ್ಲಿ ಬ್ಯುಸಿಯಾಗಿರುತ್ತಾರೆ. ಇದರ ಜೊತೆಗೆ ಸುಕ್ಕಾ ಸೂರಿ ಅವರ ನಿರ್ದೇಶನದ ಬ್ಯಾಡ್ ಮ್ಯಾನರ್ಸ್ ಚಿತ್ರದಲ್ಲಿ ಅಭಿಷೇಕ್ ಅಂಬರೀಶ್ ಅಭಿನಯಿಸುತ್ತಿದ್ದು 2022 ಕ್ಕೆ ಚಿತ್ರ ತೆರೆ ಕಾಣಲಿದೆ. ಇದೆಲ್ಲದರ ನಡುವೆ ತಂದೆ ರೆಬಲ್ ಸ್ಟಾರ್ ಅಂಬರೀಶ್ ಅವರಂತೆ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ ಸಾರ್ವಜನಿಕರೊಂದಿಗೆ ಬೆರೆಯುವ ಅಭಿಷೇಕ್ ಹೆಚ್ಚೆಚ್ಚು ಸಲುಗೆಯಿಂದ ಇರುತ್ತಾರೆ.
ಇತ್ತೀಚೆಗೆ ಒಂದು ಖಾಸಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅಭಿಷೇಕ್ ಅವರನ್ನು ಚಿಕ್ಕ ಮಗುವೊಂದು ಅಂಕಲ್ ಅಂಕಲ್ ಎಂದು ಕೂಗುತ್ತದೆ, ತಕ್ಷಣ ಅಭಿ ಆ ಮಗು ಕಡೆ ತಿರುಗಿ ‘ ಅಂಕಲ್ ಅಂತೀಯಲ್ಲೋ ಯಾರೋ ಅಂಕಲ್ಲು ಅಂತ ನಗ್ತಾರೆ, ವೇದಿಕೆ ಮುಂದೆ ಇದ್ದ ಅಭಿಮಾನಿಯೊಬ್ಬರು ಅಣ್ಣಂಗೆ ಇನ್ನು ಮದ್ವೆ ಆಗಿಲ್ಲಾ ಅಂತ ಕಾಲೆಳೀತಾರೆ, ನಾನು 7 ನೇ ಕ್ಲಾಸು ಎರಡ್ ಸಲ ಫೇಲು ಕಣೋ ಅಂತ ಸ್ಮೈಲ್ ಮಾಡಿ ಆ ಮಕ್ಕಳನ್ನು ವೇದಿಕೆ ಮೇಲೆ ಕರೆದು ಪ್ರೀತಿಯಿಂದ ಮಾತನಾಡಿಸಿ ಫೋಟೋ ತೆಗೆಸಿಕೊಳ್ಳುತ್ತಾರೆ. ಈ ವೀಡಿಯೋ ಈಗ ಸಕತ್ ವೈರಲ್ ಆಗಿದ್ದು, ಈ ವೀಡಿಯೋ ನೋಡಿದ ಅಭಿಮಾನಿಗಳು ಅಭಿ ತೇಟ್ ಅವರಪ್ಪನ್ನ ಹಾಗೆ ಅನ್ನುತ್ತಿದ್ದಾರೆ. ಇವೆಲ್ಲದರ ಜೊತೆಗೆ ರಾಜಕೀಯ ಕಾರ್ಯಕ್ರಮಗಳಲ್ಲೂ ಕಾಣಿಸಿಕೊಳ್ಳುತ್ತಿರುವುದನ್ನು ನೋಡುತ್ತಿದ್ದರೆ ಮಂಡ್ಯದಲ್ಲಿ ರಾಜಕೀಯ ನೆಲೆಯನ್ನು ಸಜ್ಜು ಮಾಡಿಕೊಳ್ಳುತ್ತಿದ್ದಾರಾ ಅಭಿಷೇಕ್ ಅಂಬರೀಶ್ ಗುಸು ಗುಸು ಕೇಳಿ ಬರುತ್ತಿದೆ.
****