ಮದಗಜ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ರೋರಿಂಗ್ ಸ್ಟಾರ್ ಶ್ರೀಮುರಳಿ, ಸಿನಿಮಾ ಗೆದ್ದಿರುವ ಖುಷಿಯಲ್ಲಿ ಶ್ರೀಮುರಳಿ ಅಭಿಮಾನಿಗಳು ಒಟ್ಟಾರೆ ಎಲ್ಲರೂ ಸಂಭ್ರಮದಲ್ಲಿದ್ದಾರೆ. ಆದರೆ, ಇದೇ ಖುಷಿಯಲ್ಲಿರುವಾಗಲೇ ಶ್ರೀಮುರಳಿ ತಮ್ಮ ಫ್ಯಾನ್ಸ್ಗೆ ಸಂದೇಶವೊಂದನ್ನು ರವಾನೆ ಮಾಡಿದ್ದಾರೆ.
ಸ್ಟಾರ್ಗಳ ಹುಟ್ಟುಹಬ್ಬ ಅಂದರೆ, ಅಭಿಮಾನಿಗಳು ಒಂದು ವಾರದಿಂದಲೇ ಹಬ್ಬ ಆಚರಿಸುವುದಕ್ಕೆ ಸಿದ್ಧರಾಗಿ ನಿಲ್ಲುತ್ತಾರೆ. ಸೋಶಿಯಲ್ ಮೀಡಿಯಾಗಳಲ್ಲಿ ನಿಧಾನವಾಗಿ ಬರ್ತ್ ಡೇ ಸೆಲೆಬ್ರೆಟ್ ಮಾಡಲು ಆರಂಭಿಸುತ್ತಾರೆ. ಶ್ರೀಮುರಳಿ ಹುಟ್ಟುಹಬ್ಬವನ್ನೂ ಕೂಡ ಅಭಿಮಾನಿಗಳು ಭರ್ಜರಿಯಾಗಿ ಸಂಭ್ರಮಿಸಬೇಕು ಅಂತ ಕಾದು ಕೂತಿದ್ದರು. ಅಷ್ಟರೊಳಗೆ ಸ್ವತ: ಶ್ರೀಮುರಳಿ ಅಭಿಮಾನಿಗಳಿಗೆ ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದಾರೆ.
ಕಳೆದ ವರ್ಷ ರೋರಿಂಗ್ ಸ್ಟಾರ್ ಶ್ರೀಮುರಳಿ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಗಿತ್ತು. ದೂರದೂರಿನಿಂದ ಶ್ರೀಮುರಳಿ ಅಭಿಮಾನಿಗಳು ಆಗಮಿಸಿ ಬರ್ತ್ ಡೇ ಯನ್ನು ಆಚರಿಸಿದ್ದರು. ಆದರೆ, ಈ ಬಾರಿ ಶ್ರೀಮುರಳಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದೇ ಇರಲು ನಿರ್ಧರಿಸಿದ್ದಾರೆ. ಡಿಸೆಂಬರ್ 17ರಂದು ರೋರಿಂಗ್ ಸ್ಟಾರ್ ಶ್ರೀಮುರಳಿ 39ನೇ ಬರ್ತ್ಡೇಯನ್ನು ಆಚರಿಸಿಕೊಳ್ಳಬೇಕಿತ್ತು. ಹೀಗಾಗಿ ‘ಮದಗಜ’ ಯಶಸ್ಸಿನ ಖುಷಿಯಲ್ಲಿ ತೇಲಾಡುತ್ತಿದ್ದ ಅಭಿಮಾನಿಗಳ ಸಂಭ್ರಮಕ್ಕೆ ಬ್ರೇಕ್ ಬಿದ್ದಂತಾಗಿದೆ.
ಶ್ರೀಮುರಳಿ ಈ ಬಾರಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದೆ ಇರಲು ಪ್ರಮುಖ ಕಾರಣ, ಪುನೀತ್ ರಾಜ್ಕುಮಾರ್ ನಿಧನ. ಅಣ್ಣಾವ್ರ ಇಡೀ ಕುಟುಂಬ ಅಪ್ಪು ನಿಧನದ ನೋವಿನಲ್ಲಿದೆ. ಶ್ರೀಮುರಳಿ ಕೂಡ ಪವರ್ಸ್ಟಾರ್ ಅಗಲಿದ ನೋವಿನಿಂದ ಇನ್ನೂ ಹೊರಬಂದಿಲ್ಲ. ಹೀಗಾಗಿ ಇಂತಹ ಸಂದರ್ಭದಲ್ಲಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದೆ ಇರಲು ರೋರಿಂಗ್ ಸ್ಟಾರ್ ನಿರ್ಧರಿಸಿದ್ದಾರೆ. ಇದೊಂದೇ ಕಾರಣಕ್ಕೆ ಈ ಬಾರಿ ಬರ್ತ್ಡೇ ಇರುವುದಿಲ್ಲ. ನಾನು ಊರಿನಲ್ಲಿಯೂ ಇರುವುದಿಲ್ಲವೆಂದು ರೋರಿಂಗ್ ಸ್ಟಾರ್ ಅಭಿಮಾನಿಗಳಿಗೆ ಸಂದೇಶವನ್ನು ರವಾನೆ ಮಾಡಿದ್ದಾರೆ.
****