ಸ್ಯಾಂಡಲ್‌ವುಡ್ ನಟ ಶ್ರೀಮುರುಳಿ ಅವರು 40 ನೇ ವರ್ಷದ ಜನ್ಮ ದಿನಾಚರಣೆಯ ಸಂಭ್ರಮದಲ್ಲಿದ್ದಾರೆ. ಅಭಿಮಾನಿಗಳು, ಸಿನಿಮಾ ತಾರೆಯಲು ಶುಭಕೋರಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ನಿರ್ದೇಶಕ ಪ್ರಶಾಂತ್ ನೀಲ್ ಅವರು ವಿಭಿನ್ನವಾಗಿ ಶುಭಾಶಯ ತಿಳಿಸುವ ಮೂಲಕವಾಗಿ ಸುದ್ದಿಯಾಗಿದ್ದಾರೆ.
ನನ್ನ ಮೊದಲ ನಾಯಕ, ನನ್ನ ಮೊದಲ ಗ್ಯಾಂಗ್‍ಸ್ಟರ್, ನನ್ನ ಮೊದಲ ಪ್ರೀತಿ. ಜನ್ಮದಿನದ ಶುಭಾಶಯಗಳು ಶ್ರೀಮುರುಳಿ ಎಂದು ಬರೆದುಕೊಂಡು ಶ್ರೀಮುರುಳಿ ಅವರ ಬ್ಲಾಕ್ ಆ್ಯಂಡ್ ವೈಟ್ ಇರುವ ಫೋಟೋನ್ನು ಟ್ವೀಟ್ ಮಾಡುವ ಮೂಲವಾಗಿ ನಿರ್ದೇಶಕ ಪ್ರಶಾಂತ್ ನೀಲ್ ವಿಭಿನ್ನವಾಗಿ ಶುಭ ಕೋರಿದ್ದಾರೆ.
ಶ್ರೀಮುರಳಿ ಬರ್ತ್‍ಡೇ ದಿನ ಅವರ ಅಭಿಮಾನಿಗಳು ಮನೆಯ ಮುಂದೆ ಜಮಾಯಿಸುತ್ತಿದ್ದರು. ಕೇಕ್ ಕತ್ತರಿಸಿ ಸಂಭ್ರಮಿಸುತ್ತಿದ್ದರು. ಅವರು ಕೂಡ ಅಭಿಮಾನಿಗಳ ಜೊತೆಗೂಡಿ ಹುಟ್ಟುಹಬ್ಬದ ಸಂಭ್ರಮದಲ್ಲಿ ಭಾಗಿಯಾಗುತ್ತಿದ್ದರು. ಆದರೆ ಪುನೀತ್ ರಾಜ್‌ಕುಮಾರ್ ಸಾವಿನಿಂದ ಇಡೀ ಕರ್ನಾಟಕಕ್ಕೆ ಸೂತಕದ ಛಾಯೆ ಆವರಿಸಿದೆ. ಶ್ರೀಮುರಳಿ ಬರ್ತ್‍ಡೇ ಆಚರಣೆ ಮಾಡಿಕೊಳ್ಳುತ್ತಿಲ್ಲ ಎಂದು ಈ ಮೊದಲೇ ಅಭಿಮಾನಿಗಳಿಗೆ ಸಂದೇಶವನ್ನು ರವಾನಿಸಿದ್ದರು.
ನನ್ನ ಪ್ರೀತಿಯ ಅಭಿಮಾನಿಗಳೇ. ಈ ಬಾರಿ ನಿಮ್ಮೊಂದಿಗೆ ನನ್ನ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳಲಾಗುವುದಿಲ್ಲ. ಕಾರಣವೇನೆಂದು ನಿಮಗೆ ಗೊತ್ತಿರುವುದೆಂದು ಭಾವಿಸುವೆ. ನಾನು ಬೆಂಗಳೂರಿನಲ್ಲೂ ಇರುವುದಿಲ್ಲ. ಸದಾ ನಿಮ್ಮ ಪ್ರೀತಿ ಹಾಗು ಆಶೀರ್ವಾದವನ್ನು ಬಯಸುವ ನಿಮ್ಮ, ಶ್ರೀಮುರಳಿ (ಅಭಿಮಾನಿಗಳ ಅಭಿಮಾನಿ) ಎಂದು ಶ್ರೀಮುರಳಿ ಟ್ವಿಟ್ಟರ್‌ನಲ್ಲಿ ತಿಳಿಸಿದ್ದರು. ಹೀಗಾಗಿ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ವಿಶ್ ಮಾಡುತ್ತಿದ್ದಾರೆ.
****