2021 ಕೊರೊನಾ ಕಾರಣಕ್ಕೆ ಎಲ್ಲಾ ವರ್ಗದ ಜನರಂತೆ, ಎಲ್ಲ ಉದ್ಯಮದಂತೆ ಚಿತ್ರೋದ್ಯಮ ಕೂಡ ಗಳಿಸಿದ್ದಕ್ಕಿಂತ ಕಳ್ಕೊಂಡಿದ್ದೇ ಹೆಚ್ಚು. ವರ್ಷದ ಬಹುತೇಕ ತಿಂಗಳುಗಳು ಥಿಯೇಟರ್ ತೆರೆಯದೇ ಸಿನಿಮಾ ತೆರೆಕಾಣದೇ ಇಂಡಸ್ಟ್ರಿ ಸೊರಗಿದೆ. ಆದ್ರೆ ರಿಲೀಸ್ ಆದ ಸಿನಿಮಾಗಳ ಪೈಕಿ ಡಾಲಿ ಧನಂಜಯ ಮುಟ್ಟಿದೆಲ್ಲಾ ಸೂಪರ್ ಹಿಟ್

ಡಾಲಿ ಧನಂಜಯ ನಟಿಸಿದ ಪೊಗರು ಸಿನಿಮಾ ವರ್ಷದ ಆರಂಭದಲ್ಲಿ ಫೆಬ್ರವರಿಯಲ್ಲಿ ರಿಲೀಸ್ ಆಗಿ ದೊಡ್ಡ ಪಡಕೊಂಡಿತ್ತು, ನಂತ್ರ ತೆರೆಗೆ ಬಂದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಥಿಯೇಟರ್ ನಲ್ಲಿ ಬಿಗ್ ಓಪನಿಂಗ್ ಜೊತೆಗೆ ಓಟಿಟಿಯಲ್ಲೂ ಕಮಾಲ್ ಮಾಡಿತ್ತು.
2 ನೇ ಲಾಕ್ ಡೌನ್ ಬಳಿಕ ರಿಲೀಸ್ ಆದ ದುನಿಯಾ ವಿಜಯ್ ಫಸ್ಟ್ ಟೈಮ್ ಆಕ್ಷನ್ ಕಟ್ ಹೇಳಿದ ಸಲಗ ಕೂಡ ಬ್ಲಾಕ್ ಬಸ್ಟರ್ ಹಿಟ್. ಇದಾದ ನಂತ್ರ ಓಟಿಟಿಯಲ್ಲಿ ರಿಲೀಸ್ ಆದ ‘ರತ್ನನ್ ಪ್ರಪಂಚ’ದ ವರ್ಷದ ಫೇವರಿಟ್ ಸಿನಿಮಾ ಆಗಿ ಹೋಯ್ತು. ಈಗಲೂ ಸಿನಿಮಾ ಬಗ್ಗೆ ಇಂಡಸ್ಟ್ರಿ ಒಳಗೂ ಹೊರಗೂ ಟಾಕ್ಸ್ ಇದೆ.
ಇನ್ನೂ ಈ ವಾರ ಅಲ್ಲು ಅರ್ಜುನ್ ಜೊತೆ ಡಾಲಿ ನಟಸಿರೋ ಪುಷ್ಪ ತೆರೆಗೆ ಬರ್ತಾ ಇದೆ. ಈಗಾಗ್ಲೆ ಸಿನಿಮಾಕ್ಕೆ ಸಿಕ್ಕಾಪಟ್ಟೆ ಹೈಪ್ ಇದ್ದು. ಪಕ್ಕಾ ಹಿಟ್..! ಇನ್ನೂ ನಿನ್ನೆ ಡಾಲಿ ನಿರ್ಮಾಣದ ಮೊದಲ ಸಿನಿಮಾ ‘ಬಡವ ರಾಸ್ಕಲ್’ ಟ್ರೇಲರ್ ರಿಲೀಸ್ ಆಗಿದೆ.ಮುಂದಿನ ವಾರ ಡಿ.24ಕ್ಕೆ ತೆರೆಗೆ ಬರ್ತಿದೆ. ಟ್ರೇಲರ್ ಹಾಗೂ ಸಾಂಗ್ ಗೆ ಸಿಕ್ಕಿರೋ ರಸ್ಪಾನ್ಸ್ ನೋಡಿದ್ರೆ. ಈ ಪಿಚ್ಚರ್ ಕೂಡ ಹಿಟ್ಟೇ.. ಅಲ್ಲಿಗೆ ಈ ವರ್ಷದ ಸೂಪರ್ ಹಿಟ್ ಸ್ಟಾರ್ ಅದು ಡಾಲಿನೇ..!