29.4 C
Bengaluru
Sunday, February 5, 2023
spot_img

ಪಾರ್ಟ್ 2 ಗೆ ನಾನೆ ಕನ್ನಡದಲ್ಲಿ ಡಬ್ಬಿಂಗ್ ಮಾಡುತ್ತೇನೆ ‘ಪುಷ್ಪ’ ಪ್ರೆಸ್ ಮೀಟ್ ನಲ್ಲಿ ಐಕಾನ್ ಸ್ಟಾರ್..!

ಪುಷ್ಪ’ ಸಿನಿಮಾ ಡಿಸೆಂಬರ್​ 17ರಂದು ತೆರೆಗೆ ಬರುತ್ತಿದೆ. ಈ ಚಿತ್ರಕ್ಕೆ ಈಗಾಗಲೇ ಸಾಕಷ್ಟು ಪ್ರಚಾರ ನೀಡಲಾಗಿದೆ. ಹೈದರಾಬಾದ್​, ಚೆನ್ನೈ ಮೊದಲಾದ ಕಡೆಗಳಲ್ಲಿ ಚಿತ್ರದ ಪ್ರಚಾರ ಕಾರ್ಯ ನಡೆಯುತ್ತಿದೆ. ಈಗ ಬೆಂಗಳೂರಿಗೆ ಸಿನಿಮಾ ತಂಡ ಆಗಮಿಸಿದೆ. ಈ ವೇಳೆ ಚಿತ್ರತಂಡ ಸಿನಿಮಾ ಬಗ್ಗೆ ಒಂದಷ್ಟು ಮಾಹಿತಿ ಹಂಚಿಕೊಂಡಿದೆ. ರಶ್ಮಿಕಾ ಮಂದಣ್ಣ, ಅಲ್ಲು ಅರ್ಜುನ್, ಧನಂಜಯ್  ಮೊದಲಾದವರು ಆಗಮಿಸಿದ್ದು ವಿಶೇಷವಾಗಿತ್ತು.

ಬೆಂಗಳೂರಿನಲ್ಲಿ ಸಿನಿಮಾ ಪ್ರೆಸ್‌ ಮೀಟ್‌ನಲ್ಲಿ ಮಾತನಾಡಿದ ರಶ್ಮಿಕಾ, ನಾನು ಅಲ್ಲು ಅರ್ಜುನ್ ಸರ್ ಜೊತೆ ನಟಿಸಿದ್ದು ತುಂಬಾ ಖುಷಿ ಕೊಟ್ಟಿದೆ. ಅಲ್ಲು ಅರ್ಜುನ್ ಸರ್ ಗೆ ಇರೋ ಹೆಸರಿಗೆ ನಾನು ಫುಲ್ ಫಿಲ್ ಮಾಡುವಷ್ಡು ಕೆಲಸ ಮಾಡಿದ್ದೇನೆ. ಡಾಲಿ ಧನಂಜಯ್ ಜೊತೆ ಕೂಡ ನಟಿಸಿದ್ದೇನೆ. ಸೆಟ್ ನಲ್ಲಿ ಕನ್ನಡದಲ್ಲಿ ಮಾತನಾಡುತ್ತಿದ್ದೆ ಎಂದಿದ್ದಾರೆ ರಶ್ಮಿಕಾ. ಟಾಲಿವುಡ್‌ನ ಬಹುನಿರೀಕ್ಷಿತ ಸಿನಿಮಾ ಪುಷ್ಪ ಚಿತ್ರದ ಪ್ರಚಾರಕ್ಕಾಗಿ ಚಿತ್ರತಂಡ ಬೆಂಗಳೂರಿಗೆ ಬಂದಿದೆ. ಪುಷ್ಪ  ಸುಕುಮಾರ್ ನಿರ್ದೇಶನದ ಅಲ್ಲು ಅರ್ಜುನ್ ಅಭಿನಯದ ಬಹುನಿರೀಕ್ಷಿತ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಅಲ್ಲು ಅರ್ಜನ್ ,ರಶ್ಮಿಕಾ ಮಂದಣ್ಣ, ಡಾಲಿ ಧನಂಜಯ್ ಭಾಗಿಯಾಗಿದ್ದಾರೆ.

