ಸಾಂಡಲ್ ವುಡ್ ನಲ್ಲಿ ಇವರು ಸ್ಪರ್ಶ ರೇಖಾ ಅಂತಲೇ ಫೇಮಸ್. ಸ್ಯಾಂಡಲ್ ವುಡ್ ನಲ್ಲಿ ಇವರಿಗೆ ದೊಡ್ಡ ಬ್ರೇಕ್ ತಂದುಕೊಟ್ಟದ್ದು ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ ಸ್ಪರ್ಶ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಹಿಟ್ ಆಗಿತ್ತು. ನಂತರ ನಟಿ ರೇಖಾ ಕೆಲವು ಸಿನಿಮಾಗಳಲ್ಲಿ ಅಭಿನಯಿಸಿದ್ರು. ಮದುವೆ ಆದ ಮೇಲೆ ನಟನೆಯಿಂದ ದೂರವೇ ಉಳಿದಿದ್ದ ರೇಖಾ ಮತ್ತೆ ಸ್ಯಾಂಡಲ್ ವುಡ್ ಗೆ ಕಂಬ್ಯಾಕ್ ಆಗಿದ್ದು ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಡಾಲಿ ಧನಂಜಯ್ ಅಭಿನಯದ , ಶಂಕರ್ ಗುರು ನಿರ್ದೇಶನದ ಬಹು ನಿರೀಕ್ಷೆಯ ‘ಬಡವ ರಾಸ್ಕಲ್’ ಚಿತ್ರದಲ್ಲಿ ನಟಿ ರೇಖಾ ಅವರು ಕೂಡ ಅಭಿನಯಿಸಿದ್ದಾರೆ. ನೆನ್ನೆ ನಡೆದ ಬಡವ ರಾಸ್ಕಲ್ ಚಿತ್ರದ ಟ್ರೇಲರ್ ಲಾಂಚ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ರೇಖಾ ನನಗೆ ನಾಲ್ಕು ಕತ್ತೆ ವಯಸ್ಸಾಗಿದೆ ಎಂದರು. ಮಾತು ಮುಂದುವರೆಸಿ ನನ್ನ ಸಿನಿಮಾ ಕೆರಿಯರ್ ನಲ್ಲಿ ನನಗೆ ಅತ್ಯಂತ ಖುಷಿಕೊಟ್ಟ ಪಾತ್ರ ನನಗೆ ಈ ಅವಕಾಶ ನೀಡಿದಕ್ಕಾಗಿ ನಿರ್ದೇಶಕರಿಗೆ ಮತ್ತು ಡಾಲಿ ಧನಂಜಯ್ ಅವರಿಗೆ ಥ್ಯಾಂಕ್ಸ್ ತಿಳಿಸುತ್ತೇನೆ ಎಂದರು.
ಆದರೆ ಬಡವ ರಾಸ್ಕಲ್ ಚಿತ್ರದಲ್ಲಿ ಅವರ ಪಾತ್ರದ ಬಗ್ಗೆ ಗುಟ್ಟು ಬಿಟ್ಟುಕೊಡದ ರೇಖಾ ನಾನು ಸಿನಿಮಾದಲ್ಲಿ ಯಾವ ಪಾತ್ರ ಮಾಡಿದ್ದೇನೆ ಎಂದು ನೀವೆಲ್ಲರು ಸಿನಿಮಾದಲ್ಲೆ ನೋಡಬೇಕು ಎಂದು ತಮ್ಮ ಪಾತ್ರದ ಬಗ್ಗೆ ಮತ್ತಷ್ಟು ಕ್ಯೂರಿಯಾಸಿಟಿ ಹುಟ್ಟಿಸಿದರು. ಡಿಸೆಂಬರ್ 24 ಕ್ಕೆ ರಿಲೀಸ್ ಆಗುತ್ತಿರುವ ಬಡವ ರಾಸ್ಕಲ್ ನಿರೀಕ್ಷೆ ಹುಟ್ಟಿಸಿದ್ದು ಎಲ್ಲರೂ ನೋಡಲೇಬೇಕಾದ ಸಾಮಾನ್ಯ ವ್ಯಕ್ತಿಯ ಸಿನಿಮಾ ಎಂದು ಡಾಲಿ ಧನಂಜಯ್ ಹೇಳಿದ್ದಾರೆ.
****