ಸಿನಿಮಾದ ಮೊದಲ ಫೋಟೋಶೂಟ್ ನಿಂದಲೂ ಒಂದಲ್ಲ ಒಂದು ಕಾರಣಕ್ಕೆ ಸುದ್ಧಿಯಾಗ್ತಾನೇ ಇರೂ ಡಿಂಪಲ್ ಕ್ವೀನ್ ರಚಿತಾ ರಾಮ್ ಹಾಗೂ ಕೃಷ್ಣ ಅಜಯ್ ರಾವ್ ಅಭಿನಯದ ರೊಮ್ಯಾಂಟಿಕ್ ಥ್ರಿಲ್ಲರ್ ʻಲವ್ ಯೂ ರಚ್ಚುʼ ಸಾಕಷ್ಟು ಕ್ಯೂರ್ಯಾಸಿಟಿ ಕ್ರಿಯೇಟ್ ಮಾಡಿದೆ. ಸಿನಿಮಾದ ಮೂರು ಸಾಂಗ್‌ಗಳು ಈಗಾಗ್ಲೆ ರಿಲೀಸ್ ಆಗಿ, ಪಾಪ್ಯುಲರ್ ಆಗಿದ್ವು. ರಿಲೀಸ್ ಆದ ಸಾಂಗ್ ಗಳಲ್ಲಿ ಮೂರಕ್ಕೆ ಮೂರು ಹಾಡುಗಳು ರೊಮ್ಯಾಂಟಿಕ್ ಹಾಡುಗಳೇ ಆಗಿದ್ವು, ಅದ್ರಲ್ಲೂ ರಿಲೀಸ್ ಆಗಿರೋ ಒಂದು ವಿಡಿಯೋ ಸಾಂಗ್‌ನಲ್ಲಿ ರಚಿತಾ ರಾಮ್ ಹಾಗೂ ಅಜಯ್ ರಾವ್ ಜೋಡಿ ನೋಡುಗರ ಮನ ಬೆಚ್ಚಗಾಗಿಸಿತ್ತು. ಮಣಿಕಾಂತ್ ಕದ್ರಿ ಮ್ಯೂಸಿಕ್ ನ ಹಾಡುಗಳು, ಸಿನಿಮಾ ಒಂದು ಮ್ಯೂಸಿಕಲ್ ರೊಮ್ಯಾಂಟಿಕ್ ಸಿನಿಮಾ ಇರಬಹುದ ಅಂತ ಯೋಚಿಸುವಂತೆ ಮಾಡುತ್ವೆ.
ಇನ್ನೂ ಇವತ್ತು ರಿಲೀಸ್ ಆಗಿರೋ ಟ್ರೇಲರ್ ನೋಡಿದಮೇಲೆ ಸಿನಿಮಾ ಒಂದು ಕ್ರೈಂ ಥ್ರಿಲ್ಲರ್ ಅನ್ನಿಸ್ತಾ ಇದೆ. ಆಕ್ಷನ್ ಪ್ಯಾಕ್ಡ್ ಸೀನ್‌ಗಳಲ್ಲಿ ಆಜಯ್ ರಾವ್ ಅಭಿನಯಿಸಿದ್ದು, ಎಂದಿನಂತೆ ರಚಿತಾ ರಾಮ್ ತಮ್ಮ ಮೈಜುಂ ಅನ್ನಿಸೋ ಆಕ್ಟಿಂಗ್‌ನ ಮೋಡಿ ಮಾಡಿದ್ದಾರೆ. ಗುರುದೇಶಪಾಂಡೆ ನಿರ್ಮಾಣ ಮಾಡಿರೋ ಸಿನಿಮಾವನ್ನ ನವ ನಿರ್ದೇಶಕ ಶಶಾಂಕ್ ರಾಜ್ ನಿರ್ದೇಶನ ಮಾಡಿದ್ದಾರೆ. ಆಗ ತಾನೆ ಮದುವೆಯಾದ ಯುವ ಜೋಡಿಗಳ ಸುತ್ತ ನಡೆಯುವ ಒಂದು ಕ್ರೈಂ ಸೀನ್‌ನ ಥ್ರಿಲ್ಲಿಂಗ್ ಆಗಿ ಕಟ್ಟಿ ಕೊಟ್ಟಿರುವ ಪ್ರಯತ್ನ ಟ್ರೇಲರ್‌ನಲ್ಲೇ ಕುತೂಹಲ ಮೂಡಿಸುತ್ತಿದೆ. ಹಾಡು ನೋಡಿ ಈ ಸಿನಿಮಾ ರೊಮ್ಯಾಂಟಿಕ್ ಅಂದುಕೊಂಡಿದ್ದ, ಚಿತ್ರರಸಿಕರಿಗೆ ಟ್ರೇಲರ್ ನೋಡಿದ ಮೇಲೆ ಇದೊಂದು ಥ್ರಿಲ್ಲರ್ ಅನ್ನಿಸ್ತಾ ಇದೆ ಹಾಗಾದ್ರೆ ಸಿನಿಮಾ ಹೊಸದೊಂದು ಅನುಭವ ಕೊಡೋದ್ರಲ್ಲಿ ಅನುಮಾನವಿಲ್ಲ.
****