ಇತ್ತೀಚೆಗೆ ನಡೆದ ಟಾಲಿವುಡ್ ನ ಬಹುನಿರೀಕ್ಷಿತ ಸಿನಿಮಾ ಆರ್.ಆರ್.ಆರ್ ಸಿನಿಮಾದ ಪ್ರೆಸ್ ಮೀಟ್ ನಲ್ಲಿ ಮಾತನಾಡುತ್ತಾ ನಟ ಜ್ಯೂ.ಎನ್.ಟಿ.ಆರ್ ತಮ್ಮ ತಾಯಿಗೆ ಮಾತು ಕೊಟ್ಟಿರುವೆ, ತಪ್ಪಿಲ್ಲದೇ ಕನ್ನಡ ಮಾತಾಡುವೆ, ಆರ್.ಆರ್.ಆರ್ ಸಿನಿಮಾದ ಕನ್ನಡ ವರ್ಷನ್ ಗೆ ತಪ್ಪು ಇಲ್ಲದೇ ಡಬ್ಬಿಂಗ್ ಮಾಡುವೆ ಅಂತ. ಜೂ.ಎನ್.ಟಿ.ಆರ್ ತಾಯಿಗೆ ನೀಡಿದ ಮಾತಿನಂತೆ ಸಿನಿಮಾಕೆ ಅಪ್ಪಟ್ಟ ಕನ್ನಡಿಗರಂತೆ ಡಬ್ಬಿಂಗ್ ಮಾಡಿ ಮುಗಿಸಿದ್ದಾರೆ. ಇದರ ಸ್ಯಾಂಪಲ್ ಈಗಾಗ್ಲೆ ಟ್ರೇಲರ್ ನಲ್ಲಿ ನೋಡೋಕೆ ಸಿಗ್ತಿದೆ. ಇದಕ್ಕೆ ಕಾರಣ ನಮ್ಮ ಚಿಕ್ಕಬಳ್ಳಾಪುರದ ಬರಹಗಾರ ವರದರಾಜ್ ಚಿಕ್ಕಬಳ್ಳಾಪುರ.
ವರದರಾಜ್ ಚಿಕ್ಕಬಳ್ಳಾಪುರ ಮೊದಲ ಬಾರಿಗೆ ಕನ್ನಡ ಪಿಚ್ಚರ್ ಜೊತೆಗೆ ಮಾತಿಗೆ ಸಿಕ್ಕಿದ್ದರು. ವರದರಾಜ್ ಮೂಲತ: ಚಿಕ್ಕಬಳ್ಳಾಪುರದವರು. ಮಾರ್ಕೆಟಿಂಗ್ ಉದ್ಯೋಗ ಮಾಡಿಕೊಂಡಿದ್ದವರು. 2009ರಲ್ಲಿ ಕನ್ನಡದ ಸಿನಿಮಾ ಒಂದಕ್ಕೆ ಹಾಡು ಬರೆಯುವ ಮೂಲಕ ಇಂಡಸ್ಟ್ರಿಗೆ ಬಂದರು. ನಂತರ ಹಲವು ವರ್ಷಗಳ ಕಾಲ ಇಲ್ಲೇ ಅವಕಾಶಗಳಿಗಾಗಿ ಹುಡುಕಾಡಿ 2019ರಲ್ಲಿ ಸುಕುಮಾರ್ ನಿರ್ದೇಶನದ ರಂಗಸ್ಥಳಂ ಸಿನಿಮಾಕ್ಕೆ ಹಾಡು ಬರೆದರು. ಈ ಸಿನಿಮಾದ ಕನ್ನಡ ಹಾಡುಗಳು ಸೂಪರ್ ಹಿಟ್ ಅದ್ವು. ಅಲ್ಲಿಂದ ವರದರಾಜ್ ಗೆ ಬಿಡುವೇ ಇಲ್ಲ.
ಆರ್.ಆರ್.ಆರ್ ಸಿನಿಮಾ ಅಷ್ಟೆ ಅಲ್ಲ ಅಲ್ಲು ಅರ್ಜುನ್ ಅಭಿನಯದ ಪುಷ್ಪಕ್ಕೂ ಇವರದ್ದೇ ಸಾಂಗ್ಸ್ ಹಾಗೂ ಡೈಲಾಗ್ಸ್. ಪುಷ್ಪ ಸಿನಿಮಾದ ಕನ್ನಡ ಹಾಡುಗಳೂ ಕೂಡ ಈಗಾಗ್ಲೆ ಪಾಪ್ಯುಲರ್ ಆಗಿವೆ. 2 ವರ್ಷದಲ್ಲಿ ವರದರಾಜ್ ಆವರು ಬರೋಬ್ಬರಿ 70ಸಿನಿಮಾಗಳಿಗೆ ಹಾಡು ಡೈಲಾಗ್ಸ್ ಬರೆದಿದ್ದಾರೆ. ಇವುಗಳ ಪೈಕಿ ಬಹುತೇಕ ಸಿನಿಮಾಗಳು ಸೌತ್ ಇಂಡಿಯಾದ ದೊಡ್ ದೊಡ್ ಪಿಚ್ಚರ್ ಗಳೆ ಆಗಿವೆ.