ಟಾಲಿವುಡ್ ನ ಬಹುನಿರೀಕ್ಷಿತ ಸಿನಿಮಾ ಪುಷ್ಪ ಚಿತ್ರದ ಹೈಪ್ ಜೋರಾಗಿದ್ದು ಪುಷ್ಪ’ ಸಿನಿಮಾ ಡಿಸೆಂಬರ್ 17ರಂದು ತೆರೆಗೆ ಬರುತ್ತಿದೆ. ಇಂದು (ಡಿ.15) ಬೆಂಗಳೂರಿನಲ್ಲಿ ಚಿತ್ರದ ಪ್ರೆಸ್ ಮೀಟ್ ನಡೆದಿದೆ. ಪುಷ್ಪ ಸುಕುಮಾರ್ ನಿರ್ದೇಶನದ ಅಲ್ಲು ಅರ್ಜುನ್ ಅಭಿನಯದ ಬಹುನಿರೀಕ್ಷಿತ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಅಲ್ಲು ಅರ್ಜನ್ ,ರಶ್ಮಿಕಾ ಮಂದಣ್ಣ, ಡಾಲಿ ಧನಂಜಯ್ ಭಾಗಿಯಾಗಿದ್ರು.
ಪುಷ್ಪ ಚಿತ್ರದ ಕುರಿತು ಮಾತನಾಡಿದ ಅಲ್ಲು ಅರ್ಜುನ್ ನಂತರ ಪುನೀತ್ ರಾಜಕುಮಾರ್ ಅವರನ್ನು ಸ್ಮರಿಸಿದರು.ಪುನೀತ್ ರಾಜ್ ಕುಮಾರ್ ಬಗ್ಗೆ ಮುಖ್ಯವಾಗಿ ಮಾತನಾಡಲೇ ಬೇಕು. ಪುಷ್ಪ ರಿಲೀಸ್ ಟೈಂ ನಲ್ಲಿ ನಾನು ಪುನೀತ್ ಮನೆಗೆ ಹೋಗೋದು ಸರಿ ಅಲ್ಲ. ನಾನು ಪುಷ್ಪ ಸಿನಿಮಾ ರಿಲೀಸ್ ಆದ ನಂತರ ಮತ್ತೆ ಬೆಂಗಳೂರಿಗೆ ಬಂದು ಅಪ್ಪು ಸರ್ ಮನೆಗೆ ಹೋಗುತ್ತೇನೆ ಎಂದಿದ್ದಾರೆ. ಅವರ ಕುಟುಂಬ ಕ್ಕೆ ದೇವರು ಶಕ್ತಿ ನೀಡಬೇಕು.ಎಂದರು.
ನಾನು ಕನ್ನಡದಲ್ಲಿ ಡಬ್ಬಿಂಗ್ ಮಾಡಬೇಕು ಅಂದುಕೊಂಡಿದ್ದೆ ಆದರೆ ಟೈಂ ಸಿಗಲಿಲ್ಲ.. ಹೀಗಾಗಿ ಬೇರೆಯವರು ಡಬ್ಬಿಂಗ್ ಮಾಡಿದ್ದಾರೆ. ಪಾರ್ಟ್ 2 ಗೆ ನಾನೆ ಕನ್ನಡದಲ್ಲಿ ಡಬ್ಬಿಂಗ್ ಮಾಡುತ್ತೇನೆ ಎಂದಿದ್ದಾರೆ.
****