ಪುಷ್ಪ ಡಿ.17 ಕ್ಕೆ ವಿಶ್ವದಾದ್ಯಂತ ಅದ್ದೂರಿಯಾಗಿ ರಿಲೀಸ್ ಆಗಲಿದೆ. ಹೀಗಾಗಿ ಬೆಂಗಳೂರಿನ ಖಾಸಗಿ ಹೊಟೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸುತ್ತಿದ್ದು ಪುಷ್ಪ ಚಿತ್ರ ಎರಡು ಭಾಗಗಳಲ್ಲಿ ಬಿಡುಗಡೆಯಾಗುತ್ತಿದೆ. ಇದೇ ವಾರ ಮೊದಲನೆ ಭಾಗ ರಿಲೀಸ್ ಆಗಲಿದೆ. ಹೀಗಾಗಿ ಬೆಂಗಳೂರಿನಲ್ಕಿ ಪುಷ್ಪ ಸಿನಿಮಾ ಪ್ರಚಾರ ಕಾರ್ಯಕ್ರಮ ನಡೆದಿದೆ.

ಪ್ರೆಸ್‌ ಮೀಟ್‌ನಲ್ಲಿ ಮಾತನಾಡಿದ ಧನಂಜಯ್, ಅಲ್ಲು ಅರ್ಜುನ್ ಜೊತೆ ಕೆಲಸ ಮಾಡಿದ್ದು ತುಂಬಾ ಖುಷಿ‌ ಆಯ್ತು. ಆರ್ಯ ಸಿನಿಮಾದಿಂದ ಅಲ್ಲು ಅರ್ಜುನ್ ಹಾಗು ಸುಕುಮಾರ್ ರನ್ನ ಫಾಲೋ ಮಾಡಿಕೊಂಡು ಬಂದಿದ್ದೇನೆ. ಪುಷ್ಪ ಆಗಿ ಅಲ್ಲು ಅರ್ಜುನ್ ಹಾಗು ಶ್ರೀವಲ್ಲಿಯಾಗಿ ರಶ್ಮಿಕಾರನ್ನ ನಾನು ಸೆಟ್ಟಲ್ಲಿ ನೋಡುತ್ತಿದ್ದೆ. ಇಬ್ಬರ 100% ಎಫರ್ಟ್ ನೋಡುತ್ತಿದ್ದೆ. ಸಿನಿಮಾ ಮಾಡಿದ್ದು ತುಂಬಾ ಎಂಜಾಯ್ ಮಾಡಿದ್ದೇವೆ. ಅಲ್ಲು ಅರ್ಜುನ್ ಗೆ ಐಕಾನ್ ಸ್ಟಾರ್ ಅಂತ ಹೆಸರು ಇಟ್ಡಿದ್ದು ಕರೆಕ್ಟ್ ಆಗಿದೆ ಎಂದಿದ್ದಾರೆ.

ಪ್ರೆಸ್‌ಮೀಟ್‌ನಲ್ಲಿ ಮಾತನಾಡಿದ ಅಲ್ಲು ಅರ್ಜುನ್, 18 ವರ್ಷ ಇದ್ದಾಗ ನಾನು ಬೆಂಗಳೂರಿಗೆ ಬಂದಿದ್ದೆ. ಆಗ ನನ್ನ ಸಿನಿಮಾ ರಿಲೀಸ್ ಆಗುತ್ತೆ ಅಂತ ನಾನು ಅನ್ಕೊಂಡಿರಲಿಲ್ಲ. ಈಗ ಕರ್ನಾಟಕದಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ. ಧನಂಜಯ್ ಸಿನಿಮಾದಲ್ಲಿ ನಟಿಸಿದ್ದಾರೆ. ರಶ್ಮಿಕಾ ಮಂದಣ್ಣ ನ್ಯಾಷನಲ್ ಕ್ರಶ್. ಕನ್ನಡದಿಂದ ಚಿತ್ರರಂಗಕ್ಕೆ ಬಂದ ರಶ್ಮಿಕಾ ಇವತ್ತು ದೇಶಾದ್ಯಂತ ಹೆಸರು ಮಾಡಿದ್ದಾರೆ. ಇದು ಕನ್ನಡಿಗರಿಗೆ ಹೆಮ್ಮೆ ವಿಚಾರ ಎಂದಿದ್ದಾರೆ. ಈ‌ ಸಿನಿಮಾಗೆ ಡಬ್ಬಿಂಗ್ ಮಾಡಿದ ಪ್ರತಿಯೊಬ್ಬರಿಗೂ ಧನ್ಯವಾದ. ದೇವಿ ಶ್ರೀ ಪ್ರಸಾದ್ ಅದ್ಭುತವಾದ ಮ್ಯೂಸಿಕ್ ಕೊಟ್ಟಿದ್ದಾರೆ. ಕರ್ನಾಟಕದಲ್ಲಿರೋ ನನ್ನ ಅಭಿಮಾನಿಗಳಿಗೆ ಧನ್ಯವಾದಗಳು ಎಂದಿದ್ದಾರೆ.

