ನಟ ಪುನೀತ್ ರಾಜ್‍ಕುಮಾರ್ ಅವರ ಅಭಿಮಾನಿಗಳು, ಬ್ಲಾಕ್ ಸ್ಟೋನ್‍ನಲ್ಲಿ ಪುನೀತ್ ಅವರ ಪುತ್ಥಳಿ ನಿರ್ಮಿಸಿ ವಿಶೇಷ ನಮನ ಸಲ್ಲಿಸಿದ್ದಾರೆ. ವಿಶೇಷ ಅಂದರೆ ಬ್ಲಾಕ್ ಸ್ಟೋನ್ ಪುತ್ಥಳಿ ಇಡೀ ಕರ್ನಾಟಕದಲ್ಲೇ ದಾವಣಗೆರೆಯಲ್ಲಿ ಮೊದಲ ಬಾರಿಗೆ ಅನಾವರಣ ಮಾಡಲಾಗಿದ್ದು, ಉತ್ತರ ಪ್ರದೇಶ ಮೂಲದ ಶಿಲ್ಪಿ ಇದನ್ನು ನಿರ್ಮಿಸಿರುವುದು ವಿಶೇಷವಾಗಿದೆ.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇಲ್ಲ ಎಂಬ ಸಂಗತಿ ಇನ್ನು ಜನರ ಮನದಿಂದ ಮಾಸಿಲ್ಲ. ಅವರ ನೆನಪಿನಲ್ಲಿ ಇಂದಿಗು ಕಾರ್ಯಕ್ರಮ, ಅನ್ನದಾಸೋಹ, ನೇತ್ರದಾನ , ಗೀತ ಗಾಯನ ನಡೆಯುತ್ತಲೇ ಇದೆ. ದಾವಣಗೆರೆ ಜಿಲ್ಲೆ ಹೆಬ್ಬಾಳ ಗ್ರಾಮದಲ್ಲಿ ಅಪ್ಪುವಿನ ಪುತ್ತಳಿ ಅನಾವರಣಗೊಂಡಿದೆ. ಗ್ರಾಮದ ಹೆಬ್ಬಾಳ್ ರುದ್ರೇಶ್ವರ ಸ್ಬಾಮೀ ಮಠದಿಂದ ಸ್ವಲ್ಪ ದೂರದ ವೃತ್ತದಲ್ಲಿ ಅಪ್ಪು ಪುತ್ತಳಿ ಪ್ರತಿಷ್ಠಾಪಿಸಲಾಗಿದೆ. ಪುತ್ಥಳಿ ಅನಾವರಣವನ್ನು ಇಡೀ ಗ್ರಾಮ ಹಬ್ಬದ ರೀತಿ ಸಂಭ್ರಮಿಸಿದೆ. ಪುತ್ಥಳಿ ಅನಾವರಣ ಒಂದು ಕಡೆಯಾದ್ರೆ ನೇತ್ರದಾನಕ್ಕೆ ಅರ್ಜಿ ಸ್ವೀಕಾರ, ಯುವಕರಿಂದ ರಕ್ತದಾನ ಹೀಗೆ ಹತ್ತಾರು ರೀತಿಯಲ್ಲಿ ಅಪ್ಪು ಹೆಸರ ಧ್ಯಾನಿಸುತ್ತಿದ್ದಾರೆ.
ಹೆಬ್ಬಾಳು ಗ್ರಾಮದ ಪುನೀತ್ ಅಭಿಮಾನಿಗಳು, ಅಪ್ಪು ಸ್ಮರಣಾರ್ಥ ಪುತ್ಥಳಿಯೊಂದನ್ನು ಸ್ಥಾಪಿಸಲು ಬಯಸಿದ್ರು. ಗ್ರಾಮಸ್ಥರೆಲ್ಲ ಸಹಕಾರದಿಂದ ಪುನೀತ್ ಪ್ರತಿಮೆ ಪ್ರತಿಷ್ಠಾಪನೆಗೊಂಡಿತು. ಈ ಕಾರ್ಯಕ್ಕೆ ಸ್ಥಳೀಯ ಶ್ರೀ ಮಹಾಂತ ರುದ್ರಯೋಗಿ ಸ್ವಾಮೀಜಿ ಸಾನಿಧ್ಯವಹಿಸಿ ಕೈ ಜೋಡಿಸಿ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಸಿಕೊಟ್ಟಿದ್ದಾರೆ. ಕಲ್ಲಿನ ಈ ಆಕರ್ಷಣೀಯ ಪುತ್ತಳಿ ಅರಳಿದ್ದು ಉತ್ತರ ಪ್ರದೇಶ ಕಲಾವಿದ ವಿಪಿನ್ ಬಾದುರಿ ಕೈಯಲ್ಲಿ. ಸಾಗರದ ಬಳಿ ಯಾವುದೋ ಒಂದು ಕಲಾಕೃತಿ ರಚಿಸುತ್ತಿದ್ದರು. ಹೆಬ್ಬಾಳಿನ ರಮೇಶ ಸೇರಿದಂತೆ ಇತರರು ಅವರನ್ನು ಸಂಪರ್ಕಿಸಿ ಪುನೀತ್ ಪುತ್ಥಳಿ ರಚನೆಗೆ ಮನವಿ ಮಾಡಿದ್ರು. ಒಂದೇ ಮಾತಿಗೆ ಒಪ್ಪಿಕೊಂಡ ಕಲಾವಿದ, ನಿಗದಿತ ಸಮಯಕ್ಕಿಂತ ಮೊದಲೇ ಪುತ್ಥಳಿಯನ್ನು ರಚಿಸಿದ್ರು. ಪುತ್ಥಳಿಗೆ ಅಂದಾಜು 90 ಸಾವಿರ ರೂಪಾಯಿ ಸೇರಿ ಪ್ರತಿಷ್ಠಾಪನೆ ಹಾಗೂ ಅನಾವರಣ ಕಾರ್ಯಕ್ರಮಕ್ಕೆ ಒಟ್ಟು 2.5 ಲಕ್ಷ ರೂಪಾಯಿ ವೆಚ್ಚವಾಗಿದೆ.
ಒಟ್ಟಾರೆ ಇಡೀ ಕರ್ನಾಟಕದಲ್ಲೇ ಈ ರೀತಿಯ ಕಪ್ಪು ಶಿಲೆಯ ಅಪ್ಪು ಪುಥಳಿ ಇಲ್ಲದೆ ಇದ್ದು, ದಾವಣಗೆರೆ ಜಿಲ್ಲೆಯಲ್ಲಿ ಮೊದಲ ಬಾರಿಗೆ ಅನಾವರಣ ಮಾಡಲಾಗಿದೆ, ಇಡೀ ಹೆಬ್ಬಾಳು ಗ್ರಾಮವೇ ನೇತ್ರದಾನ ಮಾಡಲು ಚಿಂತಿಸಿರುವುದು ನಿಜಕ್ಕು ಹೆಮ್ಮೆಯ ಸಂಗತಿಯಾಗಿದೆ.