ಡಾರ್ಲಿಂಗ್ ಕೃಷ್ಣ ಅವರ ನಿರ್ದೇಶನದಲ್ಲಿ ‘ಲವ್ ಮಾಕ್ಟೇಲ್ 2’ ಮೂಡಿಬರುತ್ತಿದೆ. ಹಾಗಾದರೆ ಈ ಚಿತ್ರದ ಬಿಡುಗಡೆ ಯಾವಾಗ ಎಂದು ಎಲ್ಲರು ಪ್ರಶ್ನೆ ಕೇಳುತಿದ್ದರು ಅದಕ್ಕೂ ಈಗ ಉತ್ತರ ಸಿಕ್ಕಿದೆ ಹೌದು ಲವ್ ಮಾಕ್ಟೇಲ್ 2 ಚಿತ್ರ 2022 ರ ಫೆಬ್ರವರಿ 11 ಕ್ಕೆ ಬಿಡುಗಡೆ ಆಗಲಿದೆ ಎಂದು ಮಿಲನ ನಾಗರಾಜ್ ತಮ್ಮ ಇನ್ಸ್ಟಾಗ್ರಾಮ್ ಅಲ್ಲಿ ಪೋಸ್ಟ್ ಮಾಡಿದ್ದಾರೆ.
2020ರ ಆರಂಭದಲ್ಲಿ ರಿಲೀಸ್ ಆದ ‘ಲವ್ ಮಾಕ್ಟೇಲ್’ ಸಿನಿಮಾ ಸೂಪರ್ ಹಿಟ್ ಆಯಿತು. ನಟಿ ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಜೋಡಿಯಾಗಿ ಅಭಿನಯಿಸಿದ ಆ ಸಿನಿಮಾ ಜನಮೆಚ್ಚುಗೆ ಪಡೆದುಕೊಂಡಿತು. ನಂತರ ಓಟಿಟಿ ಪ್ಲಾಟ್ ಫಾರ್ಮ್ ನಲ್ಲೂ ರಿಲೀಸ್ ಆಗಿ ಗಮನ ಸೆಳೆಯಿತು. ಆ ಯಶಸ್ಸಿನ ಪ್ರೋತ್ಸಾಹದಿಂದಾಗಿ ‘ಲವ್ ಮಾಕ್ಟೇಲ್ 2’ ಸಿನಿಮಾ ಘೋಷಣೆ ಮಾಡಲಾಯಿತು. ಬಹುತೇಕ ಅದೇ ತಂಡವೇ ಸೇರಿಕೊಂಡು ಸೀಕ್ವೆಲ್ ಮಾಡಿದೆ.

ನಟಿ ಮಿಲನಾ ನಾಗರಾಜ್ ಅವರು ಸೋಶಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್ ಮಾಡಿದ್ರು. ‘ಲವ್ ಮಾಕ್ಟೇಲ್ 2’ ಸಿನಿಮಾದ ರಿಲೀಸ್ ದಿನಾಂಕವನ್ನು ಡಿ.18ರಂದು ಘೋಷಿಸುವುದಾಗಿ ಅವರು ತಿಳಿಸಿದ್ರು. ಪ್ರೇಕ್ಷಕರ ಊಹೆ ಏನು ಎಂಬ ಪ್ರಶ್ನೆಯನ್ನೂ ಅವರು ಕೇಳಿದ್ರು. ಅದಕ್ಕೆ ನೆಟ್ಟಿಗರು ಹಲವು ಬಗೆಯಲ್ಲಿ ಕಮೆಂಟ್ ಮಾಡಿದ್ರು. ಬಹುತೇಕರು ಫೆ.14 ಎಂದು ಉತ್ತರ ಕೊಟ್ಟಿದ್ರು. ಅದ್ರೆ ಅವರ ಊಹೆ ತಪ್ಪಾಗಿದ್ದು, ಲವ್ ಮಾಕ್ಟೇಲ್ 2 ಚಿತ್ರ ಫೆಬ್ರವರಿ 11ಕ್ಕೆ ರಿಲೀಸ್ ಆಗಲಿದೆ.
ಶೀರ್ಷಿಕೆಯೇ ಸೂಚಿಸುವಂತೆ ಇದು ಲವ್ ಸ್ಟೋರಿ ಸಿನಿಮಾ. ಪ್ರೇಮಿಗಳಿಗೆ ಸೂಕ್ತವಾಗುವಂತಹ ಕಥೆಯನ್ನು ನಿರೀಕ್ಷಿಸಲಾಗುತ್ತಿದೆ. ಹಾಗಾಗಿ ಫೆ.14ರ ಪ್ರೇಮಿಗಳ ದಿನದಂದು ಈ ಸಿನಿಮಾ ರಿಲೀಸ್ ಆಗಬಹುದು ಎಂದು ಸಿನಿಪ್ರಿಯರು ಊಹಿಸುತ್ತಿದ್ರು. ಆದರೆ ನಿಜವಾದ ದಿನಾಂಕವನ್ನು ಮಿಲನ ನಾಗರಾಜ್ ಬಹಿರಂಗಪಡಿಸಿದ್ದಾರೆ ಫೆಬ್ರವರಿ 11, 2022 ಕ್ಕೆ ಚಿತ್ರ ಬಿಡುಗಡೆ ಆಗುತ್ತದೆ.
****