ನಿನ್ನ ಬೆಂಗಳೂರಿನಲ್ಲಿ ಅಲ್ಲು ಅರ್ಜುನ್ ಅಭಿನಯದ ಬಹುನಿರೀಕ್ಷಿತ ಪುಷ್ಪ ಸಿನಿಮಾದ ಪ್ರೆಸ್ ಮೀಟ್ ನಡೀತು. ಈ ಕಾರ್ಯಕ್ರಮದಲ್ಲಿ ರಶ್ಮಿಕಾ ಮಂದಣ್ಣ ಹೇಳಿದ ಒಂದು ವಿಷಯ ಸ್ವಲ್ಪ ಬೇಜಾರು ಅನ್ನಿಸ್ತಾ ಇದೆ. ಕನ್ನಡದ ಹುಡುಗಿ ರಶ್ಮಿಕಾ ಮಂದಣ್ಣ, ಕನ್ನಡದ ನಟ ಡಾಲಿ ಧನಂಜಯ ಪುಷ್ಪ ಸಿನಿಮಾದ ಹೀರೋಯಿನ್ ಹಾಗೂ ವಿಲನ್ ಆಗಿ ನಟಿಸಿರೋದು ಖುಷಿ ವಿಷಯ. ರಶ್ಮಿಕಾ ಆ್ಯಕ್ಟಿಂಗ್ ಬಗ್ಗೆ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಮಾತಾಡ್ತಾರೆ ಅಂದ್ರೆ ಕನ್ನಡಿಗರು ಖುಷಿ ಪಡೋ ವಿಷಯ, ಡಾಲಿ ಪುಷ್ಪ ಸಿನಿಮಾದ ಪ್ರೀರಿಲೀಸ್ ಇವೆಂಟ್ ನಲ್ಲಿ ಕನ್ನಡದಲ್ಲಿ ಮಾತಾಡ್ತಾರೆ ಅಂದ್ರೆ ಅದು ನಿಜಕ್ಕೂ ಕನ್ನಡದ ನಟರ ಬೆಳೆದಿದ್ದಾರೆ ಈಗ ಅನ್ನೋದು ಹೆಮ್ಮೆ ಅನ್ಸುತ್ತೆ.
ಈ ಇಬ್ಬರು ಕನ್ನಡಿಗರು ತೆಲುಗಿನ ಬಹುನಿರೀಕ್ಷಿತ ಸಿನಿಮಾದಲ್ಲಿ ನಟಿಸಿದ್ರು. ಈ ಇಬ್ಬರು ಕನ್ನಡಿಗರು ಕನ್ನಡ ಮಾತಾಡೋಕೆ ಮೂಲೇಲಿ ಕೂರಬೇಕಾಯ್ತಾ ಅನ್ನೋ ಬೇಸರ. ಆದ್ರೆ ನಾಲ್ಕಾರು ಭಾಷೆಲಿ ನಟಿಸ್ತಿರೋ..ಮೊದಲೇ ಅರ್ಧಂಬರ್ಧ ಕನ್ನಡ ಕಲಿತಿರೋ ರಶ್ಮಿಕಾ ಮಂದಣ್ಣ ಒಂದು ಕಡೆ ಕೂತು ಮಾತಾಡ್ತಿದ್ವಿ ಅಂತ ಹೇಳೋ ಕಡೆ ಹೀಗಂದ್ರಾ ಗೊತ್ತಿಲ್ಲ. ಆದ್ರೂ ಅವರು ಹೇಳಿದಂತೆ ಮೂಲೇಲಿ ಕೂತು ರಶ್ಮಿಕಾ ಹಾಗೂ ಡಾಲಿ ಕನ್ನಡ ಮಾತಾಡಿದ್ರೆ. ತೆಲುಗು ಇಂಡಸ್ಟ್ರೀಯಲ್ಲಿ ಕನ್ನಡಿಗರಿಗಿರೋ ಬೆಲೆ ಗೊತ್ತಾಗುತ್ತೆ. ಆದ್ರೂ ಕನ್ನಡಿಗರ ಕಲೆಗೆ ಸಿಗ್ತಾ ಇರೋ ಬೆಲೆ ಕನ್ನಡಕ್ಕೂ ಸಿಗುತ್ತೆ ಅನ್ನೋ ನಂಬಿಕೆ ಮಾತ್ರ ಇನ್ನೂ ಜೀವಂತವಾಗಿದೆ.