ಸ್ಯಾಂಡಲ್ವುಡ್ನ ತಾರಾ ಜೋಡಿ ರಾಧಿಕಾ ಪಂಡಿತ್ ಹಾಗೂ ಯಶ್ ಎಂದರೆ ಅಭಿಮಾನಿಗಳಿಗೆ ಅಚ್ಚುಮೆಚ್ಚು. ಅದರಲ್ಲೂ ರಾಧಿಕಾ ಪಂಡಿತ್ ತಮ್ಮ ಪುಟಾಣಿ ಮಕ್ಕಳ ತುಂಟಾಟದ ದೃಶ್ಯಗಳನ್ನು ಹಂಚಿಕೊಳ್ಳುತ್ತಾ, ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ.
ಇಂದು (ಡಿಸೆಂಬರ್ 14) ಹೊಸ ವಿಡಿಯೋ ತುಣುಕೊಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಐರಾ ಯಶ್ ಹಾಗೂ ಯಥರ್ವ್ ಜೊತೆಯಾಗಿ ಕುಳಿತಿದ್ದಾರೆ. ಐರಾ ಸ್ನ್ಯಾಕ್ಸ್ ತಿನ್ನುತ್ತಿದ್ದು, ಅದನ್ನು ತಮ್ಮ ಯಥರ್ವನಿಗೂ ಕೊಡಲು ಹೋಗಿದ್ದಾಳೆ. ಆಗ ರಾಧಿಕಾ ಪಂಡಿತ್ ಪುತ್ರಿಯನ್ನು ತಡೆದಿದ್ದಾರೆ. ಆಗ ಐರಾ ಪ್ರೀತಿಯಿಂದ ಯಥರ್ವ್ನನ್ನು ಮುದ್ದುಮಾಡಿದ್ದಾಳೆ. ಈ ಸುಂದರ ವಿಡಿಯೋವನ್ನು ರಾಧಿಕಾ ಪಂಡಿತ್ ಸೆರೆಹಿಡಿದು ಶೇರ್ ಮಾಡಿದ್ದಾರೆ. ಪುಟಾಣಿ ಮಕ್ಕಳ ಚಟುವಟಿಕೆ ಅಭಿಮಾನಿಗಳ ಮೊಗದಲ್ಲಿ ಸಂತಸ ಮೂಡಿಸಿದ್ದು, ಮೆಚ್ಚುಗೆ ಸೂಚಿಸುತ್ತಿದ್ದಾರೆ.
****