ಇದೇ ಡಿಸೆಂಬರ್ 24ಕ್ಕೆ ತೆರೆಗೆ ಬರ್ತಾ ಇರೋ ಡಾಲಿ ಧನಂಜಯ ಹಾಗೂ ಅಮೃತ ಐಯಂಗಾರ್ ಅಭಿನಯದ ಬಡವ ರಾಸ್ಕಲ್ ಪಿಚ್ಚರ್ ಟೀಮ್ ನ ವಿಶಿಷ್ಟ ಪ್ರಚಾರದ ಟೆಕ್ನಿಕ್ ನೋಡಿದ್ದ ಫ್ಯಾನ್ಸ್ ಗೆ. ಟ್ರೇಲರ್ ನೋಡಿದ ಮೇಲಂತೂ ಸಿನಿಮಾ ನೋಡ್ಲೇ ಬೇಕು ಅಂತ ಫಿಕ್ಸ್ ಆಗಿದ್ದಾರೆ. ಈ ನಡುವೆ ಕನ್ನಡ ಪಿಚ್ಚರ್ ವಿನೂತನವಾಗಿ ಬಡವ ರಾಸ್ಕಲ್ ಪ್ರಮೋಷನ್ ಗೆ ಪ್ರಯತ್ನಿಸಿದ್ದು. ನೋಡುಗರು ಶಹಬಾಶ್ ಅಂತಿದ್ದಾರೆ.
ಸಾಮಾನ್ಯ ಆಟೋ ಡ್ರೈವರ್ ಆಗಿ ಡಾಲಿ ಧನಂಜಯ.. ತಮ್ಮ ಸಿನಿಮಾಗಳ ಬಗ್ಗೆ, ಆಟೋಡ್ರೈವರ್ ಗಳ ಬಗ್ಗೆ, ಕನ್ನಡ ಸಿನಿಮಾಗಳ ಬಗ್ಗೆ ಸಾಮಾನ್ಯ ಜನರ ಜೊತೆ ಆಟೋದಲ್ಲಿ ಸಾಗ್ತಾ ರಿಯಾಲಿಟಿ ಏನು ಅನ್ನೋದನ್ನ ತಿಳಿಯೋ ಪ್ರಯತ್ನ ಮಾಡಿದ್ದಾರೆ. ಡಾಲಿಯ ಅದೃಷ್ಟವೋ ಏನೋ ಡಾಲಿಗೆ ಸಿಕ್ಕವರಲ್ಲಿ ಹೆಚ್ಚಿನ ಹೆಚ್ಚಿನ ಜನ ಕಾಲೇಜು ಯುವಕರೇ ಆಗಿದ್ದು, ಡಾಲಿ ಜೊತೆಗಿನ ಆಟೋ ಪ್ರಯಾಣ ತಮ್ಮ ಲೈಫ್ ಟೈಮ್ ನ ಬೆಸ್ಟ್ ಮೆಮೋರಿ ಅಂದುಕೊಂಡ್ರೆ. ಎಪಿಸೋಡ್ ನೋಡ್ತಿರೋ ಎಷ್ಟೋ ಜನಕ್ಕೆ ಈ ಛಾನ್ಸ್ ನಮ್ಗೆ ಸಿಗಲಿಲ್ಲವೆಲ್ಲಾ ಅಂದುಕೊಳ್ತಾ ಇದ್ದಾರೆ.
ಹಾಡು, ಟ್ರೇಲರ್ ನಿಂದ ಗಮನ ಸೆಳೆದಿರೋ ಬಡವ ರಾಸ್ಕಲ್ ನ ಈ ಹೊಸ ಪ್ರಮೋಷನ್ ಪ್ರಯೋಗ ಕನ್ನಡ ಸಿನಿರಸಿಕರ ಮನದಾಳವನ್ನ ಅರಿಯುವಲ್ಲಿ ಸಹಾಯ ಮಾಡಿದಂತಾಗಿದೆ.ಇದುವರೆಗೂ ಈ ಸೀರಿಸ್ ನ ಒಟ್ಟು 2 ಪ್ರೋಮೋ ಹಾಗೂ 2 ಎಪಿಸೋಡ್ ಗಳು ಅಪ್ ಲೋಡ್ ಆಗಿದ್ದು ಉಳಿದ ಎಪಿಸೋಡ್ ಗಳು ಇಷ್ಟ್ರಲ್ಲೆ ಪ್ರೀಮಿಯರ್ ಆಗಲಿದ್ದು ನೋಡಲು ಮರೆಯದಿರಿ. ಜೊತೆಗೆ ಮುಂದಿನ ವಾರ ರಿಲೀಸ್ ಆಗ್ತಾ ಇರೋ ಸಿನಿಮಾ ನೋಡಲು ಮರೆಯದಿರಿ..
****