ಪುನೀತ್ ರಾಜ್ ಕುಮಾರ್ ಬಗ್ಗೆ ಮುಖ್ಯವಾಗಿ ಮಾತನಾಡಲೇ ಬೇಕು. ಪುಷ್ಪ ರಿಲೀಸ್ ಟೈಂ ನಲ್ಲಿ ನಾನು ಪುನೀತ್ ಮನೆಗೆ ಹೋಗೋದು ಸರಿ ಅಲ್ಲ. ನಾನು ಪುಷ್ಪ ಸಿನಿಮಾ ರಿಲೀಸ್ ಆದ ನಂತರ ಮತ್ತೆ ಬೆಂಗಳೂರಿಗೆ ಬಂದು ಅಪ್ಪು ಸರ್ ಮನೆಗೆ ಹೋಗುತ್ತೇನೆ ಎಂದಿದ್ದಾರೆ. ಅವರ ಕುಟುಂಬ ಕ್ಕೆ ದೇವರು ಶಕ್ತಿ ನೀಡಬೇಕು. ನಾನು ಕನ್ನಡದಲ್ಲಿ ಡಬ್ಬಿಂಗ್ ಮಾಡಬೇಕು ಅಂದುಕೊಂಡಿದ್ದೆ ಆದರೆ ಟೈಂ ಸಿಗಲಿಲ್ಲ.. ಹೀಗಾಗಿ ಬೇರೆಯವರು ಡಬ್ಬಿಂಗ್ ಮಾಡಿದ್ದಾರೆ. ಪಾರ್ಟ್ 2 ಗೆ ನಾನೆ ಕನ್ನಡದಲ್ಲಿ ಡಬ್ಬಿಂಗ್ ಮಾಡುತ್ತೇನೆ ಎಂದಿದ್ದಾರೆ.

ಅಲ್ಲು ಅರ್ಜುನ್​ ‘ಪುಷ್ಪ’ ಸಿನಿಮಾ ಮೂಲಕ ಮತ್ತೆ ತೆರೆಮೇಲೆ ಬರೋಕೆ ಸಿದ್ಧರಾಗಿದ್ದಾರೆ. ತೆಲುಗಿನ ಖ್ಯಾತ ನಿರ್ದೇಶಕ ಸುಕುಮಾರ್​ ‘ಪುಷ್ಪ’ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ‘ಪುಷ್ಪ’ ಚಿತ್ರ ಕಾಡಿನ ಹಿನ್ನೆಲೆ ಹೊಂದಿದೆ. ಶೇಷಾಚಲಂನ ಅರಣ್ಯದಲ್ಲಿ ನಡೆಯುತ್ತಿದ್ದ ರಕ್ತ ಚಂದನದ ಕಳ್ಳ ಸಾಗಾಣಿಕೆ ಬಗ್ಗೆ ಈ ಸಿನಿಮಾದಲ್ಲಿ ಹೇಳಲಾಗುತ್ತಿದೆ. ಚಿತ್ರದಲ್ಲಿ ಅಲ್ಲು ಅರ್ಜುನ್​ ಟ್ರಕ್​ ಡ್ರೈವರ್​ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಡಾಲಿ ಧನಂಜಯ್ ಪುಷ್ಪಾ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಜಾಲಿ ರೆಡ್ಡಿ ಎಂಬ ಪಾತ್ರದಲ್ಲಿ ಅಭಿನಯಿಸಿದ್ದಾರೆ.

****

Related Articles

Stay Connected

10,000FansLike
15,000FollowersFollow
5,000FollowersFollow
100,000SubscribersSubscribe

Latest Articles